ಮಂಗಳೂರು: ಎಜುಕೇಷನ್ ಎನ್‌ಹಾನ್ಸ್‌ಮೆಂಟ್ ಟ್ರಸ್ಟ್ ಇದರ ಆಶ್ರಯದಲ್ಲಿ ಇತ್ತೀಚೆಗೆ ಮೆಲ್ಕಾರ್ ಮಹಿಳಾ ಪದವಿ ಪೂರ್ವಕಾಲೇಜು ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ.ಪಾಲೆಮಾರ್‌ರವರು ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಮಂಗಳೂರು ಖಾಝಿ ತ್ವಾಕ ಅಹಮದ್ ಮೌಲವಿ ದುವಾ ಆಶೀರ್ವಚನವನ್ನು ನೆರವೇರಿಸಿದರು. ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಹಾಜಿ ಎಸ್.ಎಂ.ರಶೀದ್ ಅಲಂಕರಿಸಿದ್ದರು. ಮಸ್ಚಿದುತ್ತಕ್ವ ಇಮಾಂ ಅಬ್ದುಲ್ ರಹಮಾನ್ ಸಖಾಫಿ ಖಿರಾಹತ್ ಪಠಿಸಿದರು.
ಬಳಿಕ ನಡೆದ ಸಮಾರಂಭ ಕಾರ್ಯಕ್ರಮದ ಉದ್ಘಾಟನೆಯನ್ನು ಯೆನಪೋಯ ವಿಶ್ವವಿದ್ಯಾನಿಲಯದ ಕುಲಪತಿ ಹಾಜಿ ವೈ.ಅಬ್ದುಲ್ಲಾ ಕುಂಞ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಡಾ.ಅಮ್ಮೆಂಬಳ ಬಾಳಪ್ಪ ಮತ್ತು ಟ್ರಸ್ಟಿಯಾದ ಅಝೀಜ್ ಅಕ್ಕರಾ ಅವರನ್ನು ಸನ್ಮಾನಿಸಲಾ ಯಿತು. ಮುಖ್ಯ ಅತಿಥಿಗಳಾಗಿ ತುಂಬೆ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಬಿ. ಅಹ್ಮದ್ ಹಾಜಿ ಮುಹಿಯುದ್ದೀನ್, ಯೆನಪೋಯ ಗ್ರೂಪ್ ಆಫ್ ಕಂಪೆನಿ ಅಧ್ಯಕ್ಷ ವೈ. ಮೊಹಮ್ಮದ್ ಕುಂಞ, ದ.ಕ.,ಉಡುಪಿ ಮುಸ್ಲಿಂ ಸೆಂಟ್ರಲ್ ಕಮಿಟಿ ಚಯರ್‌ಮೆನ್ ಕೆ.ಎಸ್. ಮೊಹಮ್ಮದ್ ಮಸೂದ್, ಯೇನ ಪೊಯ ಯುನಿವರ್ಸಿಟಿ ಆಡಳಿತ ನಿರ್ದೇಶಕ ಪಿ.ಸಿ.ಎಂ. ಕುಂಞ, ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಕೆ.ಎಸ್.ರಮೇಶ್, ಮುಸ್ಲಿಂ ಎಜುಕೇಶನ್ ಅಸೋಸಿಯೇಶನ್ ಜನರಲ್ ಸೆಕ್ರೆಟರಿ ವಿ. ಇಬ್ರಾಹಿಂ, ಉದ್ಯಮಿ ಬಿ.ಕುಂಞ ಅಹ್ಮದ್, ಬಿ.ಎ. ಮೊಯ್ದಿನ್ ಬಾವ, ಕೆ.ಸಿ. ಹಮೀದ್, ಜಿ.ಪಂ.ಸದಸ್ಯ ಎ.ಸಿ. ಭಂಡಾರಿ, ಮಮತಾ ಗಟ್ಟಿ ಉಪಸ್ಥಿತರಿದ್ದರು.

No comments:
Post a Comment