ಲಂಡನ್, ಮೇ 28: ತನ್ನ ವಿದೇಶಾಂಗ ನೀತಿಯಲ್ಲಿ ನೀಡಲಾಗುವ ಆದ್ಯತೆಯಲ್ಲಿ ಮೊದಲ ಸ್ಥಾನವನ್ನು ಪಾಕಿಸ್ತಾನಕ್ಕೆ ನೀಡಲು ನೂತನ ಬ್ರಿಟನ್ ಸರಕಾರ ಸಮ್ಮತಿಸಲಿದೆ ಎಂದು ಹೇಳಿರುವ ಬ್ರಿಟನ್‌ನ ನೂತನ ವಿದೇಶಾಂಗ ಕಾರ್ಯದರ್ಶಿ ವಿಲಿಯಂ ಹೇಗ್, ಮುಂದಿನ ಕೆಲವು ವಾರಗಳ ಅವಧಿಯೊಳಗೆ ಇಸ್ಲಾಮಾ ಬಾದ್‌ಗೆ ಭೇಟಿ ನೀಡಲಿರುವುದಾಗಿಯೂ ತಿಳಿಸಿದ್ದಾರೆ.
‘‘ಇನ್ನೊಂದು ರಾಷ್ಟ್ರವು ಯಾವ ರೀತಿ ದ್ವಿಪಕ್ಷೀಯ ಸಂಬಂಧವನ್ನು ಇಟ್ಟುಕೊಳ್ಳಬೇಕು ಎಂದು ಹೇಳಿಕೊಡುವುದು ನಮ್ಮ ಕೆಲಸವಲ್ಲ. ಭಾರತ ಹಾಗೂ ಪಾಕಿಸ್ತಾನಗಳು ಹೇಗೆ ದ್ವಿಪಕ್ಷೀಯ ಸಂಬಂಧವನ್ನು ನಿರ್ವಹಿಸಬೇಕೆಂಬು ದನ್ನು ನಾವು ಹೇಳಿಕೊಡಲಾರೆವು’’ ಎಂದು ಭಾರತ ಹಾಗೂ ಪಾಕಿಸ್ತಾನ ನಡುವಣ ಬಿಕ್ಕಟ್ಟು ಶಮನಗೊಳಿಸುವಲ್ಲಿ ಬ್ರಿಟನ್ ಯತ್ನಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ವಿಲಿಯಂ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
‘‘ಆದರೆ ಉಭಯ ದೇಶಗಳ ನಡುವಿನ ಇತ್ತೀಚಿನ ಬೆಳವಣಿಗೆ ಸ್ವಾಗತಾರ್ಹ. ಅಂತಹ ಬೆಳವಣಿಗೆಯು ಮುಂದೆ ಆ ಪ್ರದೇಶದಲ್ಲಿ ಶಾಂತಿ ನೆಲೆಸಲು ಸಹಾಯಕವಾಗಲಿದೆ’’ ಎಂದು ಇತ್ತೀಚೆಗೆ ಭೂತಾನ್‌ನಲ್ಲಿ ಭಾರತದ ಪ್ರಧಾನಿ ಡಾ. ಮನಮೋಹನ್ ಸಿಂಗ್ ಮತ್ತು ಪಾಕಿಸ್ತಾನದ ಪ್ರಧಾನಿ ಯೂಸುಫ್ ರಝಾ ಗೀಲಾನಿ ನಡೆಸಿರುವ ಭೇಟಿಯ ಕುರಿತು ವಿಲಿಯಂ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Subscribe to:
Post Comments (Atom)
No comments:
Post a Comment