May 30, 2010
ಮಿಕ್ಸೆಡ್ ಡಬಲ್ಸ್; ದ್ವಿತೀಯ ಸುತ್ತಿಗೆ ಪೇಸ್-ಬ್ಲೇಕ್ ಜೋಡಿ
ಪ್ಯಾರಿಸ್,30:ಇಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಫ್ರೆಂಚ್ ಓಪನ್ ಟೆನಿಸ್ ಟೂರ್ನಮೆಂಟ್‌ನ ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಭಾರತದ ಲಿಯಾಂಡರ್ ಪೇಸ್ ಮತ್ತು ಜಿಂಬ್ವಾಬೆಯ ಕ್ಲಾರಾ ಬ್ಲೇಕ್ ಜೋಡಿ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದು, ತಮ್ಮ ಅಭಿಯಾನವನ್ನು ಆರಂಭಿಸಿದ್ದಾರೆ.
ಶುಕ್ರವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ದ್ವಿತೀಯ ಶ್ರೇಯಾಕಿಂತರಾದ ಪೇಸ್-ಬ್ಲೇಕ್ ಜೋಡಿ ಎದುರಾಳಿಯಾದ ಸ್ಥಳೀಯ ಜೋಡಿ ಪೌಲಿನ್ ಪರ್ಮೆಂಟೀಯರ್ ಮತ್ತು ಮಾರ್ಕ್ ಗಿಕ್‌ಕ್ವೇಲ್‌ರನ್ನು 6-3 6-3ರ ನೇರ ಸೆಟ್‌ನಲ್ಲಿ ಮಣಿಸಿ ಮುನ್ನಡೆದರು.
ಪಂದ್ಯವನ್ನು ಕೇವಲ 59 ನಿಮಿಷಗಳಲ್ಲಿ ಪೇಸ್-ಕ್ಲಾರಾ ಜೋಡಿ ವಶಪಡಿಸಿಕೊಂಡಿತ್ತು.
ಮತ್ತೊಂದೆಡೆ ಅಗ್ರ ಶ್ರೇಯಾಂಕಿತರಾದ ಭಾರತದ ಮಹೇಶ್ ಭೂಪತಿ ಮತ್ತು ಲಿಜೆಲ್ ಹ್ಯೂಬರ್ ಜೋಡಿ ತಮ್ಮ ಅಭಿಯಾನವನ್ನು ಆರಂಭಿಸಲಿದ್ದು, ಮೊದಲ ಪಂದ್ಯದಲ್ಲಿ ತೈಪೆ-ಅಮೆರಿಕಾದ ಯಂಗ್-ಜಾನ್ ಚಾನ್ ಮತ್ತು ಎರಿಕ್ ಬುಟೊರಾಕ್ ಜೋಡಿರನ್ನು ಎದುರಿಸಲಿದ್ದಾರೆ.
-wd
Subscribe to:
Post Comments (Atom)
No comments:
Post a Comment