VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 12, 2010

ಜಮೀಯತುಲ್ ಫಲಾಹ್, ಕೆಕೆ‌ಎಂಎಯಿಂದ ಅನಿವಾಸಿ ಭಾರತೀಯರಿಗೆ ಮಾರ್ಗದರ್ಶನ ಕಾರ್ಯಾಗಾರ: ಹಣದಿಂದ ಎಲ್ಲವನ್ನು ಸಾಧಿಸಲು ಸಾಧ್ಯವಿಲ್ಲ: ಯೆನೆಪೋಯ ವಿವಿ ಕುಲಪತಿ ಡಾ.ಸಯ್ಯದ್ ಅಖೀಲ್ ಅಹ್ಮದ್


ಮಂಗಳೂರು, ಮೇ ೧೧: ಅನಿವಾಸಿ ಭಾರತೀಯರ ಸಬಲೀಕರಣ ಯೋಜ ನೆಯನ್ವಯ ಅನಿವಾಸಿ ಭಾರತೀಯ ಕುಟುಂಬದ ಸದಸ್ಯರಿಗೆ ಮಾರ್ಗ ದರ್ಶನ ಕಾರ್ಯಾಗಾರ ಮಂಗಳವಾರ ನಗರದ ಬೋಳಾರ ಶಾದಿಮಹಲ್ ಸಭಾಂಗಣದಲ್ಲಿ ನಡೆಯಿತು. ಜಮೀಯತುಲ್ ಫಲಾಹ್ ಮಂಗಳೂರು ನಗರ ಘಟಕ, ಕುವೈತ್ ಕೇರಳ ಮುಸ್ಲಿಂ ಅಸೋಸಿಯೇಶನ್ ದ.ಕ. ಜಿಲ್ಲಾ ಶಾಖೆಯ ಆಶ್ರಯದಲ್ಲಿ ಸೆಂಟರ್ ಫೋರ್ ಇನ್‌ಫೋರ್ಮೇ ಶನ್ ಮತ್ತು ಗೈಡೆನ್ಸ್ ಇಂಡಿಯಾ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರವನ್ನು ಉದ್ಘಾಟಿಸಿದ ಯೆನೆಪೋಯ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಸಯ್ಯದ್ ಅಖೀಲ್ ಅಹ್ಮದ್ ಮಾತನಾಡಿ, ಹಣದಿಂದ ಎಲ್ಲವನ್ನೂ ಸಾಧಿಸಲು ಸಾಧ್ಯವಿಲ್ಲ. ಹಣ, ಸಂಪತ್ತಿನ ಗಳಿಕೆಯೇ ಬದುಕಿನ ಮುಖ್ಯ ಗುರಿಯಾಗಬಾರದು. ಬೆಳೆಯುತ್ತಿರುವ ಜಾಗತಿಕ ಪರಿಸರದಲ್ಲಿ ಜ್ಞಾನದಾಹ ಕಡಿಮೆಯಾಗಬಾರದು. ಜ್ಞಾನ ಸಂಪಾದನೆಗಾಗಿ ನಮ್ಮನ್ನು ತೆರೆದುಕೊಂಡಾಗ ನಮ್ಮೊಂದಿಗೆ ಹೊಸ ಬದುಕು ಕಾಣಲು ಸಾಧ್ಯ. ಆ ಮೂಲಕ ಬದುಕಿನಲ್ಲಿ ಸಕಾರಾತ್ಮಕ ಬದಲಾವu ಯನ್ನು ಕಾಣಲು ಸಾಧ್ಯ ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಮೀಯತುಲ್ ಫಲಾಹ್ ದ.ಕ. ಮತ್ತು ಉಡುಪಿ ಜಿಲ್ಲಾ ಅಧ್ಯಕ್ಷ ಪಿ.ಬಿ.ಎ.ರಝಾಕ್ ಮಾತನಾಡಿ, ಮುಸ್ಲಿಂ ಸಮುದಾಯದಲ್ಲಿ ಸಾಕಷ್ಟು ಶ್ರೀಮಂತರು, ಆರ್ಥಿಕವಾಗಿ ಸ್ಥಿತಿವಂತರು ಇದ್ದಾರೆ. ಆದರೆ ಇನ್ನೊಂದು ಕಡೆ ಬಹಳಷ್ಟು ಆರ್ಥಿಕ ಸಂಕಷ್ಟದ ಬದುಕಿನಲ್ಲಿ ಕಷ್ಟ ನಷ್ಟದಲ್ಲಿರುವ ಕುಟುಂಬಗಳಿವೆ. ಜೊತೆಗೆ ದುಂದು ವೆಚ್ಚ ಮಾಡಿ ಕಾಲ ಕಳೆಯುವವರೂ ಇದ್ದಾರೆ. ಇಂತಹ ಅಸಮತೋಲನದ ವಾತಾವರಣದಲ್ಲಿ ಸಮುದಾಯ ಅಭಿವೃದ್ಧಿಗಾಗಿ ನಿರ್ದಿಷ್ಟ ಕಾರ್ಯಕ್ರಮಗಳನ್ನು ಸಂಸ್ಥೆ ಹಮಿ ಕೊಂಡಿದೆ. ವ್ಯಕ್ತಿಗತ ಅಭಿವೃದ್ಧಿಗೂ ಗಮನಹರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅನಿವಾಸಿ ಭಾರತೀಯ ಸಂಘಟನೆ ನೀಡಿದ ಸಹಕಾರ ಪ್ರಶಂಸನೀಯ ಎಂದು ಅಭಿನಂದಿಸಿದರು. ಕುವೈತ್, ಕೇರಳ ಮುಸ್ಲಿಂ ಅಸೋಸಿಯೇಶನ್‌ನ ದ.ಕ. ಶಾಖೆಯ ಉಪಾಧ್ಯಕ್ಷ ಅಬ್ದುಲ್ ಹಮೀದ್ ಮೂಲ್ಕಿ ಮಾತನಾಡುತ್ತಾ, ‘ಕಷ್ಟದಲ್ಲಿರು ವವರಿಗೆ ಸಹಾಯ ನೀಡುತ್ತಾ ಬಂದಿರುವ ನಮ್ಮ ಸಂಘಟನೆ ಇದೀಗ ಸಮುದಾಯದ ಬಗ್ಗೆ ದೀರ್ಘಾವಧಿ ಯೋಜನೆ ಹಮ್ಮಿಕೊಂಡಿದೆ. ಗಲ್ಫ್‌ನಲ್ಲಿ ಸಣ್ಣ ಪುಟ್ಟ ಕೆಲಸದಲ್ಲಿ ದುಡಿಯುತ್ತಿರುವ ೧೦ ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಕುವೈತ್, ಕೇರಳ ಮುಸ್ಲಿಂ ಅಸೋಸಿಯೇಶನ್ ವಿದೇಶ ದಲ್ಲಿ ಕಷ್ಟಗಳಲ್ಲಿ ಸಿಲುಕಿದವರಿಗೆ ಸಹಾಯ ನೀಡಿದೆ. ಬಡವರಿಗೆ ಮನೆ ಕಟ್ಟಲು, ವಿದ್ಯಾರ್ಥಿಗಳ ದತ್ತು ಸ್ವೀಕಾರಕ್ಕೆ ಸಂಬಂಧಿಸಿದಂತೆ ಕಾರ್ಯ ಯೋಜನೆ ಯನ್ನು ಹಮ್ಮಿಕೊಂಡಿದೆ. ಜೊತೆಗೆ ವ್ಯಕ್ತಿತ್ವ ವಿಕಸನದ ಕಾರ್ಯಕ್ರಮ, ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ಅಬ್ದುಲ್ ಹಮೀದ್ ತಿಳಿಸಿದರು. ಸಮಾರಂಭದಲ್ಲಿ ಜಮೀಯತುಲ್ ಫಲಾಹ್ ಮಂಗಳೂರು ನಗರ ಘಟಕದ ಅಧ್ಯಕ್ಷ ಎಸ್.ಎ. ಸಿರಾಜ್ ಸ್ವಾಗತಿಸಿದರು. ಅನುಪಮ ಮಾಸಿಕದ ಸಂಪಾದಕಿ ಶಹನಾಝ್ ಎಂ., ತರಬೇತುದಾರರಾದ ಪಿ. ನಿಝಾಮ್ ಹಾಗೂ ಮುಖ್ಯ ಅತಿಥಿ ಅಹ್ಮದ್ ಶರೀಫ್ ಮೊದಲಾದವರು ಉಪಸ್ಥಿತರಿದ್ದರು. ಖಲೀಲ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು

No comments: