ಮಂಜೇಶ್ವರ, ಮೇ 28: ಮಂಜೇಶ್ವರದಲ್ಲಿ ನಿರ್ಮಿಸಲುದ್ದೇಶಿಸಿರುವ ಬಂದರಿನ ಕಾಮಗಾರಿ 4 ತಿಂಗಳೊಳಗೆ ಪ್ರಾರಂಭಿಸುವುದಾಗಿ ಕೇರಳ ರಾಜ್ಯ ಕಾನೂನು ಮತ್ತು ಬಂದರು ಸಚಿವ ಎಂ. ವಿಜಯಕುಮಾರ್ ಹೇಳಿದ್ದಾರೆ. ಇಲ್ಲಿನ ಮೀಂಜದಲ್ಲಿ ಮಾರಿಟೈಂ ಇನ್ಸಿಟ್ಯೂಟ್ಸ್ ಕ್ಯಾಂಪಸ್‌ಗೆ ಶಿಲಾನ್ಯಾಸ ನೆರವೇರಿಸಿ ಅವರಿಂದು ಮಾತನಾಡುತ್ತಿದ್ದರು.
ರಾಜ್ಯದಲ್ಲಿ 17 ಬಂದರುಗಳಿದ್ದರೂ, ಅಭಿವೃದ್ಧಿಯ ಪಥದಲ್ಲಿರುವ 6 ಬಂದರುಗಳನ್ನು ಅಭಿವದ್ಧಿಗೊಳಿಸಲು ರಾಜ್ಯ ಸರಕಾರ ಈಗಾಗಲೇ ತೀರ್ಮಾನಿಸಿದೆ ಎಂದು ಅವರು ತಿಳಿಸಿದರು.
ಬಂದರುಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಾರಿಟೈಂ ಡೆವಲಪ್‌ಮೆಂಟ್ ಬೋರ್ಡ್ ಸ್ಥಾಪಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ ಎಂದ ಅವರು, ಮಲಬಾರ್ ಪ್ಯಾಕೇಜ್‌ನಡಿಯಲ್ಲಿ 1,500ಕೋ.ರೂ.ಗಳನ್ನು ಕಾಸರಗೋಡು ಜಿಲ್ಲೆಯ ಅಭಿವೃದ್ಧಿಗೆ ವ್ಯಯಿಸಲಾಗುತ್ತದೆ ಎಂದು ತಿಳಿಸಿದರು.ಮಂಜೇಶ್ವರ ಶಾಸಕ ಸಿ.ಎಚ್. ಕುಂಞಬು ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಗೋಲ್ಡನ್ ಅಬ್ದುಲ್ ಖಾದರ್, ಪಂಚಾಯತ್ ಅಧ್ಯಕ್ಷರಾದ ಬಿ.ಮುಹಮ್ಮದ್ ಕುಂಞಿ, ಪಿ.ಬಿ. ಅಬೂಬಕರ್, ಯು.ಎ ಖಾದರ್, ಜಯಲಕ್ಷ್ಮೀ ಭಟ್ , ಜಿ.ಪಂ. ಸದಸ್ಯ ಪ್ರಭಾಕರ ಚೌಟ, ಬ್ಲಾಕ್ ಪಂಚಾ ಯತ್ ಸದಸ್ಯರಾದ ಅನ್ನಮ್ಮ.
ಡಿ. ಕಮಲಾಕ್ಷ, ವಿವಿಧ ರಾಜಕೀಯ ಪಕ್ಷದ ಮುಖಂಡರಾದ ಕೆ.ಪಿ ಸತೀಶ್ ಚಂದ್ರನ್, ಬಿ.ವಿ ರಾಜನ್, ಹರೀಶ್ ಬಿ.ನಂಬ್ಯಾರ್ , ಕೆ.ಎಸ್ ಫಕ್ರುದ್ದೀನ್, ರಾಘವ ಚೇರಾಲ್ , ಮಂಜೇಶ್ವರ ಎಂ.ಜೆ ಕಿಣಿ ಮತ್ತಿತರರು ಉಪಸ್ಥಿತರಿದ್ದರು. ಬಂದರು ಇಲಾಖೆಯ ಅಡಿಶನಲ್ ಡೈರೆಕ್ಟರ್ ಮೋಹನನ್ ನಾಯರ್ ಸ್ವಾಗತಿಸಿದರು. ಮಾರಿಟೈಂ ಇನ್ಸಿಟ್ಯೂಟ್ಸ್ ಕ್ಯಾಂಪಸ್‌ನ ತರಬೇತಿ ಮೆನೇಜರ್ ಪಿ.ಮೂಸಾ ವಂದಿಸಿದರು.
No comments:
Post a Comment