VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 18, 2010

ಬಿಸಿಸಿಐ ಮುಟ್ಟಿಸಿದ ಬಿಸಿ:ಕ್ರಿಕೆಟಿಗರಿಗೆ ನೋಟಿಸ್

ವೆಸ್ಟ್‌ಇಂಡೀಸ್‌ನಲ್ಲಿ ನಡೆದ ಟ್ವೆಂಟಿ-20 ಕ್ರಿಕೆಟ್ ವಿಶ್ವಕಪ್ ಸಂದರ್ಭದಲ್ಲಿ ಅಶಿಸ್ತಿನಿಂದ ವರ್ತಿಸಿದ ಭಾರತ ತಂಡದ ಆರು ಮಂದಿ ಆಟಗಾರರಿಗೆ ಬಿಸಿಸಿಐ ಮಂಗಳವಾರ ಷೋಕಾಸ್ ನೋಟಿಸ್ ನೀಡಲಿದೆ.

ಮುಂಬೈ (ಪಿಟಿಐ): ವೆಸ್ಟ್‌ಇಂಡೀಸ್‌ನಲ್ಲಿ ನಡೆದ ಟ್ವೆಂಟಿ-20 ಕ್ರಿಕೆಟ್ ವಿಶ್ವಕಪ್ ಸಂದರ್ಭದಲ್ಲಿ ಅಶಿಸ್ತಿನಿಂದ ವರ್ತಿಸಿದ ಭಾರತ ತಂಡದ ಆರು ಮಂದಿ ಆಟಗಾರರಿಗೆ ಬಿಸಿಸಿಐ ಮಂಗಳವಾರ ಷೋಕಾಸ್ ನೋಟಿಸ್ ನೀಡಲಿದೆ.

ಆಟಗಾರರಿಗೆ ಷೋಕಾಸ್ ನೋಟಿಸ್ ನೀಡುವಂತೆ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಅವರು ಕಾರ್ಯದರ್ಶಿ ಎನ್.ಶ್ರೀನಿವಾಸನ್‌ಗೆ ಸೂಚಿಸಿದ್ದಾರೆ ಎಂದು ಬಿಸಿಸಿಐ ಆಡಳಿತ ವ್ಯವಸ್ಥಾಪಕ ಅಧಿಕಾರಿ ಪ್ರೊ.ರತ್ನಾಕರ್ ಶೆಟ್ಟಿ ತಿಳಿಸಿದ್ದಾರೆ.

ಬಿಸಿಸಿಐ ಮೂಲಗಳ ಪ್ರಕಾರ ಯುವರಾಜ್ ಸಿಂಗ್, ಜಹೀರ್ ಖಾನ್, ರೋಹಿತ್ ಶರ್ಮ, ಆಶೀಶ್ ನೆಹ್ರಾ, ಪಿಯೂಷ್ ಚಾವ್ಲಾ ಹಾಗೂ ರವೀಂದ್ರ ಜಡೇಜಾಗೆ ನೋಟಿಸ್ ನೀಡಲಾಗುತ್ತಿದೆ.

ವಿಶ್ವಕಪ್‌ನಲ್ಲಿ ಹೀನಾಯ ಸೋಲು ಹಾಗೂ ಮೇ 11ರಂದು ಸೇಂಟ್ ಲೂಸಿಯಾದ ‘ಟೆಕಿಲಾ ಜೋ’ ಪಬ್‌ನಲ್ಲಿ ಕಿತ್ತಾಡಿದ ಸಂಬಂಧ ಈ ಆಟಗಾರರ ಮೇಲೆ ಶಿಸ್ತಿನ ಕ್ರಮ ಜರುಗಿಸಲು ಈಗ ಬಿಸಿಸಿಐ ಮುಂದಾಗಿದೆ. ಭಾರತ ಸೂಪರ್-8ರ ಹಂತದಲ್ಲಿ ಒಂದೇಒಂದು ಪಂದ್ಯ ಗೆದ್ದಿರಲಿಲ್ಲ.

No comments: