ದಮಾಮ್, ಮೇ 19: ಡಿಕೆಎಸ್‌ಸಿ ದಮಾಮ್ ಘಟಕದ ವತಿಯಿಂದ ಇತ್ತೀಚೆಗೆ ಇಲ್ಲಿನ ಸುನ್ನಿ ಸೆಂಟರ್‌ನಲ್ಲಿ 13ನೆ ವಾರ್ಷಿಕೋತ್ಸವ ನಡೆಯಿತು.
ಡಿಕೆಎಸ್‌ಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಸನ್ ಮೂಡುತೋಟ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಿಕೆಎಸ್‌ಸಿ ದಮಾಮ್ ಘಟಕದ ಅಧ್ಯಕ್ಷ ಸಿದ್ದೀಕ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಹಾಜಿ ಅಬ್ದುಲ್ ಖಾದರ್ ಸಕಲೇಶಪುರ ಮುಖ್ಯ ಅತಿಥಿಯಾಗಿದ್ದರು. ಇಸ್ಮಾಯೀಲ್ ಕಾಟಿಪಳ್ಳ ಕುರ್‌ಆನ್ ಪಠಿಸಿದರು. ಪ್ರಧಾನ ಕಾರ್ಯದರ್ಶಿ ಅಝೀಝ್ ಮೂಡುತೋಟ ಸ್ವಾಗತಿಸಿದರು. ಎಂ.ಜಿ.ಇಕ್ಬಾಲ್ ವಂದಿಸಿದರು.
ಸಿದ್ದೀಕ್ ಉಸ್ತಾದ್‌ರ ನೇತೃತ್ವದಲ್ಲಿ ದ್ಸಿಕ್ರ್ ಮಜ್ಲಿಸ್ ನಡೆಯಿತು. ಹಸನ್ ಬಾವಾ ಕುಪ್ಪೆಪದವು ಅಧ್ಯಕ್ಷತೆಯಲ್ಲಿ 2010-11ರ ಹೊಸ ಸಮಿತಿಯನ್ನು ರಚಿಸಲಾಯಿತು. ಕಳೆದ ವರ್ಷ ಅಧ್ಯಕ್ಷರಾಗಿದ್ದ ಸಂಶೀರ್ ಮೂಲ್ಕಿ ಅಧ್ಯಕ್ಷರಾಗಿ ಪುನರಾಯ್ಕೆಗೊಂಡರು.
ಈ ಸಂದರ್ಭದಲ್ಲಿ ಅಭಿವೃದ್ಧಿ ಪರ ಕಾರ್ಯಕ್ರಮಗಳನ್ನು ರೂಪಿಸಲು ಸಮಿತಿಯೊಂದನ್ನು ರಚಿಸಲಾಯಿತು. ಇದರ ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಸಕಲೇಶಪುರರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ 2009-10ರಲ್ಲಿ ಗಣನೀಯ ಸಾಧನೆಗೈದ ಸಂಶೀರ್ ಮೂಲ್ಕಿ, ಇಕ್ಬಾಲ್ ಮಲ್ಲೂರು, ಅಝೀಝ್ ಮೂಡುತೋಟ ಹಾಗೂ ಇಸ್ಮಾಯೀಲ್ ಕಾಟಿಪಳ್ಳರನ್ನು ಸನ್ಮಾನಿಸಲಾಯಿತು.
ಹೊಸ ಸಮಿತಿ ಪದಾಕಾರಿಗಳು: ಸಂಶೀರ್ ಮೂಲ್ಕಿ(ಅಧ್ಯಕ್ಷ), ಎಂ.ಜಿ. ಇಕ್ಬಾಲ್ ಮಲ್ಲೂರು(ಪ್ರಧಾನ ಕಾರ್ಯದರ್ಶಿ), ಸಿದ್ದೀಕ್ ಹಾಜಿ ಕೊಂಚಾರ್(ಗೌರವಾಧ್ಯಕ್ಷ), ಅಝೀಝ್ ಮೂಡು ತೋಟ(ಕೋಶಾಕಾರಿ), ಬಾವಾಕ ಮಂಜೇಶ್ವರ (ಉಪಾಧ್ಯಕ್ಷ), ಅಬೂಬಕರ್ ಅಜಿಲಮೊಗರು (ಉಪಾಧ್ಯಕ್ಷ), ಉಮರಬ್ಬ ಮರವೂರ್(ಉಪಾಧ್ಯಕ್ಷ), ಹನ್ೀ ತಡಂಬೈಲ್(ಉಪಾಧ್ಯಕ್ಷ), ರಿಯಾಝ್ ಮೂಡುತೋಟ(ಕಾರ್ಯದರ್ಶಿ), ಹಕೀಂ ಜೋಕಟ್ಟೆ (ಕಾರ್ಯದರ್ಶಿ) ಹಾಗೂ ಅರ್ಶದ್ ಕಣ್ಣಂಗಾರ್ (ಕಾರ್ಯದರ್ಶಿ) ಆಯ್ಕೆಗೊಂಡರು.
May 20, 2010
Subscribe to:
Post Comments (Atom)
No comments:
Post a Comment