ಸರಕಾರಿ ಕಾಲೇಜು ಉಪನ್ಯಾಸಕನಿಂದ ಟ್ಯೂಶನ್ ಕ್ಲಾಸ್: ಆರೋಪ
ಚಿಕ್ಕಮಗಳೂರು, ಮೇ19: ಇಲ್ಲಿನ ಸರಕಾರಿ ಜೂನಿಯರ್ ಕಾಲೇಜೊಂದರ ಪ್ರಾಧ್ಯಾಪಕ ಖಾಸಗಿ ಶಾಲೆಯೊಂದರಲ್ಲಿ ಟ್ಯೂಶನ್ ತರಗತಿ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಎಬಿವಿಪಿ ಕಾರ್ಯಕರ್ತರು ನಗರ ಹೊರ ವಲಯದ ಶಾಲೆಯೊಂದಕ್ಕೆ ನುಗ್ಗಿ ದಾಂಧಲೆಗೈದ ಘಟನೆ ಬುಧವಾರ ನಡೆದಿದೆ.
ನಗರದ ಹೊರವಲಯದಲ್ಲಿರುವ ಸೈಂಟ್ ಮೇರೀಸ್ ಶಾಲೆಗೆ ನುಗ್ಗಿದ ಎಬಿವಿಪಿ ಕಾರ್ಯಕರ್ತರು ಕಿಟಕಿ ಗಾಜು ಸೇರಿದಂತೆ ಕೈಗೆ ಸಿಕ್ಕಿದ ಹಲವು ವಸ್ತುಗಳನ್ನು ಪುಡಿಗೈದಿದ್ದಾರೆ ಎನ್ನಲಾಗಿದೆ.
ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಫಾಶ್ಚರ್ ಎಂಬವರು ಸೈಂಟ್ ಮೇರಿಸ್ ಶಾಲೆಯಲ್ಲಿ ಟ್ಯೂಶನ್ ನೀಡುತ್ತಿರುವ ಬಗ್ಗೆ ಕಳೆದ ಎಪ್ರಿಲ್ 24ರಂದು ಡಿಡಿಪಿಐಯವರಿಗೆ ದೂರು ನೀಡಲಾ ಗಿತ್ತು. ಆದರೆ ಈ ಬಗ್ಗೆ ಶಿಕ್ಷಣ ಇಲಾಖೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ದಯಾನಂದ ತಿರುಗುಣ ಪತ್ರಿಕೆಗೆ ತಿಳಿಸಿದ್ದಾರೆ.
ದಾಳಿಯಿಂದಾಗಿ ಸೈಂಟ್ ಮೇರೀಸ್ ಶಾಲೆಗೆ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಶಾಲೆಯ ಕಿಟಕಿ ಗಾಜುಗಳು, ಬಾಗಿಲುಗಳು, ಪೀಠೋಪಕರಣಗಳನ್ನು ಮುರಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ದಯಾನಂದ ತಿರುಗುಣ, ಕಾರ್ಯಕರ್ತರಾದ ಮಂಜುನಾಥ್, ಸಂತೋಷ್ ವಿಜಯಪುರ, ಅಜಯಕುಮಾರ್, ಬಿ.ಎಂ. ಜೀವನ್, ಚಂದ್ರ ಶೇಖರ್, ಮೋಹನ್, ಪೂರ್ಣೇಶ್, ಲೋಹಿತ್, ಭಾನು ಆಲ್ದೂರು ಎಂಬವರನ್ನು ಗ್ರಾಮಾಂತರ ಪೋಲಿಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಶಿಕ್ಷಕ ಅಲ್ಪಸಂಖ್ಯಾತ ಎಂಬ ಕಾರಣಕ್ಕೆ ದಾಳಿ
ಸರಕಾರಿ ಜೂನಿಯರ್ ಕಾಲೇಜು ಪ್ರಾಧ್ಯಾಪಕ ಫಾಶ್ಚರ್ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂಬ ಏಕೈಕ ಕಾರಣಕ್ಕೆ ಎಬಿವಿಪಿ ಕಾರ್ಯಕರ್ತರು ಈ ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಚಿಕ್ಕಮಗಳೂರಿನಲ್ಲಿ ಹಲವೆಡೆ ಸರಕಾರಿ ಶಿಕ್ಷಕರು ಈ ರೀತಿ ಟ್ಯೂಶನ್ ಕೊಡುತ್ತಿದ್ದು ಇದಕ್ಕೆ ಚಕಾರವೆತ್ತದ ಎಬಿವಿಪಿ ಕಾರ್ಯಕರ್ತರು, ಕ್ರಿಶ್ಚಿಯನ್ ಎಂಬ ಕಾರಣಕ್ಕೆ ಈ ದಾಳಿ ನಡೆ ಸಿದ್ದು, ಇದರ ಹಿಂದೆ ಕೋಮುವಾದಿ ಅಜೆಂಡ ಇದೆ ಎಂದು ಪ್ರಗತಿಪರರು ಆರೋಪಿಸಿದ್ದಾರೆ.
Subscribe to:
Post Comments (Atom)
No comments:
Post a Comment