ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 28, 2010

ಆ ಮೊಬೈಲ್ ಫೋನೊಂದು ಸ್ವಿಚ್ ಆಫ್ ಮಾಡು !!!!!


ಮಂಗಳೂರಿನಲ್ಲಿ ಅತೀ ಭೀಕರವಾಗಿ ಅಪಘಾತಕ್ಕೀಡಾದ ವಿಮಾನದ ಚಾಲಕನನ್ನು ದೂಷಿಸುದೇನು ಕಷ್ಟವಲ್ಲ. ಕಾರಣ ಅದಕ್ಕೆ ವಿರೋಧ ಸೂಚಿಸಲು ಅವರಿಂದು ಬದುಕಿ ಉಳಿದ್ದಿಲ್ಲ. ಅದಲ್ಲದೆ ವಿಮಾನವನ್ನು ಸರಿಯಾಗಿ ಪರಿಪಾಲಿಸುದಿಲ್ಲವೆಂದು ನಿರ್ವಹಣಾ ವ್ಯವಸ್ಥೆಯನ್ನು ನಿಂದಿಸಲೂಬಹುದು. ಅದೇನಿದ್ದರೂ ವೈಮಾನಿಕಾ ಯಾತ್ರಿಕರಲ್ಲಿ ಹಾಗೂ ವಾಚಕರಲ್ಲಿ ಈ ಕೆಳಗಿನ ವಾಸ್ತವವನ್ನು ಪರಿಗಣಿಸಿ ಗಮನದಲ್ಲಿಟ್ಟುಕೊಳ್ಳಬೇಕಾಗಿ ಕಳಕಳಿಯಿಂದ ವಿನಂತಿಸುತ್ತೇನೆ.
ಬೋಯಿಂಗ್ ಬಿ೭೩೭/೮೦೦ ಇದರ ಸ್ಥಿತಿ ಕೆಟ್ಟಿತ್ತು ಎಂದು ಹೇಳಲು ಸಾದ್ಯವಿಲ್ಲ. ಯಾಕೆಂದರೆ ಇದರ ಚಾಲನೆ ಪ್ರಾರಂಭಿಸಿದ್ದು ೧೫ನೇ ಜನವರಿ ೨೦೦೮ರಲ್ಲಿ. ಮಂಗಳೂರು ವಿಮಾನ ನಿಲ್ಧಾಣ ಅಥವಾ ರನ್ ವೇ ಸುರಕ್ಷಿತವಲ್ಲವೆಂದು ಒಮ್ಮೆಲೇ ಹೇಳಲು ಆಗದು ಯಾಕೆಂದರೆ ಪ್ರತಿದಿನ ೩೨ ದೇಶಿಯ ಹಾಗೂ ಅಂತರ್ದೆಶಿಯ ವಿಮಾನಗಳು ಇಲ್ಲಿಂದ ಹಾರಾಡುತ್ತಿವೆ. ವಿಮಾನ ನಿಲ್ಧಾಣದ ಅಧಿಕಾರಿಗಳ ಪ್ರಕಾರ ಇಲ್ಲಿವರೆಗೆ ಸರಿ ಸುಮಾರು ೩೫,೦೦೦ ವಿಮಾನಗಳು ಇಲ್ಲಿ ಬಂದಿಳಿದಿವೆ. ಆದರೆ ಹೇಳುವಂಥ ಯಾವುದೇ ಅಪಘಾತಗಳು ಇಲ್ಲಿ ಸಂಭವಿಸಿಲ್ಲ. ಹವಾಮಾನ ಕೂಡ ಸರಿಯಾಗಿತ್ತು.
ಮ್ರತಪಟ್ಟ ಕ್ಯಾಪ್ಟನ್ ೫೩ ವರ್ಷ ಪ್ರಾಯದ ಗ್ಲುಸಿಕ ೧೦,೨೦೦ ಗಂಟೆಗಳ ಕಾಲ ವಾಯುಸಂಚಾರದ ಪರಿಣತ ಹಾಗೂ ಅವರ ಪರವಾನಿಗೆ ಭಾರತದ ವಾಯುಯಾನ ಪ್ರಾಧಿಕಾರದಿಂದ ಅಂಗೀಕರಿಸಲ್ಪಟ್ಟದ್ದಾಗಿದೆ. ಇವರು ಮಂಗಳೂರು ವಿಮಾನ ನಿಲ್ಧಾನಕ್ಕೆ ಸರಿ ಸುಮಾರು ೧೯ ಕ್ಕಿಂತಲೂ ಹೆಚ್ಚು ಬಾರಿ ವಿಮಾನ ಚಲಾಯಿಸಿದ್ದಾರೆ. ಅದೇ ರೀತಿ ಸಹ ಚಾಲಕ ೬೬ ಕ್ಕಿಂತಲೂ ಹೆಚ್ಚು ಬಾರಿ ಪ್ರಯಾಣಿಸಿದ್ದಾರೆ. ಅವರು ಸಹ ಮಂಗಳೂರು ವಿಮಾನ ನಿಲ್ಧಾಣ ಭೂಸ್ಪರ್ಶದಲ್ಲಿ ಪರಿಣತರಾಗಿದ್ದರು.
ಹೀಗೆ ನೋಡುವಾಗ ಆರೋಪಗಳನ್ನು ಚಾಲಕನ ಮೇಲೆ ಹೊರಿಸುವುದು ಸರಿಎನಿಸುವುದಿಲ್ಲ. ಅಲ್ಲದೆ ಚಾಲಕರು ಯಾವುದೇ ತಾಂತ್ರಿಕ ಅಡಚಣೆಯ ಸೂಚನೆಯನ್ನು ನಿಯಂತ್ರಣಾ ಕೊಠಡಿಗೆ ತಿಳಿಸಿಲ್ಲ. ಭೂಸ್ಪರ್ಶ ಸಮಯದಲ್ಲಿ ಆರು ಕಿಲೋ ಮೀಟರ್ ಗಳಷ್ಟು ದೂರದಿಂದ ವಿಮಾನ ನಿಲ್ದಾಣವು ಗೋಚರಿಸುತ್ತಿತ್ತು. ಇದು ಆವಶ್ಯವಿರುವ ದೂರಕ್ಕಿಂತಲೂ ಹೆಚ್ಚು.
ಹಾಗಾದರೆ ಈ ವಿಮಾನವು ಪತನಗೊಳಲ್ಲು ಏನು ಕಾರಣವಾಗಿರಬಹುದು?
ಯಾಂತ್ರೀಕ ದಿಕ್ಸೂಚಿಯ ಕಾರ್ಯ ಪ್ರವ್ರತಿಯಲ್ಲಿ ಉಂಟಾದ ಅಡಚಣೆ ಸಾದ್ಯತೆ ಇರಬಹುದೇ? ಇದು ಭೂಸ್ಪರ್ಶ ಸಮಯದಲ್ಲಿ ಕೆಲವು ಪ್ರಯಾಣಿಕರ ಅಜಾಗರೂಕತೆಯಿಂದ ಏಕ ಕಾಲದಲ್ಲಿ ಅನೇಕ ಮೊಬೈಲ್ ಗಳನ್ನು ಚಾಲನೆಗೊಳಿಸಿದರಿಂದ ಉಂಟಾಗಿರಬಹುದಾ!!!? ಅದೆಸ್ಟೋ ಪ್ರಯಾಣಿಕರು ಭೂಸ್ಪರ್ಶ ಸಮಯದಲ್ಲಿ ತಮ್ಮ ಆಗಮನವನ್ನು ತಿಳಿಸುವ ತವಕದಲ್ಲಿ ಮೊಬೈಲ್ ಫೋನನ್ನು ತೆಗೆದು ಮಾತನಾಡುವುದನ್ನು ಗಮನಿಸಿದ್ದೇವೆ. ಅಥವಾ ಯಾರೋ ಒಬ್ಬ ಅಜ್ಞಾನಿ ಪ್ರಯಾಣಿಕ ಗಗನಸಖಿಯರ ಎಚ್ಚರಿಕೆಯನ್ನು ಲೆಕ್ಕಿಸದೆ ತನ್ನ ಮೊಬೈಲ್ ಫೋನನ್ನು ಸದಾ ಚಾಲನೆಯಲ್ಲಿರಿಸಿ ಅದು ಮಂಗಳೂರು ವಿಮಾನ ನಿಲ್ದಾಣ ತಲುಪುತ್ತಿದ್ದಂತೆ ತನ್ನ ವ್ಯಾಪ್ತಿಗಾಗಿ ಹುಡುಕಾಡುವಾಗ ವಿಮಾನದ ಭೂಸ್ಪರ್ಶ ವಿಧಾನಕ್ಕೆ ಏನಾದರೂ ಅಡಚಣೆ ಉಂಟಾಗಿರಬಹುದಾದ ಸಾದ್ಯತೆ ಇರಬಹುದೇ?
ಇತ್ತೀಚಿನ ಮೂರು ವಿಮಾನ ಅಪಘಾತಗಳು, ಮೊದಲನೆಯದ್ದು ಪೋಲಿಶ್ ಪ್ರಧಾನಮಂತ್ರಿ ಮತ್ತು ಅವರ ಸಹಚರರನ್ನು ಸಾವಿಗಿಡಾಗಿಸಿದ ರಷ್ಯದ ವಿಮಾನ, ಎರಡನೆಯದ್ದು ಕಳೆದ ತಿಂಗಳು ಲಿಬಿಯಾದಲ್ಲಿ ಪತನಗೊಂಡದ್ದು. ಹಾಗೂ ಕಳೆದ ವಾರ ಮಂಗಳೂರಿನಲ್ಲಿ ಪತನಗೊಂಡ ಏರ್ ಇಂಡಿಯಾ ವಿಮಾನ ಎಲ್ಲವೂ ಭೂಸ್ಪರ್ಶವಾಗಲು ಪ್ರಯತ್ನಿಸುವಾಗ ಉಂಟಾಗಿದೆ.
ಇದು ವಿಮಾನದಲ್ಲಿ ಮೊಬೈಲ್ ಫೋನ್ ಬಳಕೆಯಿಂದ ವಿಮಾನದ ದಿಕ್ಸೂಚಿಯ ಕಾರ್ಯ ಪ್ರವ್ರತಿಯಲ್ಲಿ ಉಂಟಾದ ತೊಂದರೆ ಕಾರಣ ಎಂಬ ಸಂಶಯವನ್ನು ಬಲಪಡಿಸುತ್ತದೆ. ಒಪ್ಪಿಕೊಳ್ತೀರಾ?????????
 
- ಮೂಲ : ಥೋಮಸ್ ಡೊಮಿನಿಕ್ (ಖಲೀಜ್ ಟೈಮ್ಸ್)
- ಕನ್ನಡಕ್ಕೆ ಅನುವಾದ : ಇಬ್ರಾಹಿಂ ಮಂಚಿ, ದುಬೈ.

No comments: