ಮಂಗಳೂರು, ಮೇ 23: ವಿಮಾನ ದುರಂತದಲ್ಲಿ ಭಾರೀ ಸಂಖ್ಯೆಯಲ್ಲಿ ಸಾವು ನೋವು ಸಂಭವಿಸಿರುವ ಕಾರಣ ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಸ್ಥಳಾವಕಾಶದ ಕೊರತೆಯಿಂದ ಮೃತದೇಹಗಳನ್ನು ಪತ್ತೆ ಹಚ್ಚುವಲ್ಲೂ ಸಂಬಂಧಿಕರಿಗೆ ತೊಂದರೆಯಾಗಿದೆ ಎಂಬ ಅಸಮಾಧಾನದ ಮಾತುಗಳು ಕೇಳಿ ಬಂದಿವೆ.
ಶನಿವಾರ ನಡೆದ ವಿಮಾನ ದುರಂತದಲ್ಲಿ 158 ಮಂದಿ ಮೃತಪಟ್ಟಿದ್ದು, ಮೃತದೇಹಗಳನ್ನು ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಗಿತ್ತಾದರೂ ಅಂತಿಮವಾಗಿ ಶವ ಮಹಜರು ಕಾರ್ಯ ವೆನ್ಲಾಕ್ ಆಸ್ಪತ್ರೆಯಲ್ಲೇ ನಡೆಯಬೇಕಿತ್ತು. ಆದರೆ ವೆನ್ಲಾಕ್ ಆಸ್ಪತ್ರೆಯ ಶವಾಗಾರ ಕಿರಿದಾಗಿದ್ದು, ಹೊರಗಡೆ ಚಪ್ಪರದ ವ್ಯವಸ್ಥೆ ಮಾಡಿ ಶವಗಳ ಮಹಜರು ಕಾರ್ಯಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು.
ಸಾವಿರಾರು ಸಂಖ್ಯೆಯಲ್ಲಿ ಜನರು ವೆನ್ಲಾಕ್ ಆಸ್ಪತ್ರೆಗೆ ನಿನ್ನೆ ಮತ್ತು ಇಂದು ಭೇಟಿ ನೀಡುತ್ತಿದ್ದ ಕಾರಣ ಮೃತರ ಸಂಬಂಧಿಕರಿಗೆ ಮೃತದೇಹಗಳನ್ನು ಪತ್ತೆ ಹಚ್ಚಲು ತೀರಾ ತೊಂದರೆಯಾಗಿತ್ತು. ಶವಗಳನ್ನಿಡಲು ವಿಶಾಲವಾದ ಪ್ರದೇಶದಲ್ಲಿ ಪರ್ಯಾಯ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದ್ದರೆ, ಸರಾಗವಾಗಿ, ಕ್ಷಿಪ್ರವಾಗಿ ಮೃತದೇಹಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿತ್ತು ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬಂದಿದೆ.
May 24, 2010
Subscribe to:
Post Comments (Atom)
No comments:
Post a Comment