
ದುಬೈ, ಮೇ 22: ಮಂಗಳೂರಿನಲ್ಲಿ ವಿಮಾನ ಅಪಘಾತಕ್ಕೀಡಾದ ಸುದ್ದಿ ತಿಳಿಯುತ್ತಿದ್ದಂತೆ ದುಬೈ ಜನತೆ ದಿಗ್ಭಮೆಗೊಂಡಿದ್ದಾರೆ. ಘಟನೆ ನಡೆದ ಕೂಡಲೆ ಸಾವಿರಾರು ಕರೆಗಳು ದುಬೈಯನ್ನು ತಲುಪಿ ಅಲ್ಲಿನ ಭಾರತೀಯರನ್ನು ಆತಂಕಕ್ಕೀಡು ಮಾಡಿದೆ.
ಶುಕ್ರವಾರ ಮತ್ತು ಶನಿವಾರ ಹೆಚ್ಚಿನವರಿಗೆ ರಜೆ ಇದ್ದುದರಿಂದ ಎಲ್ಲರೂ ತಮ್ಮ ತಮ್ಮ ಕೋಣೆಗಳಲ್ಲಿ ಟಿವಿಯ ಮುಂದೆ ವಿಮಾನ ದುರಂತದ ದೃಶ್ಯಗಳನ್ನು ನೋಡುವುದಲ್ಲೇ ತಲ್ಲೀನರಾಗಿದ್ದರು.
ಗಲ್ಫ್ ನ್ಯೂಸ್, ಖಲೀಜ್ ಟೈಮ್ಸ್‌ನಂತಹ ಇಂಗ್ಲಿಷ್ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿ ಅರ್ಧಗಂಟೆಗೊಮ್ಮೆ ವಿಮಾನ ದುರಂತದ ವರದಿಗಳನ್ನು ನೀಡಲಾಗುತ್ತಿತ್ತು.
ಹಮ್ ಎಫ್.ಎಂ 106.2 ರೇಡಿಯೊ ಚಾನೆಲ್‌ನಲ್ಲಿ ಪ್ರತಿ ಅರ್ಧ ಗಂಟೆಗೊಮ್ಮೆ ದುರಂತದ ಸುದ್ದಿ ಬಿತ್ತರವಾಗತೊಡಗಿದವು. ಸತ್ತವರ ವಿವರ, ಬದುಕುಳಿದವರ ಮಾಹಿತಿಯನ್ನು ನೀಡತೊಡಗಿದವು. ಅಷ್ಟೇಅಲ್ಲದೆ ಇಂಡಿಯನ್ ಕನ್ಸುಲೇಟ್ ಜನರಲ್ ಶರ್ಮಾರ ಸಂದರ್ಶನ ನಡೆಸಿದ ರೇಡಿಯೊ ಚಾನೆಲ್ ಈಗಲೂ ಅದನ್ನು ನಿರಂತರವಾಗಿ ಪ್ರಸಾರ ಮಾಡುತ್ತಿದೆ.
ವಿಮಾನ ಅಪಘಾತದಲ್ಲಿ ಕೇರಳದ 60 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಹೆಚ್ಚಿನವರು ಕಾಸರಗೋಡು ಜಿಲ್ಲೆಯವರಾಗಿದ್ದಾರೆ. ಘಟನೆಯಿಂದಾಗಿ ಇಲ್ಲಿನ ಮಲಯಾಳಿಗಳಿಗೆ ತೀವ್ರ ಆಘಾತವಾಗಿದೆ. ರಜಾ ದಿನಗಳನ್ನು ಕಳೆಯಲು ಭಾರತದಿಂದ ದುಬೈಗೆ ಬಂದಿದ್ದ ಹಲವು ಮಕ್ಕಳು ಘಟನೆಯಲ್ಲಿ ಸಾವಿಗೀಡಾಗಿದ್ದಾರೆ.
ಕರ್ನಾಟಕದಲ್ಲಿ ನಡೆಯುತ್ತಿರುವ ಕೋಮುಗಲಭೆ, ಪಬ್ ದಾಳಿಯಂತಹ ಘಟನೆಗಳನ್ನು ಮಾತ್ರ ಪ್ರಕಟಿಸುತ್ತಿದ್ದ ಗಲ್ಫ್ ನ್ಯೂಸ್, ಖಲೀಜ್ ಟೈಮ್ಸ್‌ನಂತಹ ಪತ್ರಿಕೆಗಳಲ್ಲಿ ಇದೇ ಮೊದಲ ಬಾರಿಗೆ ಇಂತಹದ್ದೊಂದು ಸುದ್ದಿ ಪ್ರಕಟವಾಗಿರುವುದು ಎಲ್ಲರನ್ನು ಆಘಾತಕ್ಕೀಡು ಮಾಡಿದೆ.
ಇದೇ ಸಂದರ್ಭದಲ್ಲಿ ಟಿಕೆಟ್ ಸಿಗದೆ ಹಿಂದಿರುಗಿದವರು ಸಂತಸಪಟ್ಟಿದ್ದು, ವಿಮಾನ ದುರಂತದ ಮಾಹಿತಿ ತಿಳಿದು ಮರುಕ ವ್ಯಕ್ತಪಡಿಸಿದ್ದಾರೆ.
*ಇರ್ಶಾದ್ ಮೂಡಬಿದ್ರೆ
ದುರಂತ ಹೀಗೆ ಸಂಭವಿಸಿತೆ?
ಎತ್ತರದ ಗುಡ್ಡಪ್ರದೇಶದಲ್ಲಿರುವ ಮಂಗಳೂರು ವಿಮಾನನಿಲ್ದಾಣದ ರನ್‌ವೇಯು ಹೊಚ್ಚಹೊಸದು. ಸಮತಲವಾದ ಭೂಮಿಯಲ್ಲಿ ಚಾಚಿಕೊಂಡಿರುವ ಈ ರನ್‌ವೇಯ ಎರಡೂ ತುದಿಗಳು ಇಳಿಜಾರಾಗಿವೆ. ಹೀಗಾಗಿ ಒಂದು ವೇಳೆ ವಿಮಾನವನ್ನು ಪೈಲಟ್ ಭೂಸ್ಪರ್ಶ ಮಾಡಿಸುವಾಗ ಅಥವಾ ಟೇಕ್ ಆಫ್ ಮಾಡಿಸುವಾಗ ತಪ್ಪು ನಿರ್ಧಾರ ಕೈಗೊಂಡಲ್ಲಿ, ವಿಮಾನವು ರನ್‌ವೇಯನ್ನು ಮೀರಿ ಧಾವಿಸುವುದು ಮತ್ತು ನೇರವಾಗಿ ಬೆಟ್ಟದ ಕೆಳಗೆ ಉರುಳುವುದು. ಶನಿವಾರ ನಡೆದ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಐ್ಡ 812 ವಿಮಾನದ ದುರಂತವೂ ಪ್ರಾಯಶಃ ಹೀಗೆಯೇ ಸಂಭವಿಸಿರುವಂತೆ ಕಾಣುತ್ತಿದೆ.
ವಿಮಾನ
ಅತ್ಯಾಧುನಿಕ ತಂತ್ರಜ್ಞಾನದ ಬೋಯಿಂಗ್ ಐ್ಡ812 ವಿಮಾನವು ಜನವರಿ 15, 2008ರಂದು ಏರ್‌ಇಂಡಿಯಾಗೆ ಸೇರ್ಪಡೆಗೊಂಡಿತ್ತು.
ಪ್ರಯಾಣಿಕರು
ಒಟ್ಟು ಸಂಖ್ಯೆ: 166 (137 ವಯಸ್ಕರು, 19 ಮಕ್ಕಳು, 4 ಶಿಶುಗಳು ಹಾಗೂ 6 ವಿಮಾನ ಸಿಬ್ಬಂದಿಗಳು). ಬದುಕುಳಿದವರು: 8
ರನ್‌ವೇ
ವಿಸ್ತೀರ್ಣ: 5800 ಅಡಿ (1740 ಮೀಟರ್).
ಸಮುದ್ರ ಮಟ್ಟದಿಂದ ಎತ್ತರ: 336 ಅಡಿ (101 ಮೀ.).
ವಿಮಾನದ ಪೈಲಟ್
ಸರ್ಬಿಯ ಮೂಲದ ಬ್ರಿಟಿಷ್ ಪ್ರಜೆ ಕ್ಯಾಪ್ಟನ್ ಝ್ಲಾಟ್ಕೊ ಗ್ಲುಸಿಕಾ. 55 ವರ್ಷ ವಯಸ್ಸಿನ ಗ್ಲುಸಿಕಾಗೆ 10 ಸಾವಿರ ತಾಸುಗಳ ಹಾರಾಟದ ಅನುಭವವಿತ್ತು.
ಹವಾಮಾನ
ವಿಮಾನ ಅಪಘಾತಕ್ಕೀಡಾದಾಗ ಮಳೆಯಿರಲಿಲ್ಲ. ಗಾಳಿ ಕೂಡಾ ಶಾಂತವಾಗಿತ್ತು. ಆದರೆ ವಿಮಾನನಿಲ್ದಾಣದಲ್ಲಿ ದಟ್ಟವಾದ ಮಂಜಿತ್ತು. ದೃಗ್ಗೋಚರತೆಯು 6 ಕಿ.ಮೀ.ನಷ್ಟಿದ್ದು, ಇದು ಅಗತ್ಯಕ್ಕಿಂತಲೂ ಅಧಿಕ.
ದುರಂತಕ್ಕೆ ಕಾರಣ?
ತರ್ಕ 1
ಭೂಸ್ಪರ್ಶ ಮಾಡುತ್ತಿದ್ದಂತೆಯೇ ವಿಮಾನವು ರನ್‌ವೇ ಮೀರಿ ಧಾವಿಸಿತ್ತು. ಭೂಸ್ಪರ್ಶದ ಬಳಿಕ ವಿಮಾನವು ನಿಲ್ಲಲಿಲ್ಲ. ಅದರ ಚಕ್ರಗಳು ಸ್ಫೋಟಗೊಂಡಿದ್ದಿರಬಹುದೇ?
ತರ್ಕ 2
ವಿಮಾನವು ರನ್‌ವೇಯನ್ನು ಮೀರಿ ಸಾಗಿ, ಬೇಲಿಯೊಂದಕ್ಕೆ ಢಿಕ್ಕಿ ಹೊಡೆಯಿತು ಮತ್ತು ವಿಮಾನದ ಗಡಿಗೋಡೆಯನ್ನು ಭೇದಿಸಿ,ಕಮರಿಗೆ ಬಿದ್ದಿತು ಮತ್ತು ಬೆಂಕಿಹತ್ತಿಕೊಂಡು ಉರಿಯಿತು.
No comments:
Post a Comment