


ಕೇಂದ್ರ ಸಚಿವರಾದ ವಯಲಾರ್ ರವಿ, ಮಲ್ಲಿಕಾರ್ಜುನ ಖರ್ಗೆ, ಇ.ಅಹ್ಮದ್, ಕೆ.ಎಚ್.ಮುನಿಯಪ್ಪ, ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ರಾಜ್ಯ ವಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕಿ ಮೋಟಮ್ಮ, ವಿ.ಎಸ್.ಉಗ್ರಪ್ಪ, ಕೇರಳ ಕಾಂಗ್ರೆಸ್ ಧುರೀಣ ರಮೇಶ್ ಚೆನ್ನಿತ್ತಲ ಮತ್ತಿತರ ಗಣ್ಯರು ಭೇಟಿ ನೀಡಿದರು.
ದುರಂತ ನಡೆದ ಸ್ಥಳಕ್ಕೆ ಎ.ಪಿ. ಉಸ್ತಾದ್ ಭೇಟಿ
ಮಂಗಳೂರು, ಮೇ 23: ವಿಮಾನ ದುರಂತದಲ್ಲಿ ಮಡಿದವರ ಕುಟುಂಬ ಸ್ಥರನ್ನು ಮತ್ತು ಘಟನೆಯಲ್ಲಿ ಪಾರಾದ ಗಾಯಾಳುಗಳನ್ನು ಅಖಿಲ ಭಾರತ ಸುನ್ನಿ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಖಮರುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಶನಿವಾರ ರಾತ್ರಿ ಭೇಟಿಯಾಗಿ ಸಾಂತ್ವನ ಹೇಳಿದರು.

ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿದ ಅವರು ಮೃತರ ಅಂತಿಮ ದರ್ಶನ ಮಾಡಿ ಮೃತರಿಗಾಗಿ ಪ್ರಾರ್ಥಿಸಿದರು. ಈ ಸಂದರ್ಭ ಚಿತ್ತಾರಿ ಹಂಝ ಮುಸ್ಲಿಯಾರ್ ಬಿ.ಎಂ.ಫಾರೂಕ್, ಬಿ.ಎಂ. ಮುಮ್ತಾಝ್ ಅಲಿ, ಅಬ್ದುರ್ರಹ್ಮಾನ್ ಸಖಾಫಿ, ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ ಮತ್ತಿತರರಿದ್ದರು.
No comments:
Post a Comment