
ಮೊದಲು ಕಂಟ್ರೋಲ್ ರೂಂಗೆ ಮಾಹಿತಿ: ಪೊಲೀಸ್ ಇಲಾಖೆಯಿಂದ ಶ್ಲಾಘನೆ
ಮಂಗಳೂರು, ಮೇ 24: ‘‘ಮರವೂರು ಗುಡ್ಡ ಸಮೀಪದ ಮಸೀದಿಯಿಂದ ಬೆಳಗ್ಗೆ 5:55ಕ್ಕೆ ಪ್ರಾರ್ಥನೆ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಕೆಂಜಾರು ರನ್ವೇಯತ್ತ ದೃಷ್ಟಿ ಹಾಯಿಸಿದೆ. ರನ್ವೇಯಿಂದ ಸುಮಾರು 20 ಮೀಟರ್ ಎಡಬದಿಗೆ ವಿಮಾನ ವೊಂದು ವೈಬ್ರೇಶನ್ ರೀತಿಯಲ್ಲಿ ಬೀಳುವುದನ್ನು ಕಂಡೆ. ನಾಲ್ಕೈದು ಸೆಕೆಂಡ್ಗಳಲ್ಲೇ ಮೂರ್ನಾಲು ಸಿಡಿಲು ಬಡಿದ ರೀತಿಯಲ್ಲಿ ಭೀಕರ ಶಬ್ದ. ತಕ್ಷಣ ಬೆಂಕಿ ಹತ್ತಿಕೊಂಡಿತ್ತು.
‘‘ದುರಂತದ ವೇಳೆ ವಿಮಾನದ ಒಡೆದು ಮುರಿದ ಭಾಗವೊಂದರಲ್ಲಿ ಮಗುವೊಂದು ಅಂಕಲ್ ಅಂಕಲ್ ಎಂದು ಬೊಬ್ಬಿಡುತ್ತಿತ್ತು. ಒಂದಿಬ್ಬರು ಕೆಳಗ್ಗೆ ಜಿಗಿಯುತ್ತಿದ್ದರು. ಒಳಗಿನಿಂದ ಜೋರಾಗಿ ಕಿರುಚಾಟ ಕೇಳಿಸುತ್ತಿತ್ತು. ಅಷ್ಟರಲ್ಲಿ ವಿಮಾನ ಮತ್ತೊಮ್ಮೆ ಜೋರಾಗಿ ಶಬ್ದದೊಂದಿಗೆ ಸ್ಫೋಟಗೊಂಡಿತ್ತು. ವಿಮಾನದಲ್ಲಿದ್ದವರೆಲ್ಲಾ ಜೀವಂತವಾಗೇ ಕಣ್ಣೆದುರೇ ಉರಿದು ಹೋದರು’’ ಎನ್ನುತ್ತಾ ಮುಹಮ್ಮದ್ ಸಮೀರ್ ಘಟನೆಯ ಬಗ್ಗೆ ಮರುಕಳಿಸುತ್ತಾ ಭಾವುಕರಾಗುತ್ತಾರೆ.
6:30ರ ಸಮಯಕ್ಕೆ ನಾನು ಈ ಬಗ್ಗೆ ಮೊಬೈಲ್ ಮೂಲಕ ಕಂಟ್ರೋಲ್ ರೂಂಗೆ ಕರೆ ಮಾಡಿ ವಿಷಯ ತಿಳಿಸಿದ್ದೆ’’ ಎಂದು ಘಟನೆಯ ಬಗ್ಗೆ ನೆನಪಿಸಿಕೊಳ್ಳುತ್ತಾರೆ ಮರವೂರು ನಿವಾಸಿ ಮುಹಮ್ಮದ್ ಸಮೀರ್. ಮುಹಮ್ಮದ್ ಸಮೀರ್ ಅವರೇ ಕಂಟ್ರೋಲ್ ರೂಂಗೆ ಕರೆ ಮಾಡಿ ಪ್ರಥಮವಾಗಿ ಮಾಹಿತಿ ನೀಡಿದ್ದರೆಂಬು ದನ್ನು ಇಂದು ಕಮಿಷನರ್ ಸೀಮಂತ್ ಕುಮಾರ್ ಸಿಂಗ್ರವರೇ ಪತ್ರಿಕಾಗೋಷ್ಠಿಯಲ್ಲಿ ದೃಢಪಡಿಸಿದ್ದಾರೆ. ‘‘ದಿನಾ ಬೆಳಗ್ಗೆ ನಾನು ಈ ದಾರಿಯಲ್ಲಿ ಹೋಗುವಾಗ ವಿಮಾನ ಬಂದಿಳಿಯುವ, ಹಾರುವ ದೃಶ್ಯಗಳನ್ನು ನೋಡುತ್ತಿರುತ್ತೇನೆ.
ಅಂದು ಕೂಡಾ ಹಾಗೇ ನೋಡುತ್ತಿದ್ದಾಗ ಕಣ್ಣೆದುರು ಈ ಘಟನೆ ಸಂಭವಿಸಿದೆ. ಕಣ್ಣೆದುರೇ ವಿಮಾನ ಹೊತ್ತಿ ಉರಿಯುತ್ತಿದ್ದಾಗ ನಾನು ಕೇವಲ ಮೂಕ ಪ್ರೇಕ್ಷಕನಾದೆ. ಆದರೆ ಕಂಟ್ರೋಲ್ರೂಂಗೆ ತಿಳಿಸುವ ಕೆಲಸ ಮಾಡಿದ್ದೇನೆ’’ ಎನ್ನುತ್ತಾರೆ ಮುಹಮ್ಮದ್ ಸಮೀರ್.‘‘ಅದಾಕ್ಷಣ ತನಗೆ ಅತ್ತ ಕಡೆ ಕಂಟ್ರೋಲ್ ರೂಂ ಹಾಗೂ ಬಜ್ಪೆ ವಿಮಾನ ನಿಲ್ದಾಣದಿಂದಲೂ ಕರೆ ಬಂದು ನನ್ನಿಂದ ವಿಷಯವನ್ನು ದೃಢೀಕರಿಸಿಕೊಳ್ಳಲಾಗಿತ್ತು.
ನಂತರ ಸುಮಾರು ಒಂದೈದು ನಿಮಿಷಗಳಲ್ಲೇ ರನ್ವೇಯಿಂದ ಏರ್ಇಂಡಿಯಾದ ದೊಡ್ಡ ಎರಡು ವಾಹನಗಳು ಬಿಳಿ ನೊರೆಯ ನೀರು ಹರಿಸಲು ಆರಂಭಿಸಿ ದ್ದವು. ಆದರೆ ಆ ನೀರು ವಿಮಾನದತ್ತ ತಲುಪುದ ಕಾರಣ ನಾಲ್ಕೈದು ನಿಮಿಷಗ ಳಲ್ಲೇ ನೀರು ಪೂರೈಕೆಯನ್ನು ನಿಲ್ಲಿಸಿ ಮತ್ತೊಂದು ಕಡೆಯ ದಾರಿಯ ಮೂಲಕ ವಿಮಾನವಿದ್ದ ಸ್ಥಳದತ್ತ ಏರ್ ಇಂಡಿಯಾದ ವಾಹನಗಳು ಆಗಮಿಸಿದ್ದವು. 6:30ರ ಸುಮಾರಿಗೆ ಕಮಿಷನರ್ರವರು ನನಗೆ ಕರೆ ಮಾಡಿ ವಿಷಯ ದೃಢೀಕರಿಸಿಕೊಂಡು ಘಟನಾ ಸ್ಥಳಕ್ಕೆ ತೆರಳುವ ದಾರಿಯ ಬಗ್ಗೆ ವಿಚಾರಿಸಿದ್ದರು. ನಂತರ ಅರ್ಧ ಗಂಟೆ ಯಲ್ಲೇ ಜನರು, ವಿವಿಧ ಇಲಾಖೆಯವರು ಸ್ಥಳದಲ್ಲಿದ್ದರು’’.
No comments:
Post a Comment