
ಮಂಗಳೂರು, ಮೇ ೧೨: ಇತ್ತೀಚೆಗೆ ನ್ಯಾಯವಾದಿಯ ಕೊಲೆ ಸಂಚು ಪ್ರಕರಣಕ್ಕೆ ಬಂಧಿಸಲಾಗಿರುವ ಅಲ್ತಾಫ್ (೨೧) ಅಮಾಯಕನಾಗಿದ್ದು, ಈತನನ್ನು ಈ ಪ್ರಕರಣದಲ್ಲಿ ಸಿಲುಕಿ ಸಲಾಗಿದೆ. ಕೆಲ ಸಮಯದ ಹಿಂದೆ ಬೇರೊಂದು ಪ್ರಕರಣದ ಆರೋಪಿ ಯೊಬ್ಬನ ಮೊಬೈಲ್ ಫೋನ್‌ನಲ್ಲಿ ಅಲ್ತಾಫ್‌ನ ಮೊಬೈಲ್ ಸಂಖ್ಯೆ ಇತ್ತೆಂಬ ಕಾರಣಕ್ಕಾಗಿ ಡಿಸಿಐಬಿ ಪೊಲೀಸರು ಅಲ್ತಾಫ್‌ನನ್ನು ಆ ಪ್ರಕರಣದಲ್ಲಿಯೂ ಸಿಲುಕಿಸಿ ಸತಾಯಿಸಿದ್ದಾರೆ ಎಂದು ಅಲ್ತಾಫ್‌ನ ಪೋಷಕರು ಮಾಧ್ಯಮ ದೆದುರು ಇಂದು ಆರೋಪಿಸಿದ್ದಾರೆ. ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅಲ್ತಾಫ್‌ನ ಮಾವ ಮುಹಮ್ಮದ್ ಅಶ್ರಫ್, ಮೇ ೩ರಂದು ಡಿಸಿಐಬಿ ಪೊಲೀಸರು ಅಚಾನಕ್ಕಾಗಿ ಅಲ್ತಾಫ್ ನನ್ನು ಅಕ್ರಮ ಬಂಧನಕ್ಕೊಳಪಡಿ ಸಿದ್ದಾರೆ ಎಂದು ಆರೋಪಿಸಿದರು. “ಅಲ್ತಾಫ್ ಎರಡು ವರ್ಷದವನಾ ಗಿದ್ದಾಗ ಆತನ ತಂದೆ ತೀರಿಕೊಂ ಡಿದ್ದು, ಐವರು ಮಕ್ಕಳಲ್ಲಿ ಈತನೊ ಬ್ಬನೇ ಗಂಡು. ತಂದೆಯ ಮರಣದ ಬಳಿಕ ಅಲ್ತಾಫ್ ಸಹೋದರಿಯರು ಹಾಗೂ ತಾಯಿಯೊಂದಿಗೆ ತನ್ನ ಆಶ್ರಯದಲ್ಲಿದ್ದಾರೆ. ಅಲ್ತಾಫ್ ೨ನೆ ವರ್ಷದ ಬಿಬಿಎಂ ಪರೀಕ್ಷೆಯ ಸಂದರ್ಭ ಮಂಗಳೂರಿನ ಡಿಸಿಐಬಿ ಪೊಲೀಸರು ಚೇತನ್‌ಎಂಬವನ ಕೊಲೆ ಪ್ರಕರಣದಲ್ಲಿ ಈತನನ್ನು ಸಿಲುಕಿಸಿದ್ದರು. ಇದರಿಂದ ಆತಂಕಿತನಾದ ಅಲ್ತಾಫ್ ಕಾಲೇಜಿಗೂ ಹೋಗಲಾಗದೆ ಮುಂಬೈಗೆ ಹೋದ. ಈ ಸಂದರ್ಭ ಡಿಸಿಐಬಿ ಪೊಲೀಸರು ಹಲವಾರು ಬಾರಿ ನಮ್ಮ ಮನೆಗೆ ಬಂದು ಆತನ ಬಗ್ಗೆ ವಿಚಾರಿಸಿ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ಈ ಬಗ್ಗೆ ನಾವು ಅಂದಿನ ಎಸ್ಪಿ ಡಾ.ಸುಬ್ರಹ್ಮಣ್ಯೇಶ್ವರ ರಾವ್‌ರನ್ನು ಭೇಟಿಯಾಗಿ ವಿಷಯ ತಿಳಿಸಿದ್ದೆವು. ಅವರ ನಿರ್ದೇಶನದ ಮೇರೆಗೆ ಡಿಸಿಐಬಿ ಪೊಲೀಸರು ಅಲ್ತಾಫ್‌ನ ಹುಡುಕಾಟವನ್ನು ನಿಲ್ಲಿಸಿ ದ್ದರು. ಕೊನೆಗೆ ಆತನಿಗೆ ನಿರೀಕ್ಷಣಾ ಜಾಮೀನು ಮಾಡಿಸಲಾಗಿತ್ತು. ಏತನ್ಮಧ್ಯೆ ೨೦೧೦ರ ಜನವರಿ ೧೪ರಂದು ಅವನೇ ನಿಖಾ ನಡೆಸಿಕೊಡಬೇಕಾದ ಆತನ ಅಕ್ಕನ ಮದುವೆಗೂ ಅವನಿಗೆ ಬರ ಲಾಗಲಿಲ್ಲ” ಎಂದು ಮುಹಮ್ಮದ್ ಅಶ್ರಫ್ ಅಳಲು ತೋಡಿಕೊಂಡರು. ನಿರೀಕ್ಷಣಾ ಜಾಮೀನು ಪಡೆದು ಮನೆಗೆ ಬಂದ ಅಲ್ತಾಫ್ ತನ್ನ ಭವಿಷ್ಯದ ಬಗ್ಗೆ ಕಂಗಾಲಾಗಿದ್ದ. ಮಾಡದ ತಪ್ಪಿಗಾಗಿ ತನ್ನ ಹೆಸರು ಹಾಳಾಯಿತೆಂದು ತೀರಾ ನೊಂದಿದ್ದ. ಭವಿಷ್ಯದ ದೃಷ್ಟಿಯಿಂದ ಆತನನ್ನು ಬೆಂಗಳೂರಿನಲ್ಲಿ ಯಾವುದಾ ದರೂ ಕಾಲೇಜಿಗೆ ಸೇರಿಸಲು ನಾವು ಬಯಸಿದ್ದೆವು. ಏತನ್ಮಧ್ಯೆ ನಿರೀಕ್ಷಣಾ ಜಾಮೀನು ಪಡೆದಿದ್ದರೂ ಡಿಸಿಐಬಿ ಪೊಲೀಸರು ಅಲ್ತಾಫ್ ಕಲಿಯುತ್ತಿದ್ದ ಕಾಲೇಜಿಗೆ ಹೋಗಿ ‘ಜಾಮೀನು ಪಡೆ ದರೂ ಆತ ನಮ್ಮ ಕೈಗೆ ಸಿಗದೆ ಎಲ್ಲಿಗೆ ಹೋಗುತ್ತಾನೆ’ ಎಂಬ ಬೆದರಿಕೆಯ ಮಾತುಗಳನ್ನಾಡಿದ್ದರು ಎಂದು ಮುಹಮ್ಮದ್ ಅಶ್ರಫ್ ತಿಳಿಸಿದರು. ಇದಾದ ಕೆಲವು ತಿಂಗಳ ಬಳಿಕ ಅಂದರೆ ಮೇ ೩ರಂದು ರಾತ್ರಿ ಇಕ್ಬಾಲ್ ಎಂಬಾತ ಅಲ್ತಾಫ್‌ನಿಗೆ ದೂರವಾಣಿ ಕರೆ ಮಾಡಿ ನಮ್ಮ ಮನೆಯ ಹತ್ತಿರುವ ಇರುವ ಸರ್ಕಲ್ ಬಳಿ ಬರಲು ಹೇಳಿದ್ದ. ಹೀಗೆ ಮನೆಯಿಂದ ಹೊರ ಟಾತನನ್ನು ಡಿಸಿಐಬಿ ಪೊಲೀಸರು ಕಾರಣ ನೀಡದೆ ಬಲವಂತಾಗಿ ಕರೆದೊಯ್ದಿದ್ದರು. ಆರಂಭದಲ್ಲಿ ಈ ವಿಷಯ ನಮಗೆ ತಿಳಿದಿರಲಿಲ್ಲ. ಆತ ನಿಗಾಗಿ ಹುಡುಕಾಡಿದ ನಾವು ರಾತ್ರಿ ೧:೩೦ ಸುಮಾರಿಗೆ ಅಲ್ತಾಫ್ ಕಾಣೆ ಯಾಗಿರುವ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದಾಗ ದೂರು ನೀಡುವ ಅಗತ್ಯ ವಿಲ್ಲ ಎಂದು ಅಲ್ಲಿನ ಸಬ್‌ಇನ್‌ಸ್ಪೆಕ್ಟರ್ ರಾಮಕೃಷ್ಣ ತಿಳಿಸಿದ್ದರು. ಮೇ ೪ರಂದು ಸಂಜೆ ಬೇಡಿ ತೊಡಿಸಿ ಅಲ್ತಾಫ್‌ನನ್ನು ಪೊಲೀಸರು ಮನೆಗೆ ಕರೆದುಕೊಂಡು ಬಂದಿದ್ದರು. ಈ ಸಂದರ್ಭ ಆತನ ಮುಖ ಬಾತುಕೊಂಡಿತ್ತಲ್ಲದೆ ನಡೆ ದಾಡಲಾಗದ ಸ್ಥಿತಿಯಲ್ಲಿದ್ದನು. ಮನೆ ಯಲ್ಲಿದ್ದ ಕಂಪ್ಯೂಟರ್ ಹಾಗೂ ಬೈಕನ್ನು ಪೊಲೀಸರು ತೆಗೆದುಕೊಂಡು ಹೋದರು.ಮೇ ೫ರ ಪತ್ರಿಕೆಯಲ್ಲಿ ನ್ಯಾಯವಾದಿ ಕೊಲೆ ಸಂಚು ಪ್ರಕರಣ ದಲ್ಲಿ ಅಲ್ತಾಫ್‌ನ ಹೆಸರು ಇರುವುದು ತಿಳಿಯಿತು. ಈ ಸಂದರ್ಭ ಡಿಸಿಐಬಿ ಪೊಲೀಸರು ತಮಗೆ ಯಾವುದೇ ಮಾಹಿತಿ ನೀಡಿಲ್ಲ. ಜೈಲಿನಲ್ಲಿ ಅಲ್ತಾಫ್‌ನನ್ನು ಭೇಟಿಯಾದ ಸಂದರ್ಭ ಡಿಸಿಐಬಿ ಪೊಲೀಸರು ತನಗೆ ಚಿತ್ರಹಿಂಸೆ ನೀಡಿರುವುದಲ್ಲದೆ, ಅನ್ನಾಹಾರ ನೀಡದೆ ಸತಾಯಿಸಿರು ವುದಾಗಿ ಅಲ್ತಾಫ್ ಹೇಳಿದ್ದಾನೆ. ಮಾಡದ ತಪ್ಪಿಗಾಗಿ ಡಿಸಿಐಬಿ ಪೊಲೀಸರು ಅಲ್ತಾಫ್‌ನನ್ನು ಮೋಸ ದಿಂದ ಬಂಧಿಸಿರುವುದೇಕೆ ? ಚೇತನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈತನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದರು. ಈ ನಡುವೆ ಮಂಗಳೂರು ಬಾರ್ ಕೌನ್ಸಿಲ್ ವಕೀಲರು ಈ ಕೇಸಿನ ಮೇಲೆ ಯಾವುದೇ ನ್ಯಾಯವಾದಿಗಳು ವಕಾಲತ್ತು ನಡೆಸ ಬಾರದು ಎಂಬ ನಿರ್ಣಯ ಜಾರಿಗೊ ಳಿಸಿದ್ದಾರೆ. ಪೊಲೀಸರೇ ಸೃಷ್ಟಿಸುತ್ತಿರುವ ಕಟ್ಟುಕತೆಗಳಲ್ಲಿ ಫಿಕ್ಸ್ ಮಾಡಲಾ ಗುತ್ತಿರುವ ಅಮಾಯಕರ ಪರ ವಕಾಲತು ವಹಿಸಬಾರದು ಎಂಬ ನಿರ್ಣಯ ತೆಗೆದುಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅಶ್ರಫ್, ಈ ಬಗ್ಗೆ ಸೂಕ್ತ ತನಿಖೆ ಯಾಗಬೇಕೆಂದು ಆಗ್ರಹಿಸಿದರು. ತಾವು ಈಗಾಗಲೆ ಐಜಿಪಿ ಹಾಗೂ ಮಂಗಳೂರು ಕಮಿಷನರೇಟ್‌ನ ಕಮಿಷನರ್‌ಗೆ ಮನವಿ ಸಲ್ಲಿಸಿದ್ದು, ಸೂಕ್ತ ತನಿಖೆ ನಡೆಸುವ ಭರವಸೆ ನೀಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಗೃಹಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸುವುದಾಗಿ ಮುಹಮ್ಮದ್ ಅಶ್ರಫ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅಲ್ತಾಫ್ ತಾಯಿ ಬೀಫಾತಿಮಾ, ಚಿಕ್ಕಮ್ಮ ರಮ್ಲಾ ಬೇಗಂ, ಸೋದರ ಸಂಬಂಧಿ ಅಬ್ದುಲ್ ಅಝೀಝ್ ಉಪಸ್ಥಿತರಿದ್ದರು.
No comments:
Post a Comment