
ಪುಣೆ, 30:ಇತ್ತೀಚೆಗಷ್ಟೇ ಅಂತ್ಯಗೊಂಡ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತಕ್ಕೆ ಎದುರಾದ ಹೀನಾಯ ಸೋಲಿಗೆ ಐಪಿಎಲ್ ಪಾರ್ಟಿ ಕಾರಣವಲ್ಲ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ. ಆ ಮೂಲಕ ನಾಯಕ ಮಹೇಂದ್ರ ಸಿಂಗ್ ಧೋನಿ ತದ್ವಿರುದ್ಧವಾಗಿ ಹೇಳಿಕೆ ನೀಡಿದ್ದಾರೆ.
ಈ ಹಿಂದೆ ವಿಶ್ವಕಪ್‌ನ ವೈಫಲ್ಯಕ್ಕೆ ತಡ ರಾತ್ರಿ ನಡೆಯುತ್ತಿದ್ದ ಐಪಿಎಲ್ ಪಾರ್ಟಿ ಕಾರಣ ಎಂದು ಧೋನಿ ಕಾರಣ ನೀಡಿದ್ದರು. ಚೊಚ್ಚಲ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಧೋನಿ ಪಡೆ ನಂತರ ನಡೆದಿದ್ದ ಎರಡೂ ವಿಶ್ವಕಪ್‌ಗಳಲ್ಲೂ ಸೆಮಿಗೇರಲು ವಿಫಲವಾಗಿತ್ತು.
ಎಲ್ಲಾ ಆಟಗಾರರು ತಮ್ಮ ಮೇಲಿರುವ ಜವಾಬ್ದಾರಿಯನ್ನು ಅರಿತು ಪಂದ್ಯವನ್ನಾಡಬೇಕು ಎಂದು ಲಿಟ್ಲ್ ಮಾಸ್ಟರ್ ಕಿವಿಮಾತು ನೀಡಿದ್ದಾರೆ.
ಪಾರ್ಟಿಗಳು ಮತ್ತು ಪ್ರದರ್ಶನ ಎರಡೂ ಪ್ರತ್ಯೇಕವಾಗಿದ್ದು, ಒಂದಕ್ಕೊಂದು ಸಂಬಂಧವಿಲ್ಲ. ಅಲ್ಲದೆ ಪ್ರತಿ ಆಟಗಾರನು ತಮ್ಮ ಜವಾಬ್ದಾರಿ ಅರಿತಿರಬೇಕು ಎಂದು ಸಚಿನ್ ವಿವರಿಸಿದರು.
ಮಾತು ಮುಂದುವರಿಸಿದ ಅವರು ಕ್ರಿಕೆಟ್‌ನಲ್ಲಿ ಪಾರ್ಟಿಗಳು ಹೊಸ ವಿಷಯವೇನಲ್ಲ. ಯಾಕೆಂದರೆ ಈ ಹಿಂದೆಯೂ ಕ್ರಿಕೆಟ್‌ನಲ್ಲಿ ಪಾರ್ಟಿಗಳನ್ನು ಆಚರಿಸಲಾಗುತ್ತಿತ್ತು. ಆದರೆ ಪ್ರತಿಯೊಬ್ಬರು ತಮ್ಮ ಜವಾಬ್ದಾರಿಯನ್ನು ಅರಿತು ಆಡಬೇಕಿದೆ ಎಂದವರು ಹೇಳಿದರು.
ಆದರೂ ನಾನು ಐಪಿಎಲ್ ಪಾರ್ಟಿಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಯಾಕೆಂದರೆ ಮತ್ತೊಂದು ಪಂದ್ಯಕ್ಕೆ ಸಿದ್ಧವಾಗಲು ಸಮಯ ಮೀಸಲು ಇಡುತ್ತಿದ್ದೆ ಎಂದವರು ಹೇಳಿದರು.
ಐಪಿಎಲ್ ಮೂರನೇ ಆವೃತ್ತಿಯಲ್ಲಿ ಸಚಿನ್ ನೇತೃತ್ವದ ಮುಂಬೈ ತಂಡ ರನ್ನರ್-ಅಪ್ ಪ್ರಶಸ್ತಿ ಗೆದ್ದುಕೊಂಡತ್ತು.
wd
No comments:
Post a Comment