VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 18, 2010

ಗ್ರಾಮ ಪಂಚಾಯತ್ ಪಲಿತಾಂಶ......

ಪುತ್ತೂರು ತಾಲೂಕಿನಲ್ಲಿ ಕಾಂಗ್ರೆಸ್ ಮೇಲುಗೈ

ಪುತ್ತೂರು, ಮೇ17: ತಾಲೂಕಿನ 37 ಗ್ರಾ.ಪಂ.ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ತಾಲೂಕಿನ ಒಟ್ಟು 563 ಸ್ಥಾನಗಳ ಪೈಕಿ ಕಾಂಗ್ರೆಸ್ ಬೆಂಬಲಿತರು 275 ಸ್ಥಾನ ಗಳಲ್ಲಿ ಜಯಗಳಿಸಿದ್ದಾರೆ. ತೀರ ಪ್ರತಿಸ್ಪರ್ಧೆ ನೀಡಿದ ಬಿಜೆಪಿ ಬೆಂಬಲಿತರು 266 ಸ್ಥಾನಗಳನ್ನು ಗಳಿಸಲು ಶಕ್ತರಾಗಿ ದ್ದಾರೆ. ಎಸ್‌ಡಿಪಿಐ ಬೆಂಬಲಿತರು 5 ಸ್ಥಾನ ಗಳನ್ನು ತಮ್ಮದಾಗಿಸಿ ಕೊಂಡಿದ್ದಾರೆ 17 ಸ್ಥಾನಗಳಲ್ಲಿ ಪಕ್ಷಾತೀತ ನೆಲೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ವಿಜಯಿಗಳಾಗಿದ್ದಾರೆ.

ಕಾಂಗ್ರೆಸ್ ಬೆಂಬಲಿತರು ತಾಲೂಕಿನ 37 ಗ್ರಾ.ಪಂ. ಪೈಕಿ 19ರಲ್ಲಿ ಬಹುಮತ ಸಾಧಿಸಿದ್ದಾರೆ. ಬಿಜೆಪಿಗೆ 15 ಗ್ರಾ.ಪಂ. ಅಧಿಕಾರ ಲಭಿಸುವಂತಾಗಿದೆ. ಪಾಣಾಜೆೆ ಗ್ರಾ.ಪಂ.ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲ ಸಾಧಿಸಿದೆ. ಮರ್ದಾಳ ಮತ್ತು ಸವಣೂರು ಗ್ರಾ.ಪಂ.ಗಳಲ್ಲಿ ಆತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಕಾಂಗ್ರೆಸ್ ಬೆಂಬಲಿತ: ಪೈಕಿ ಕಬಕದಲ್ಲಿ ಒಟ್ಟು 18 ಸ್ಥಾನಗಳಲ್ಲಿ 11 ಕಾಂಗ್ರೆಸ್, 6 ಬಿಜೆಪಿ, 1 ಪಕ್ಷೇತರ, ಕೋಡಿಂಬಾಡಿಯಲ್ಲಿ 11 ಸ್ಥಾನಗಳ ಪೈಕಿ 7 ಕಾಂಗ್ರೆಸ್ 4 ಬಿಜೆಪಿ, ನೆಕ್ಕಿಲಾಡಿಯಲ್ಲಿ 10 ಸ್ಥಾನಗಳ ಪೈಕಿ 8 ಕಾಂಗ್ರೆಸ್, 2 ಬಿಜೆಪಿ, ಕೌಕ್ರಡಿಯಲ್ಲಿ 16 ಸ್ಥಾನಗಳ ಪೈಕಿ 10 ಕಾಂಗ್ರೆಸ್ 6 ಬಿಜೆಪಿ, ಶಿರಾಡಿ ಯಲ್ಲಿ 8 ಸ್ಥಾನಗಳ ಪೈಕಿ 5 ಕಾಂಗ್ರೆಸ್ 1 ಬಿಜೆಪಿ, ಪಕ್ಷೇತರ 2, ಐತ್ತೂರುನಲ್ಲಿ 15 ಸ್ಥಾನಗಳ ಪೈಕಿ 8 ಕಾಂಗ್ರೆಸ್ 7 ಬಿಜೆಪಿ, ಕಡಬದಲ್ಲಿ 22 ಸ್ಥಾನಗಳ ಪೈಕಿ 18 ಕಾಂಗ್ರೆಸ್, 4 ಬಿಜೆಪಿ, ಕುಟ್ರುಪಾಡಿ ಯಲ್ಲಿ 17 ಸ್ಥಾನಗಳ ಪೈಕಿ 9 ಕಾಂಗ್ರೆಸ್, 8 ಬಿಜೆಪಿ, ಮುಂಡೂರುನಲ್ಲಿ 18 ಸ್ಥಾನ ಗಳ ಪೈಕಿ 17 ಕಾಂಗ್ರೆಸ್ 1 ಬಿಜೆಪಿ, ಕೊಳ್ತಿಗೆ ಯಲ್ಲಿ 16 ಸ್ಥಾನಗಳ ಪೈಕಿ 8 ಕಾಂಗ್ರೆಸ್, 7 ಬಿಜೆಪಿ, 1 ಪಕ್ಷೇತರ, ಕೆದಂಬಾಡಿಯಲ್ಲಿ 21 ಸ್ಥಾನಗಳ ಪೈಕಿ 14 ಕಾಂಗ್ರೆಸ್ 7 ಬಿಜೆಪಿ, ಒಳಮೊಗ್ರಿನಲ್ಲಿ 13 ಸ್ಥಾನಗಳ ಪೈಕಿ 8 ಕಾಂಗ್ರೆಸ್ 5 ಬಿಜೆಪಿ, ಅರಿಯಡ್ಕದಲ್ಲಿ 22 ಸ್ಥಾನಗಳ ಪೈಕಿ 14 ಕಾಂಗ್ರೆಸ್ 8 ಬಿಜೆಪಿ, ನೆ. ಮೂಡ್ನೂರಿನಲ್ಲಿ 21 ಸ್ಥಾನಗಳ ಪೈಕಿ 12 ಕಾಂಗ್ರೆಸ್, 5 ಬಿಜೆಪಿ, 4 ಪಕ್ಷೇತರ, ಗೋಳಿ ತೊಟ್ಟುವಿನಲ್ಲಿ 15 ಸ್ಥಾನಗಳ ಪೈಕಿ 10 ಕಾಂಗ್ರೆಸ್ 5 ಬಿಜೆಪಿ, ಬಲ್ನಾಡಿನಲ್ಲಿ 10 ಸ್ಥಾನಗಳ ಪೈಕಿ 8 ಕಾಂಗ್ರೆಸ್ 2 ಬಿಜೆಪಿ, ನೆಲ್ಯಾಡಿಯಲ್ಲಿ 13 ಸ್ಥಾನಗಳ ಪೈಕಿ 8 ಕಾಂಗ್ರೆಸ್, 5 ಬಿಜೆಪಿ, ಬಿಳಿನೆಲೆ ಯಲ್ಲಿ 9 ಸ್ಥಾನಗಳ ಪೈಕಿ 6 ಕಾಂಗ್ರೆಸ್ 3 ಬಿಜೆಪಿ, ಬೆಳಂದೂರುನಲ್ಲಿ 14 ಸ್ಥಾನಗಳ ಪೈಕಿ 10 ಕಾಂಗ್ರೆಸ್ 4 ಬಿಜೆಪಿ ಸ್ಥಾನ ಪಡೆದಿದೆ.

ಬಿಜೆಪಿ ಬೆಂಬಲಿತ: ಉಪ್ಪಿನಂಗಡಿ ಯಲ್ಲಿ 18 ಸ್ಥಾನಗಳ ಪೈಕಿ 13 ಬಿಜೆಪಿ, 5 ಕಾಂಗ್ರೆಸ್, ಬನ್ನೂರಿನಲ್ಲಿ 12 ಸ್ಥಾನಗಳ ಪೈಕಿ 8 ಬಿಜೆಪಿ, 4 ಕಾಂಗ್ರೆಸ್, ಪೆರಾಬೆಯಲ್ಲಿ 14 ಸ್ಥಾನಗಳ ಪೈಕಿ 8 ಬಿಜೆಪಿ, 6 ಕಾಂಗ್ರೆಸ್, ಹಿರೆಬಂಡಾಡಿ ಯಲ್ಲಿ 13 ಸ್ಥಾನಗಳ ಪೈಕಿ 8 ಬಿಜೆಪಿ, 5 ಕಾಂಗ್ರೆಸ್, ಕೊಲದಲ್ಲಿ 15 ಸ್ಥಾನಗಳ ಪೈಕಿ 8 ಬಿಜೆಪಿ, 7 ಕಾಂಗ್ರೆಸ್, ಅಲಂಕಾರಿ ನಲ್ಲಿ 10 ಸ್ಥಾನಗಳ ಪೈಕಿ 10 ಬಿಜೆಪಿ, ಆರ್ಯಾಪುವಿನಲ್ಲಿ 22 ಸ್ಥಾನಗಳ ಪೈಕಿ 14 ಬಿಜೆಪಿ, 7 ಕಾಂಗ್ರೆಸ್, 1 ಪಕ್ಷೇತರ. ಬಡಗನ್ನೂರಿನಲ್ಲಿ 17 ಸ್ಥಾನಗಳ ಪೈಕಿ 13 ಬಿಜೆಪಿ, 4 ಕಾಂಗ್ರೆಸ್, ಬಜತ್ತೂರಿನಲ್ಲಿ 14 ಸ್ಥಾನಗಳ ಪೈಕಿ 7 ಬಿಜೆಪಿ, 6 ಕಾಂಗ್ರೆಸ್, 1 ಪಕ್ಷೇತರ, ನೆರಿಮೊಗರಿ ನಲ್ಲಿ 24 ಸ್ಥಾನಗಳ ಪೈಕಿ 13 ಬಿಜೆಪಿ, 11 ಕಾಂಗ್ರೆಸ್, ನೂಜಿಬಾಳ್ತಿಲದಲ್ಲಿ 13 ಸ್ಥಾನಗಳ ಪೈಕಿ 9 ಬಿಜೆಪಿ, 4 ಕಾಂಗ್ರೆಸ್, ಕೊಂಬಾರಿನಲ್ಲಿ 9 ಸ್ಥಾನಗಳ ಪೈಕಿ 8 ಬಿಜೆಪಿ, 1 ಕಾಂಗ್ರೆಸ್, ಕಾಣಿಯೂರಿ ನಲ್ಲಿ 16 ಸ್ಥಾನಗಳ ಪೈಕಿ 13 ಬಿಜೆಪಿ, 3 ಕಾಂಗ್ರೇಸ್, ರಾಮಕುಂಜದಲ್ಲಿ 14 ಸ್ಥಾನಗಳ ಪೈಕಿ 10 ಬಿಜೆಪಿ, 3 ಕಾಂಗ್ರೆಸ್, 1 ಎಸ್‌ಡಿಪಿಐ, ಬೆಟ್ಟಂಪಾಡಿ ಯಲ್ಲಿ 17 ಸ್ಥಾನಗಳ ಪೈಕಿ 15 ಬಿಜೆಪಿ, 2 ಕಾಂಗ್ರೆಸ್ ಸ್ಥಾನ ಪಡೆದಿದೆ.
ಪಾಣಾಜೆ ಗ್ರಾ.ಪಂ. ಕಾಂಗ್ರೆಸ್ ಮತ್ತು ಬಿಜೆಪಿ ತಲಾ 9 ಸ್ಥಾನಳೊಂದಿಗೆ ಸವ ಬಲ ಪಡೆದರೆ, ಮರ್ದಾಳ ಗ್ರಾ.ಪಂ. ಒಟ್ಟು 9 ಸ್ಥಾನಗಳಲ್ಲಿ 4 ಜೆಡಿಎಸ್, 3 ಕಾಂಗ್ರೆಸ್, 2 ಬಿಜೆಪಿ ಬೆಂಬಲಿತರು ಮತ್ತು ಸವಣೂರು ಗ್ರಾ.ಪಂ.ನಲ್ಲಿ 19 ಸ್ಥಾನಗಳಲ್ಲಿ 5 ಕಾಂಗ್ರೆಸ್, 8 ಬಿಜೆಪಿ, 4 ಎಸ್‌ಡಿಪಿಐ, ಮತ್ತು 3 ಪಕ್ಷೇತರರು ಗೆಲುವು ಸಾಧಿಸಿದ್ದು ಇಲ್ಲಿ ಅತಂತ್ರ ಸ್ಥಿತಿ ನಿರ್ಮಾಣಗೊಂಡಿದೆ.

ಎರಡು ಬಾರಿ ಎಣಿಕೆ
ಮುಂಡೂರು ಗ್ರಾ.ಪಂ.ನಲ್ಲಿ ಗೀತಾ ಮತ್ತು ವಿಮಲಾ ಎಂಬವರ ನಡುವೆ ನಡೆದ ಸ್ಪರ್ಧೆಯಲ್ಲಿ ಗೀತಾ 1 ಮತಗಳ ಅಂತರದಿಂದ ವಿಜಯಿ ಯಾಗಿದ್ದರು. ಇದನ್ನು ವಿಮಲಾ ಆಕ್ಷೇಪಿಸಿದ ಹಿನ್ನಲೆಯಲ್ಲಿ 2 ಬಾರಿ ಮರು ಎಣಿಕೆ ನಡೆಸಲಾಯಿತು. ಕೊನೆಗೂ ಗೀತಾ ಒಂದು ಮತದ ಅಂತರದಿಂದ ಗೆಲುವು ಪಡೆದರು.

ಸೋತು ಗೆದ್ದವರು
ಉಪ್ಪಿನಂಗಡಿ ಗ್ರಾ.ಪಂ.ನ ಹಿಂದು ಳಿದ ವರ್ಗದಲ್ಲಿ ಸ್ಪರ್ಧಿಸಿದ್ದ ಜಲೀಲ್ ಮುಕ್ರಿ 248 ಮತ ಪಡೆದ ಹಿನ್ನಲೆ ಯಲ್ಲಿ ತನ್ನ ಪ್ರತಿ ಸ್ಪರ್ಧಿಯಿಂದ ಸೋಲು ಅನುಭವಿಸಿದರೂ, ಸಾಮಾನ್ಯ ಅಭ್ಯರ್ಥಿಯು ಇವರಿಂದ ಕಡಿಮೆ ಮತ ಪಡೆದ ಕಾರಣ ಜಲೀಲ್ ಮುಕ್ರಿ ವಿಜಯಿ ಅಭ್ಯರ್ಥಿ ಎಂದು ಘೋಷಿಸಲಾಯಿತು.
ಬಲ್ನಾಡು ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತ ವಿಜಯ ಲಕ್ಷ್ಮಿ ತಮ್ಮ ಪ್ರತಿಸ್ಫರ್ಧಿಯೊಂದಿಗೆ ಸಮಬಲ ಸಾಧಿಸಿದ್ದರು. ಬಳಿಕೆ ಟಾಸ್ ಮೂಲಕ ವಿಜಯಿ ಎಂದು ಘೋಷಿತರಾದರು.

ಉಡುಪಿಯಲ್ಲಿ ಕಾಂಗ್ರೆಸ್‌ಗೆ ಚೇತರಿಕೆಯ ದಾರಿ ತೋರಿಸಿದ ಗ್ರಾಪಂ ಚುನಾವಣೆ

ಉಡುಪಿ, ಮೇ 17: ಕಳೆದ ಒಂದು ದಶಕದಿಂದ ಬಿಜೆಪಿಯ ನಾಗಾಲೋಟಕ್ಕೆ ಸೋತು ಸುಣ್ಣವಾಗಿ, ಹೋರಾಟದ ಕೆಚ್ಚನ್ನೇ ಕಳೆದುಕೊಂಡಿದ್ದ ಉಡುಪಿ ಜಿಲ್ಲೆಯ ಕಾಂಗ್ರೆಸ್ ಪಕ್ಷಕ್ಕೆ ಎರಡು ಹಂತಗಳಲ್ಲಿ ನಡೆದ ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆ ಚೇತರಿಸಿಕೊಳ್ಳುವ ದಾರಿಯೊಂದನ್ನು ತೋರಿಸಿಕೊಟ್ಟಿದೆ.
ಜಿಲ್ಲೆಯ ಮೂರು ತಾಲೂಕುಗಳ ಒಟ್ಟು 146 ಗ್ರಾಪಂಗಳಲ್ಲಿ 143 ಪಂಚಾಯತ್‌ಗಳಿಗೆ ಚುನಾವಣೆ ನಡೆದಿದ್ದು, ಇದರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು, ಬಿಜೆಪಿಗೆ ಸಮಬಲದ ಹೋರಾಟವನ್ನು ನೀಡಿ ದ್ದಾರೆ. ಪ್ರಾಥಮಿಕ ವರದಿಗಳಂತೆ ಎರಡೂ ಪಕ್ಷಗಳ ನಡುವೆ ಜಿಲ್ಲೆಯಲ್ಲಿ ಸಮಬಲದ ಹೋರಾಟ ಕಂಡುಬಂದಿದೆ.

ಬೈಂದೂರು ಕ್ಷೇತ್ರದಲ್ಲಿ 21 ಗ್ರಾಮ ಪಂಚಾಯತ್‌ನ್ನು ವಶಪಡಿಸಿಕೊಂಡಿ ರುವ ಕಾಂಗ್ರೆಸ್ ಬೆಂಬಲಿತರು, ಕಾರ್ಕಳದಲ್ಲಿ ಕಳೆದ ಬಾರಿಗಿಂತ ಉತ್ತಮ ಸಾಧನೆ ತೋರಿ 12 ಗ್ರಾಪಂ ಗಳಲ್ಲಿ ಸ್ಪಷ್ಟ ಮೇಲುಗೈ ಸಾಧಿಸಿದ್ದಾರೆ. ಉಡುಪಿ, ಕುಂದಾಪುರಗಳಲ್ಲೂ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಸಾಧನೆ ಉತ್ತಮವಾಗಿದೆ. ಈ ಬಾರಿ ಜಿಲ್ಲೆಯ 100ಕ್ಕೂ ಅಧಿಕ ಗ್ರಾಪಂಗಳನ್ನು ಗೆಲ್ಲುವ ತುಂಬು ವಿಶ್ವಾಸ ವನ್ನು ವ್ಯಕ್ತಪಡಿಸಿದ್ದ ನೂತನ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಉದಯಕುಮಾರ್ ಶೆಟ್ಟಿಯವರಿಗೆ ಈ ಬಾರಿಯ ಫಲಿತಾಶ ನಿರಾಶೆಯನ್ನು ಉಂಟು ಮಾಡುವಂತ ದ್ದಾಗಿದೆ. ಆದರೂ ಒಟ್ಟಾರೆಯಾಗಿ ಅದು ಸ್ವಲ್ಪ ಮಟ್ಟಿನ ಮೇಲುಗೈಯನ್ನು ಉಳಿಸಿಕೊಂಡಿದೆ.

ನಕ್ಸಲ್ ಪ್ರಭಾವಿತ ಪ್ರದೇಶಗಳಲ್ಲಿ ಬಿಜೆಪಿಗೆ ಹಿನ್ನಡೆ: ಈ ಬಾರಿಯ ಚುನಾವಣೆಯ ಮತ್ತೊಂದು ವೈಶಿಷ್ಟವೆಂದರೆ ನಕ್ಸಲ್ ಪ್ರಭಾವಿತ ಪ್ರದೇಶಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದು. ಕಾರ್ಕಳದ ನಕ್ಸಲ್ ಪ್ರಭಾವಿತ ಪ್ರದೇಶಗಳಾದ ನಾಡ್ಪಾಲು, ಹೆಬ್ರಿ, ಮುದ್ರಾಡಿ, ಈದು, ಕುಂದಾಪುರ ತಾಲೂಕಿನ ಜಡ್ಕಲ್, ಹೊಸಂಗಡಿ, ಸಿದ್ಧಾಪುರಗಳಲ್ಲೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಧಿಕ ಪ್ರಮಾಣದಲ್ಲಿ ಗೆದ್ದುಬಂದಿದ್ದಾರೆ.
ಇನ್ನೊಂದು ವೈಶಿಷ್ಟವೆಂದರೆ ನಾಗಾರ್ಜುನ ಯೋಜನಾ ಪ್ರದೇಶಗಳ ಗ್ರಾಪಂಗಳಲ್ಲಿ ಮತದಾ ರರು ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಮತ ಹಾಕಿ ಗೆಲ್ಲಿಸಿದ್ದಾರೆ. ಇದರಿಂದಾಗಿ ಎಲ್ಲೂರು, ಮುದರಂಗಡಿ ಗ್ರಾಪಂಗಳಲ್ಲಿ ಕಾಂಗ್ರೆಸ್ ಸಂಪೂರ್ಣ ಮೇಲುಗೈ ಪಡೆಯುವಂತಾಗಿದೆ.

ಅದೇ ರೀತಿ ಸುವರ್ಣ ಕಾರಿಡಾರ್ ಯೋಜನಾ ಪ್ರದೇಶದ ಜನತೆ ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿಯ ಕೈಹಿಡಿದಿದ್ದಾರೆ. ಈ ಯೋಜನೆಯನ್ನು ಸ್ಥಾಪಿಸಲು ಅನುಮತಿ ನೀಡಿದ್ದ ಬಿಜೆಪಿಗರೇ ಇದನ್ನು ವಿರೋಧಿಸುವಂತೆ ನಾಟಕವಾಡಿ, ತಮ್ಮಿಂದಾಗಿಯೇ ಯೋಜನೆಯನ್ನು ಕೈಬಿಡುವಂತಾ ಗಿದೆ ಎಂದು ಜನರನ್ನು ನಂಬಿವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಇದುವರೆಗೆ ಕಾಂಗ್ರೆಸ್ ಬೆಂಬಲಿತರಿದ್ದ ಬೆಳ್ಮಣ್, ಇನ್ನ ಗ್ರಾಪಂಗಳು ಈ ಬಾರಿ ಬಿಜೆಪಿ ಬೆಂಬಲಿತರ ಮಡಿಲು ಸೇರಿದೆ.

ಜಿಲ್ಲೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಸ್ಪಷ್ಟ ಮೇಲುಗೈ ಪಡೆದಿದೆ. ಇಲ್ಲಿ ಚುನಾವಣೆ ನಡೆದ 33 ಗ್ರಾಪಂಗಳಲ್ಲಿ 21 ಕಾಂಗ್ರೆಸ್ ಬೆಂಬಲಿತ, 11 ಬಿಜೆಪಿ ಬೆಂಬಲಿತರ ಪಾಲಾದರೆ, ನಾಡದಲ್ಲಿ ಪೌರ ಸಮಿತಿ ಅಧಿಕಾರಕ್ಕೆ ಬಂದಿದೆ. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತರು ಸೇರಿ ಪೌರ ಸಮಿತಿ ರಚಿಸಿ ಕಮ್ಯುನಿಸ್ಟ್ ಅಭ್ಯರ್ಥಿಗಳನ್ನು ಸೋಲಿಸುವಲ್ಲಿ ಯಶಸ್ವಿಯಾದರು.

ಮಂಗಳೂರು ತಾಲೂಕಿನಲ್ಲಿ ಕಾಂಗ್ರೆಸ್ ಮೇಲುಗೈ

ಮಂಗಳೂರು, ಮೇ 17: ತಾಲೂಕಿನ 49 ಗ್ರಾಮ ಪಂಚಾಯತ್‌ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಮೇಲುಗೈ ಸಾಧಿಸಿದ್ದಾರೆ.
ಮಂಗಳೂರು ತಾಲೂಕಿನ ಹೆಚ್ಚಿನ ಗ್ರಾ.ಪಂ.ಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಜಯಗಳಿಸಿರುವುದರಿಂದ ಈ ಗ್ರಾ.ಪಂ. ಗಳು ಕಾಂಗ್ರೆಸ್ ತೆಕ್ಕೆಗೆ ಬಿದ್ದಿವೆ. ಇನ್ನು ಕೆಲವು ಗ್ರಾ.ಪಂ.ಗಳು ಬಿಜೆಪಿ ಪಾಲಾದರೆ, ಕೆಲವು ಗ್ರಾಪಂಗಳು ಅತಂತ್ರ ಸ್ಥಿತಿಯಲ್ಲಿವೆ ಎನ್ನಲಾಗಿದೆ.
ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಶುರುವಾದಾಗಲೇ ವಿವಿಧ ಪಕ್ಷಗಳ ಕಾರ್ಯಕರ್ತರು ಮತ ಎಣಿಕೆ ಕೇಂದ್ರದ ಸುತ್ತಮುತ್ತ ಜಮಾಯಿಸಿದ್ದರು. ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟಗೊಳ್ಳುತ್ತಲೇ ಬೆಂಬಲಿಗರು, ಕಾರ್ಯಕರ್ತರು ಸಂಭ್ರಮ ವ್ಯಕ್ತಪಡಿಸಿದರು.
ಮಂಗಳೂರು ತಾಲೂಕಿನ 49 ಗ್ರಾಮ ಪಂಚಾಯತ್‌ಗಳಲ್ಲಿ ಒಟ್ಟು 910 ಸ್ಥಾನಗಳಿಗೆ 2306 ಮಂದಿ ಸ್ಪರ್ಧಿಸಿದ್ದರು. ತಾಲೂಕಿನ 2,58,196 ಮತದಾರರ ಪೈಕಿ 1,84,547 ಮಂದಿ ಮತ ಚಲಾಯಿಸಿದ್ದು, ಅದರಲ್ಲಿ 292 ಟೆಂಡರ್ಡ್‌ ಮತ್ತು 14 ಅಂಚೆ ಮತಗಳು ಸೇರಿತ್ತು.
ರೊಝಾರಿಯೊ ಕಾಲೇಜಿನ ಮತ ಎಣಿಕೆ ಕೇಂದ್ರದಲ್ಲಿ ಒಟ್ಟು 151 ಮೇಜುಗಳನ್ನು ಮತ ಎಣಿಕೆಗಾಗಿ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಕೆಲವು ಕೊಠಡಿಗಳಲ್ಲಿ ಮತ ಎಣಿಕೆ ಕಾರ್ಯ ಸ್ವಲ್ಪ ವಿಳಂಬವಾಗಿತ್ತು. ಹಲವು ವಾರ್ಡ್‌ಗಳ ಫಲಿತಾಂಶ ಬೆಳಗ್ಗೆ 10.30ರ ವೇಳೆಗೆ ಹೊರ ಬಿದ್ದರೆ, ಇನ್ನು ಕೆಲವು ವಾರ್ಡ್‌ಗಳ ಫಲಿತಾಂಶ ಸಂಜೆ 4 ಗಂಟೆಯ ವೇಳೆಗೆ ಹೊರ ಬಿತ್ತು. ಮೊದಲ ಸುತ್ತಿನಲ್ಲಿ 25 ಗ್ರಾಮ ಪಂಚಾಯತ್‌ಗಳ ಮತ ಎಣಿಕೆ ಕಾರ್ಯ ನಡೆದಿದ್ದರೆ, ಎರಡನೆ ಸುತ್ತಿನಲ್ಲಿ 24 ಗ್ರಾಮ ಪಂಚಾಯತ್‌ಗಳ ಮತ ಎಣಿಕೆ ಕಾರ್ಯ ಶಾಂತ ರೀತಿಯಲ್ಲಿ ನಡೆದಿತ್ತು. ಮತ ಎಣಿಕೆ ಕಾರ್ಯ ರಾತ್ರಿಯವರೆಗೂ ಮುಂದುವರಿಯಿತು.

ಅಣ್ಣ-ತಂಗಿಗೆ ಜಯ
ಸೋಮೇಶ್ವರ ಗ್ರಾ.ಪಂಚಾಯತ್‌ನ 13ನೆ ವಾರ್ಡಿನಲ್ಲಿ ಅಣ್ಣ ಅಬ್ದುಲ್ ಸಲಾಂ ಹಾಗೂ ತಂಗಿ ಹಫ್ಸಾ ಜಿ.ಐ. ಪಕ್ಷೇತರರಾಗಿ ಸ್ಪರ್ಧಿಸಿ ಜಯಗಳಿಸಿದ್ದಾರೆ.

ಒಂದೇ ಮನೆಯ ಮೂವರು!
ಬಜ್ಪೆ ಪಂಚಾಯತ್‌ಗೆ ಒಂದೆ ಮನೆಯ ಮೂವರು ಸಹೋದರರು ಸ್ಪರ್ಧಿಸಿದ್ದು, ಆ ಪೈಕಿ ಅಣ್ಣ ಶಾಹುಲ್ ಹಮೀದ್ (ಕಾಂಗ್ರೆಸ್ - ಈ ಹಿಂದೆ ಇವರು ಬಿಜೆಪಿ ಬೆಂಬಲ ಪಡೆದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಗಿದ್ದರು) ಗೆಲುವು ಸಾಧಿಸಿದ್ದಾರೆ. ಉಳಿದಂತೆ ಇವರ ತಮ್ಮ ನಿಸಾರ್ (ಪಕ್ಷೇತರ) ಮತ್ತು ಆರಿಫ್ (ಬಿಜೆಪಿ) ಸೋಲನುಭವಿಸಿದ್ದಾರೆ. ಮೂವರು ಕ್ರಮವಾಗಿ 6,3,2 ವಾರ್ಡ್‌ನಿಂದ ಸ್ಪರ್ಧಿಸಿದ್ದರು.

ಕಾಂಗ್ರೆಸ್ ಗೆಲುವು: ಖಾದರ್ ಹರ್ಷ

ಮಂಗಳೂರು, ಮೇ 17: ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 22 ಗ್ರಾ.ಪಂ. ಪೈಕಿ 21 ಗ್ರಾಮಗಳಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 16 ಕಡೆ ಗೆಲುವು ಸಾಧಿಸಿದೆ ಎಂದು ಶಾಸಕ ಯು.ಟಿ.ಖಾದರ್ ತಿಳಿಸಿದ್ದಾರೆ.
ಪುದು ಗ್ರಾಮದಲ್ಲಿ ಚುನಾವಣೆ ನಡೆದಿಲ್ಲ.

ಉಳಿದಂತೆ ಈ ಹಿಂದೆ ಬಿಜೆಪಿ ಆಡಳಿತವಿದ್ದ ಕೋಟೆಕಾರ್, ಬೋಳಿಯಾರ್, ಇರಾ ಮತ್ತು ಜೆಡಿಎಸ್ ಆಡಳಿತವಿದ್ದ ಸಜಿಪದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಮುನ್ನೂರು, ಮಂಜನಾಡಿ, ಕಿನ್ಯ, ಪಾವೂರಿನಲ್ಲೂ ಕಾಂಗ್ರೆಸ್ ಜಯಗಳಿಸಿದೆ. ಹಿಂದಿನ ವಿಟ್ಲ ವಿಧಾನ ಸಭಾ ಕ್ಷೇತ್ರದಲ್ಲಿದ್ದ 7 ಗ್ರಾಮಗಳಲ್ಲೂ ಕೂಡ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ತಲಪಾಡಿ ಮತ್ತು ಮೇರಮಜಲು ಗ್ರಾಮದಲ್ಲಿ ಕಾಂಗ್ರೆಸ್-ಬಿಜೆಪಿ ಸಮಬಲದಲ್ಲಿದೆ. ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಸಹಕರಿಸಿದ ಮತದಾರರಿಗೆ, ಪಕ್ಷದ ಕಾರ್ಯಕರ್ತರಿಗೆ, ಮುಖಂಡರಿಗೆ ಶಾಸಕ ಖಾದರ್ ಅಭಿನಂದನೆ ಸಲ್ಲಿಸಿದ್ದಾರೆ.
ಸೋಮೇಶ್ವರದಲ್ಲಿ ಬಿಜೆಪಿ

ಸುಮಾರು 15,788 ಜನಸಂಖ್ಯೆಯ 49 ಸ್ಥಾನಗಳನ್ನು ಒಳಗೊಂಡ ಸೋಮೇಶ್ವರ ಗ್ರಾ.ಪಂ.ನಲ್ಲಿ ಈ ಬಾರಿಯೂ ಬಿಜೆಪಿ ಗೆಲುವು ಸಾಧಿಸಿದೆ. ಈ ಹಿಂದೆ ಎರಡು ಬಾರಿ ಚುನಾವಣೆ ಬಹಿಷ್ಕರಿಸಿದ್ದ ಮತದಾರರು ದ.ಕ.ಜಿಲ್ಲಾ ಉಸ್ತುವಾರಿ ಸಚಿವರ ಅಭಿವೃದ್ಧಿ ಮಂತ್ರಕ್ಕೆ ಸೋತು ಮತದಾನ ದಲ್ಲಿ ಪಾಲ್ಗೊಂಡಿದ್ದು, ಬಿಜೆಪಿಗೆ ಪೂರಕ ವಾತಾವರಣ ಸೃಷ್ಟಿಸಿದ್ದಾರೆ.
ಸೋಮೇಶ್ವರದಲ್ಲಿ ಕಾಂಗ್ರೆಸ್, ಸಿಪಿಎಂ ಮೈತ್ರಿಕೂಟಕ್ಕೆ 17 ಮತ್ತು ಇಬ್ಬರು ಪಕ್ಷೇತರರು ಹಾಗೂ ಉಳಿದ 30 ಸ್ಥಾನ ಬಿಜೆಪಿ ಪಾಲಾಗಿದೆ.

ಚಿಕ್ಕಮಗಳೂರು: ಸೋಲು-ಗೆಲುವಿನ ಲೆಕ್ಕಾಚಾರಕ್ಕೆ ತೆರೆ

ಚಿಕ್ಕಮಗಳೂರು, ಮೇ.17: ಜಿಲ್ಲೆಯಲ್ಲಿ ನಡೆದ ಗ್ರಾ.ಪಂ. ಮತದಾನದ ಮತ ಏಣಿಕೆ ಕಾರ್ಯವು ಸೋಮವಾರ ಇಲ್ಲಿನ ಏಳು ತಾಲ್ಲೂಕು ಕೇಂದ್ರಗಳಲ್ಲಿ ನಡೆದಿದ್ದು ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ಅಭ್ಯರ್ಥಿ ಗಳ ನಡುವಿನ ರಾಜಕೀಯ ಲೆಕ್ಕಾಚಾರ ಗಳಿಗೆ ತೆರೆ ಬಿದ್ದಂತಾಗಿದೆ.

ಜಿಲ್ಲೆಯ 216 ಗ್ರಾ.ಪಂ.ಗಳ ಒಟ್ಟು 2282 ಸ್ಥಾನಗಳಿಗೆ ಚುನಾವಣೆಯು ಘೋಷಣೆಯಾಗಿತ್ತು. ಅವುಗಳಲ್ಲಿ 201 ಸ್ಥಾನಗಳಲ್ಲಿ ಅಭ್ಯರ್ಥಿಗಳು ಅವಿರೋಧ ವಾಗಿ ಆಯ್ಕೆಯಾಗಿದ್ದರು. ಕಡೂರು ಬಳಿಯ ಹಳ್ಳಿಯೊಂದರಲ್ಲಿ ಒಂದು ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಮತ್ತು ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾ.ಪಂ. ವ್ಯಾಪ್ತಿಯ ಮೇಗೂರು ಕ್ಷೇತ್ರದಲ್ಲಿ ಮತದಾರರು ಚುನಾವಣೆಯನ್ನು ಬಹಿಷ್ಕರಿಸಿದ್ದರಿಂದ ಒಂದು ಸ್ಥಾನಕ್ಕೆ ಚುನಾವಣೆ ನಡೆದಿರಲಿಲ್ಲ.

ಹೀಗಾಗಿ 2280 ಸ್ಥಾನಗಳಿಗೆ ಮಾತ್ರವೆ ಮತದಾನ ಕಾರ್ಯ ನಡೆದಿತ್ತು ಇವುಗಳಿಗಾಗಿ 6237 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. ಚಿಕ್ಕಮಗಳೂರು ತಾಲೂಕಿನ 46 ಗ್ರಾ.ಪಂ. ಕ್ಷೇತ್ರಗಳ 499 ಸ್ಥಾನಗಳಿಗೆ, ಮೂಡಿಗೆರೆಯ 24 ಗ್ರಾ.ಪಂ. ಕ್ಷೇತ್ರಗಳ 283 ಸ್ಥಾನಗಳಿಗೆ, ಕಡೂರು ತಾಲೂಕಿನ 59 ಗ್ರಾ.ಪಂ. ಕ್ಷೇತ್ರಗಳ 618 ಸ್ಥಾ ಗಳಿಗೆ, ನರಸಿಂಹರಾಜಪುರ ತಾಲೂಕಿನ 14 ಗ್ರಾ.ಪಂ. ಕ್ಷೇತ್ರಗಳ 152 ಸ್ಥಾನ ಗಳಿಗೆ, ತರಿಕೆರೆ ತಾಲೂಕಿನ 44 ಗ್ರಾ.ಪಂ. ಕ್ಷೇತ್ರಗಳ 456 ಸ್ಥಾನಗಳಿಗೆ, ಶೃಂಗೇರಿ ತಾಲೂಕಿನ 9 ಗ್ರಾ.ಪಂ. ಕ್ಷೇತ್ರಗಳ 81 ಸ್ಥಾನಗಳಿಗೆ, ಹಾಗೂ ಕೊಪ್ಪ ತಾಲೂಕಿನ 20 ಗ್ರಾ.ಪಂ. ಕ್ಷೇತ್ರಗಳ 188 ಸ್ಥಾನಗಳಿಗೆ ಮೇ 12ರಂದು ಚುನಾವಣೆ ನಡೆಸಲಾಗಿತ್ತು.

ಸುಮಾರು 5.98 ಲಕ್ಷ ಮತದಾರ ರಲ್ಲಿ 47.50 ಲಕ್ಷ ಮತದಾರರು ಹಕ್ಕು ಚಲಾಯಿಸಿದ್ದರು. ಮೂಡಿಗೆರೆ ತಾಲೂಕಿನ ಗುತ್ತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಪ.ಜಾತಿಯಿಂದ ಸ್ಪರ್ಧಿಸಿದ್ದ ಅಪ್ಪಣ್ಣಿ ಎಂಬ ಅಭ್ಯರ್ಥಿಯು ಒಂದು ಮತವನ್ನೂ ಕೂಡ ಪಡೆಯದಿರುವದು ಗಮನ ಸೆಳೆದಿದೆ. ಗೌಡಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಂಜಿವ ಪ್ರಸಾದ್ ಎಂಬವರು ಹಳೇಕೆರೆ ರಘು ವಿರುದ್ಧ ಕೇವಲ ಒಂದು ಮತಗಳ ಅಂತರದಿಂದ ಗೆಲುವು ಸಾಧಿಸಿರುವುದು ವಿಶೇಷವಾ ಗಿತ್ತು.

ಶೃಂಗೇರಿ ಮತ್ತು ನರಸಿಂಹರಾಜ ಪುರ ತಾಲೂಕುಗಳಲ್ಲಿ ಮತ ಎಣಿಕೆ ಕಾರ್ಯವು ಮಧ್ಯಾಹ್ನದ ವೇಳೆಗೆ ಮುಕ್ತಾಯವಾಗಿತ್ತು.
ಬೆಳಗ್ಗೆ 8 ಗಂಟೆಗೆ ನಿಗದಿಯಂತೆ ಎಲ್ಲ ಕಡೆಗಳಲ್ಲಿಯೂ ಮತ ಎಣಿಕೆ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಕಡೂರು, ಚಿಕ್ಕಮಗಳೂರು, ತರಿಕೆರೆ ತಾಲೂಕು ಗಳಲ್ಲಿ ಎಣಿಕೆ ಕಾರ್ಯ ಮುಕ್ತಾಯ ಗೊಳ್ಳಲು ರಾತ್ರಿವರೆಗೂ ಕಾಯಬೇಕಾ ಯಿತು. ಗೆದ್ದ ಅಭ್ಯರ್ಥಿಗಳು ಕೆಲವೆಡೆ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿಕೊಂಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಮತ್ತೆ ಬಿಜೆಪಿಯದ್ದೆ ಪಾರುಪತ್ಯ ಕಾಂಗ್ರೆಸ್‌ನದು ಸಮಾಧಾನಕರ ಸಾಧನೆ

ಮಡಿಕೇರಿ,ಮೇ 17: ಕೊಡಗು ಜಿಲ್ಲೆಯ 96 ಗ್ರಾ. ಪಂ.ಗಳ ಪೈಕಿ ಬಹುತೇಕ ಪಂಚಾಯತ್‌ಗಳಲ್ಲಿ ಮತ್ತೊಮ್ಮೆ ಬಿಜೆಪಿ ಬೆಂಬಲಿತರು ಆಡಳಿತ ಚುಕ್ಕಾಣೆ ಹಿಡಿಯಲ್ಲಿದ್ದಾರೆ. ಬಿಜೆಪಿಯ ಭದ್ರ ಕೋಟೆಯಾಗಿದ್ದ ಪಂಚಾಯತ್‌ಗಳಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಗಣನೀಯ ಸಾಧನೆ ತೋರಿರುವುದು ವಿಶೇಷ.

ಜಿಲ್ಲೆಯ 98 ಗ್ರಾ.ಪಂ.ಗಳ ಪೈಕಿ 94 ಗ್ರಾ.ಪಂ.ಗಳಿಗೆ ಚುನಾವಣೆ ನಡೆದಿತ್ತು. ಇಂದು ಜಿಲ್ಲೆಯ ಮೂರು ತಾಲೂಕು ಕೇಂದ್ರಗಳಲ್ಲಿ ಶಾಂತಿಯುತ ಮತಣಿಕೆ ನಡೆಯಿತು. ನಿಧಾನಗತಿಯಿಂದ ನಡೆದ ಮತ ಎಣಿಕಾ ಪ್ರಕ್ರಿಯೆ ಸಂಜೆ 6 ಗಂಟೆಗೆ ಮುಗಿದಿತ್ತು. ಗಾಳಿಬೀಡು ಪಂಚಾಯತ್‌ನ 10 ಸ್ಥಾನಗಳಲ್ಲೂ ಬಿಜೆಪಿ ಜಯ ದಾಖಲಿಸಿದೆ.

ಬೆಟ್ಟಗೇರಿಯ 17 ಸ್ಥಾನಗಳ ಪೈಕಿ 16ರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಉಳಿದಂತೆ ಬಹುತೇಕ ಪಂಚಾಯತ್‌ಗಳಲ್ಲಿ ಬಿಜೆಪಿ ಬಹುಮತ ಪಡೆದಿದೆ. ಕಾಂತೂರು ಮೂರ್ನಾಡು ಸೇರಿದಂತೆ 6 ಪಂಚಾಯತ್‌ಗಳಲ್ಲಿ ಸಂಪೂರ್ಣ ಕಾಂಗ್ರೆಸ್ ಹಿಡಿತಕ್ಕೆ ಹೋಗಿದೆ.
ರಾಜಕೀಯ ರಹಿತ ಚುನಾವಣೆಯಾಗಿದ್ದರೂ ಎಲ್ಲ ಪಕ್ಷದ ಮುಖಂಡರು ಹಾಗೂ ಕಾರ್ಯ ಕರ್ತರು ಎಣಿಕಾ ಕೇಂದ್ರಗಳ ಸುತ್ತ ನೆರೆದು, ಘೋಷಣೆ ಕೂಗಿದರು. ಚುನಾವಣಾ ವೀಕ್ಷಕರು, ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಎ.ಎನ್.ಎಸ್. ಮೂರ್ತಿ, ಜಿಲ್ಲಾಧಿಕಾರಿ ಅಶ್ವತ್ ನಾರಾಯಣ ಗೌಡ, ಎಸ್ಪಿ ಮಂಜುನಾಥ್ ಅಣ್ಣೆಗೇರಿ ಮತ್ತಿತರ ಅಧಿಕಾರಿಗಳು ಎಣಿಕಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಟ್ಟಗೇರಿ ಪಂಚಾಯತ್ ಮತ ಎಣಿಕೆಯಲ್ಲಿ ಗೊಂದಲ ಕಂಡುಬಂತು. ಮೊದಲ ಸುತ್ತಿನಲ್ಲಿ ಸೋಲುಂಡರು: ಎಣಿಕೆ ಸಂದರ್ಭ ಬಿಜೆಪಿ ಕಾರ್ಯಕರ್ತರು ಕೊಠಡಿಗೆ ನುಗ್ಗಿ ಗೊಂದಲ ಉಂಟುಮಾಡಿದ್ದರಿಂದ ಎಣಿಕೆ ತಪ್ಪಾಗಿದೆ ಎಂದು ಪರಾಜಿತ ಅಭ್ಯರ್ಥಿ ಕಮಲ ಉತ್ತಯ್ಯಯ ಆರೋಪ. ಈ ಹಿನ್ನೆಲೆಯಲ್ಲಿ ತಾವು ನ್ಯಾಯಾಲಯದ ಮೊರೆ ಹೋಗುವುದಾಗಿ ಅವರು ಹೇಳಿದ್ದಾರೆ.

ಮೂರ್ನಾಡಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸುವ ವೇಳೆ ವ್ಯಕ್ತಿಯೊಬ್ಬರು ಬೆದರಿಕೆ ಯೊಡ್ಡಿದ ಪ್ರಕರಣ ನಡೆದಿದೆ. ಆದರೆ ಪ್ರಕರಣ ರಾಜಿಯಲ್ಲಿ ಬಗೆಹರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನಲ್ಲೂ ಕಾಂಗ್ರೆಸ್ ಕಾರುಬಾರು

ಬೆಳ್ತಂಗಡಿ, ಮೇ 17: ತಾಲೂಕಿನ 41 ಗ್ರಾ.ಪಂ.ಗಳಲ್ಲಿ ಚುನಾವಣೆ ನಡೆದಿದ್ದು, ಇದರಲ್ಲಿ 19 ಪಂಚಾಯತ್‌ಗಳು ಕಾಂಗ್ರೆಸ್ ಬೆಂಬಲಿತರು, 17 ಪಂಚಾಯತ್‌ಗಳನ್ನು ಬಿಜೆಪಿ ಬೆಂಬಲಿತರು ತಮ್ಮದಾಗಿಸಿಕೊಂಡಿದ್ದು, ಒಂದು ಪಂಚಾಯತ್ ಜೆಡಿಎಸ್ ಪಾಲಾಗಿದೆ. 4 ಪಂಚಾಯತ್‌ಗಳಲ್ಲಿ ಕಾಂಗ್ರೆಸ್-ಬಿಜೆಪಿಗೆ ಸಮಾನ ಸ್ಥಾನಗಳು ದೊರಕಿವೆ.

ಕಾಂಗ್ರೆಸ್ ಬೆಂಬಲಿತರು ಕಾಸಿಪಟ್ಣ, ಹೊಸಂಗಡಿ, ಕಲ್ಮಂಜ, ಮಡಂತ್ಯಾರು, ಬಾರ್ಯ, ಮಾಲಾಡಿ, ಕಳೀಯ, ಬಂದಾರು, ಬಳಿಂಜ, ಕುಕ್ಕೆಡಿ, ಕನ್ನೀರುಸಂತ, ಇಲಂತಿಲ, ನೆರಿಯ, ನಾರವಿ, ಕುದುವೆಟ್ಟು, ಚಾರ್ಮಾಡಿ, ಧರ್ಮಸ್ಥಳ, ತಣಿಯೂರು, ಮಲವಂತಿಕೆ ಪಂಚಾಯತ್‌ಗಳಲ್ಲಿ ಅಧಿಕಾರ ಪಡೆದುಕೊಂಡಿದ್ದರೆ, ಬಿಜೆಪಿ ಬೆಂಬಲಿತರು ಕೊಕ್ಕಡ, ಪಡಂಗಡಿ, ಮೇಲಂತಬೆಟ್ಟು, ಪೊಯ್ಯೂರು, ನಿಟ್ಲೆ, ನಿಟ್ಟಬಾಗಿಲು, ಸಿಬಾಜೆ, ಅಲದಂಗಡಿ, ಅಂಡಿಂಜೆ, ಇಂಡಬೆಟ್ಟು, ಲಾಯಿಲ, ಕುವೆಟ್ಟು, ಉಜಿರೆ, ಮರೋಡಿ, ಪಿರ್ಲಾಲು, ಮಚ್ಚಿನ, ಕೆಲಾಲು ಮುಂತಾದ ಕಡೆ ಅಧಿಕಾರ ಗಳಿಸಿದ್ದಾರೆ. ಜೆಡಿಎಸ್ ಅರಸಿಮಕ್ಕಿ ಪಂಚಾಯತ್‌ನಲ್ಲಿ ಅಧಿಕಾರ ಗಳಿಸಿದೆ. ಮುಂಡಾಜೆ, ಪತ್ರಮೆ, ನಡ, ಸಿಸಿಲ ಪಂಚಾಯತ್‌ಗಳಲ್ಲಿ ಕಾಂಗ್ರೆಸ್-ಬಿಜೆಪಿಗೆ ಸಮಾನ ಸ್ಥಾನಗಳು ಬಂದಿವೆ. ರಾತ್ರಿ 9ರ ವರೆಗೆ ಮತ ಎಣಿಕೆ ಕಾರ್ಯ ಮುಂದುವರಿದಿತ್ತು.

No comments: