
ಬೆಂಗಳೂರು: ಇತ್ತೀಚಿಗೆ ನಡೆದ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಿಜೇತರಾದ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಗರದ ಎ.ಜೆ. ಇಂಟರ್ ನ್ಯಾಷನಲ್ ಹೋಟೆಲಿನಲ್ಲಿ ಅಭಿನಂಧನಾ ಸಮಾರಂಭವನ್ನು ಏರ್ಪಡಿಸಿತ್ತು.
ಸಮಾರಭದಲ್ಲಿ ನೂತನ ಕಾರ್ಪೋರೇಟರುಗಳು ಭಾಗವಹಿಸಿ ನಾಡಿನ ಅಭಿವೃದ್ದಿಗೆ ತಮ್ಮ ಪ್ರಾಮಾಣಿಕ ಸೇವೆ ಸಲ್ಲಿಸುವುದಾಗಿ ತಿಳಿಸಿದರು. ಈ ಬಾರಿಯ ಬಿ.ಬಿ.ಎಂ.ಪಿ. ಚುನಾವಣೆಯಲ್ಲಿ ಒಟ್ಟು ಹದಿಮೂರು ಮಂದಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳು ಆಯ್ಕೆಯಾಗಿದ್ದು ಅವರಲ್ಲಿ ಎಂಟು ಮಹಿಳೆಯರಾಗಿದ್ದಾರೆ. ೯ ಮಂದಿ ಕಾಂಗ್ರೆಸ್ಸಿನಿಂದ,೧ ಜೆ.ಡಿ.ಎಸ್. , ೧ ಬಿ.ಜೆ.ಪಿ. , ೧ ಎಸ್.ಡಿ.ಪಿ.ಐ., ಒಬ್ಬರು ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದಾರೆ.
No comments:
Post a Comment