ಮಂಗಳೂರು ಘೋರ ದುರಂತದ ಮರುದಿನವೇ ಹಾರ-ತುರಾಯಿಯಲ್ಲಿ ಮುಳುಗಿದ ಸಿಎಂ ಪ್ರಶ್ನೆ
ಬೆಂಗಳೂರು, ಮೇ 23: ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಘೋರ ವಿಮಾನ ದುರಂತದಿಂದ ರಾಜ್ಯದಲ್ಲಿ ಸೂತಕದ ಛಾಯೆ ಆವರಿಸಿದೆ. ಮಂಗಳೂರಿನ ನಾಗರಿಕರು ಸೇರಿದಂತೆ ರಾಜ್ಯದ ಜನತೆ ಸೂತಕದಿಂದ ಹೊರ ಬರಲಾಗದೆ ವೌನಕ್ಕೆ ಶರಣಾಗಿದ್ದಾರೆ.
ಆದರೆ, ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಸಚಿವ ಸಂಪುಟದ ಸಚಿವರೊಂದಿಗೆ ಮಠ-ಮಾನ್ಯಗಳಿಗೆ ಭೇಟಿ ನೀಡುತ್ತಾ, ಹಾರ-ತುರಾಯಿ, ಸನ್ಮಾನಗಳಲ್ಲಿ ಮುಳುಗಿದ್ದಾರೆ. ಇದು ರಾಜ್ಯ ಸರಕಾರದ ‘ಮಾನವೀಯತೆಗೆ’ ಹಿಡಿದ ಕನ್ನಡಿಯಂತಿದೆ. ಹಿಂದೆಂದೂ ಕಂಡರಿಯದ ಘನ ಘೋರ ವಿಮಾನ ದುರಂತ ಕರ್ನಾಟಕದಲ್ಲಿ ಸಂಭವಿಸಿದೆ.
ಕೇಂದ್ರ ಸಚಿವರುಗಳ ದಂಡೆ ಮಂಗಳೂರಿಗೆ ಭೇಟಿ ನೀಡಿ ಮತರ ಕುಟುಂಬಗಳಿಗೆ ಸಾಂತ್ವನ ಹೇಳುತ್ತಿದೆ. ಆದರೆ, ರಾಜ್ಯ ಸರಕಾರ ವಿಮಾನ ದುರಂತದ ಹಿನ್ನೆಲೆಯಲ್ಲಿ ಒಂದು ದಿನದ ಶೋಕಾಚರಣೆ ಘೋಷಿಸಿ, ಸನ್ಮಾನ ಸಮಾರಂಭಗಳಲ್ಲಿ ಮುಳುಗಿದೆ.
ಯಡಿಯೂರಪ್ಪ ರವಿವಾರ ಮೈಸೂರಿನ ಸಚ್ಚಿದಾನಂದ ಆಶ್ರಮದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರಲ್ಲದೆ, ಹಾರ-ತುರಾಯಿಗಳೊಂದಿಗೆ ಮೈಸೂರು ಪೇಟಾ ತೊಡಿಸಿಕೊಂಡು, ಶಾಲು ಹೊದಿಸಿಕೊಂಡು ಸನ್ಮಾನ ಸ್ವೀಕರಿಸಿದ್ದು ಆಶ್ಚರ್ಯ ಮೂಡಿಸಿತು. ಇತ್ತ ಬೆಂಗಳೂರಿನಲ್ಲಿ ಸಾರಿಗೆ ಸಚಿವ ಆರ್.ಅಶೋಕ್ ಬಸವ ವೇದಿಕೆ ಆಯೋಜಿಸಿದ್ದ ಬಸವ ಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಇದೇ ಸಂದರ್ಭದಲ್ಲಿ ಹಲವರಿಗೆ ಅವರೇ ನಿಂತು ಹಾರ-ತುರಾಯಿ ಹಾಕಿ ಸನ್ಮಾನಿಸಿದರು. ಈ ಮಧ್ಯೆ ರಾಜ್ಯ ಸರಕಾರವು ಕೂಡಲ ಸಂಗಮದಲ್ಲಿ ಸಾವಯವ ಕಷಿಕರ ಬಹತ್ ಸಮಾವೇಶ ನಡೆಸಿ ಕಷಿ ಕ್ಷೇತ್ರದಲ್ಲಿನ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ದುರಂತದಲ್ಲಿ ಮತಪಟ್ಟವರ ಕುಟುಂಬವರ್ಗ, ಸಂಬಂಧಿಕರಿಗೆ ಸಾಂತ್ವನ ಹೇಳಬೇಕಾದುದು ಸರಕಾರದ ಕರ್ತವ್ಯ. ಮುಖ್ಯಮಂತ್ರಿ ಯಡಿಯೂರಪ್ಪನವರು ಕನಿಷ್ಠ ಪಕ್ಷ ದುರಂತದ ಬಳಿಕ ಒಂದೆರಡು ದಿನಗಳಾದರೂ ಸನ್ಮಾನ, ಸಭೆ, ಸಮಾರಂಭಗಳಿಂದ ದೂರ ಇರಬೇಕಿತ್ತು. ಆದರೆ ಮುಖ್ಯಮಂತ್ರಿಗಳು ಆ ಸೌಜನ್ಯ ತೋರಿಸದಿರು ವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಮೈಸೂರಿನಲ್ಲಿ ಪ್ರಶ್ನಿಸಿದ ಮಾಧ್ಯಮದವರ ಮೇಲೆ ಮುಖ್ಯಮಂತ್ರಿ ಯಡಿಯೂರಪ್ಪ ಹರಿಹಾಯ್ದಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದು, ಮತರ ಕುಟುಂಬಕ್ಕೆ ಪರಿಹಾರ ಘೋಷಿಸಲಾಗಿದೆ. ಇನ್ನೇನು ಮಾಡಬೇಕು ಎಂದು ಸುದ್ದಿಗಾರರಿಗೆ ಮರು ಪ್ರಶ್ನೆ ಹಾಕಿದರು.
ಈ ಮಧ್ಯೆ ದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವ ಕಷ್ಣಾ ಜೆ.ಪಾಲೆಮಾರ್ ಒಂದು ವಾರದ ಶೋಕಾಚರಣೆಗೆ ನಿರ್ಧರಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಒಂದೆಡೆ ಶೋಕಾಚರಣೆ ಎನ್ನುವ ಸರಕಾರ, ಮತ್ತೊಂದೆಡೆ ಸನ್ಮಾನ ಸಮಾರಂಭಗಳಲ್ಲಿ ಮುಳುಗಿರುವುದು ಹಾಸ್ಯಾಸ್ಪದವಾಗಿದೆ.
Subscribe to:
Post Comments (Atom)
No comments:
Post a Comment