ಮಂಗಳೂರು: ಕೇವಲ ಎರಡು ವರುಷ ಹಳೆಯದಾದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿಲ್ಲ ಅಲ್ಲದೆ 10,200 ತಾಸುಗಳಷ್ಟು ವಿಮಾನಯಾನ ನಡೆಸಿದ ಅನುಭವಿ ಪೈಲೆಟ್ ಇರುವಾಗಲೇ ನೆನೆಸಿರದ ದುರಂತ ನಡೆದಿದೆ. ಇದರ ಹಿಂದಿನ ಯಾವುದೇ ಕಾರಣ ಸ್ಪಷ್ಟಗೊಂಡಿಲ್ಲ. ಈ ಬಗ್ಗೆ ಎಲ್ಲಾ ರೀತಿಯಿಂದಲೂ ತನಿಖೆ ನಡೆಸಲಾಗುವುದು. ಜೊತೆಗೆ ಮೃತರಿಗೆ ಸೂಕ್ತ ಪರಿಹಾರ ಒದಗಿಸಲು ಯತ್ನಿಸಲಾಗುವುದು ಎಂದು ಏರ್ಇಂಡಿಯಾ ಏರ್ಲೈನ್ಸ್ನ ಇಎಂಡಿ ಅರವಿಂದ್ ಜಾದವ್ ತಿಳಿಸಿದರು.
ವಿಮಾನ ದುರಂತದ ವೇಳೆ ಮಂಗಳೂರಿಗರು ತೋರಿದ ಸಮಯ ಪ್ರಜ್ಞೆ, ಕರ್ತವ್ಯ ನಿಷ್ಠೆ ಅವಿಸ್ಮರಣೀಯ ಅದಕ್ಕಾಗಿ ನಾನು ಸಮಸ್ತ ಮಂಗಳೂರಿ ಗರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದ ಜಾದವ್, 12 ವರ್ಷಕ್ಕಿಂತ ಕೆಳಗಿನ ಮೃತ ಮಕ್ಕಳ ಕುಟುಂಬಿಕರಿಗೆ ಐದು ಲಕ್ಷ ಹಾಗೂ 12 ವರ್ಷಕ್ಕಿಂತ ಮೇಲ್ಪಟ್ಟ ಮೃತ ವ್ಯಕ್ತಿಗಳ ಕುಟುಂಬಿಕರಿಗೆ 10 ಲಕ್ಷ ಪರಿಹಾರ ಹಾಗೂ ಗಾಯಾಳು ಗಳಿಗೆ ತಲಾ 50 ಸಾವಿರ ಪರಿಹಾರ ವನ್ನು ಸರಕಾರ ನೀಡಲಿದೆ ಎಂದು ತಿಳಿಸಿದರು. ಕಂಪನಿಗೆ ಸಂಬಂಧಿಸಿದ ಇನ್ಸೂರೆನ್ಸ್ನ್ನು ಪಡೆಯಲು ಎಲ್ಲಾ ಏರ್ಪಾಡುಗಳನ್ನು ಮಾಡಲಾಗಿದ್ದು, ಇಲ್ಲಿ ಲಭ್ಯವಾಗುವ ಹಣವನ್ನೂ ಪರಿಹಾರ ರೂಪದಲ್ಲಿ ಹಂಚಲಾ ಗುವುದು ಎಂದ ಜಾದವ್ ಇದಕ್ಕಾಗಿ ಈಗಾಗಲೇ ಏರ್ಲೈನ್ಸ್ನ ಮುಂಬೈ ಅಧಿಕಾರಿಗಳ ತಂಡ ರಚಿಸಲಾಗಿದ್ದು ಅವರು ಮೃತ ವ್ಯಕ್ತಿಗಳ ಪ್ರತಿ ಮನೆಗೆ ಭೇಟಿ ನೀಡಿ ವಿವರ ಸಂಗ್ರಹಿಸಲಿದ್ದಾರೆ. ಅಲ್ಲದೆ ಇನ್ಸೂರೆನ್ಸ್ ಕ್ಲೈಮ್ ಮಾಡಲು ಪರಿಣತ ತಂಡವನ್ನು ರಚಿಸಲಾಗಿದ್ದು ದಾಖಲೆಗಳನ್ನು ಪರಿಪೂರ್ಣ ಗೊಳಿಸುವ ಕಾರ್ಯವನ್ನು ಅವರು ಆರಂಭಿಸಿದ್ದಾರೆ ಎಂದು ಜಾದವ್ ತಿಳಿಸಿದರು.
ಕೇಂದ್ರ ಸರಕಾರದ ವಿಮಾನ ಯಾನ ಸಚಿವಾಲಯ ಹಾಗೂ ಇನ್ನಿತರ ತನಿಖಾ ತಂಡಗಳ ತನಿಖೆಗೆ ಸಹಕಾರ ನೀಡಲು ಕಂಪನಿ ಸಿದ್ದ ವಾಗಿದ್ದು ಪತ್ರಕರ್ತರು ಸಹಕಾರ ನೀಡುವಂತೆ ಕೋರಿದರು.

No comments:
Post a Comment