VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 13, 2010

ಮ೦ಗಳೂರು: ಉಳಿತಾಯದ ಹವ್ಯಾಸ ಬೆಳೆಸಿಕೊಳ್ಳಿ: ಲೇಖಕಿ ಶಹನಾಝ್


ಮಂಗಳೂರು, ಮೇ 12: ಕುಟುಂಬದ ಪೋಷಣೆ, ಭವಿಷ್ಯದ ಹಿತದಷ್ಟಿಯಿಂದ ತಮ್ಮ ಯೌವ್ವನ, ಭಾವನೆಗಳನ್ನು ಬದಿಗೊತ್ತಿ ವಿದೇಶದಲ್ಲಿ ಅನೇಕ ಪುರುಷರು ಕೆಲಸ ನಿರ್ವಹಿಸುತ್ತಿದ್ದು, ಅವರು ದುಡಿದ ಹಣವನ್ನು ದುಂದುವೆಚ್ಚ ಮಾಡದೆ ಉಳಿತಾಯದ ಹವ್ಯಾಸ ಬೆಳೆಸಿಕೊಳ್ಳುವಂತೆ ಅನಿವಾಸಿ ಭಾರತೀಯ ಪುರುಷರ ಪತ್ನಿಯರು, ಸಂಬಂಧಿಗಳಿಗೆ ಲೇಖಕಿ ಶಹನಾಝ್ ಎಂ. ಕಿವಿಮಾತು ಹೇಳಿದ್ದಾರೆ.
ಅನಿವಾಸಿ ಭಾರತೀಯರ ಸಬಲೀಕರಣ ಯೋಜನೆಯಡಿ ಬೋಳಾರದ ಶಾದಿಮಹಲ್‌ನಲ್ಲಿ ನಡೆದ ‘ಅನಿವಾಸಿ ಭಾರತೀಯ ಕುಟುಂಬದ ಸದಸ್ಯರಿಗೆ ಮಾರ್ಗದರ್ಶನ’ ಶಿಬಿರದ ಸಮಾರೋಪ ಸಮಾ ರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಗಲ್ಪ್ ಉದ್ಯೋಗ ಚಕ್ರವ್ಯೆಹ: ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗವೆಂಬುದು ಒಂದು ಚಕ್ರವ್ಯೆಹದಂತೆ. ಅಲ್ಲಿರುವ ವ್ಯಕ್ತಿಗೆ ಕಷ್ಟ, ಸಮಸ್ಯೆಗಳು ಎದುರಾದಾಗ ತನ್ನಿಚ್ಚೆಯಂತೆ ಓಡಿ ಬರಲಾಗದು. ತನ್ನ ಕುಟುಂಬಿಕರ ನೋವು ನಲಿವಿನಲ್ಲಿ ಭಾಗಿಯಾಗುವ ಆತುರ, ಆಸೆಗಳಿದ್ದರೂ ಅವುಗಳನ್ನೆಲ್ಲಾ ಬದಿಗಿಟ್ಟು ತನ್ನವರ ಹಿತಕ್ಕಾಗಿ ತನ್ನ ಭವಿಷ್ಯವನ್ನೇ ತ್ಯಾಗ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು.
ಗ್ರಾಹಕ ಸಂಸ್ಕೃತಿಯ ಮೋಹವು ಹಸಿವಿಲ್ಲದಿದ್ದರೂ ತಿನ್ನುವ ಮಟ್ಟಕ್ಕೆ ನಮ್ಮನಿಂದು ತಳ್ಳಿದ್ದು, ಈ ಬಗ್ಗೆ ಮುಂದಾಲೋಚ ನೆಯ ಜೊತೆ ಉಳಿತಾಯದ ಗುಣ ಬೆಳೆಸಿಕೊಂಡಲ್ಲಿ ಎನ್‌ಆರ್‌ಐ ಕುಟುಂಬ ಗಳ ಮುಂದಿನ ಜೀವನವು ಉತ್ತಮ ವಾಗಲು ಸಾಧ್ಯ ಎಂದ ಅವರು, ವಿದೇಶದಲ್ಲಿ ವತ್ತಿಯಲ್ಲಿರುವ ಪುರುಷರು ತಮ್ಮ ಪತ್ನಿಯರ ಬಗ್ಗೆ ವಿನಾಕಾರಣ ಅನುಮಾನ ಹೊಂದಬಾರದು ಹಾಗೂ ಅವರ ಪತ್ನಿಯರು ಸದಾಚಾರವನ್ನು ಬೆಳೆಸಿಕೊಂಡು ತಮ್ಮ ಮಕ್ಕಳಿಗೂ ಉತ್ತಮ ಸಂಸ್ಕಾರಗಳನ್ನು ಕಲಿಸಿಕೊಡಬೇಕು ಎಂದು ಸಲಹೆ ನೀಡಿದರು.

No comments: