ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿ ದುರಂತಕ್ಕೀಡಾದ ಭೀಕರ ಘಟನೆ ವ್ಯವಸ್ಥಿತವಾಗಿ ಮಾಡಿದ ಸಂಚು ಅಲ್ಲ ಎಂಬುದನ್ನು ತಳ್ಳಿಹಾಕಲಾರೆ ಎಂದು ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ, ದಾಳಿ ಹಿಂದೆ ರಾಜಕೀಯ ಪಿತೂರಿ ಇರುವುದಾಗಿ ಗಂಭೀರವಾಗಿ ಆರೋಪಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಅಪಘಾತದ ಹಿಂದೆ ವ್ಯವಸ್ಥಿತವಾದ ರಾಜಕೀಯ ಪಿತೂರಿ ಅಡಗಿದ್ದು, ಪಶ್ಚಿಮ ಬಂಗಾಳದಲ್ಲಿ ಮುಂಬರುವ ನಗರಪಾಲಿಕೆ ಚುನಾವಣೆಯ ಹಿನ್ನೆಲೆಯಲ್ಲಿ ಇದನ್ನು ಮಾಡಲಾಗಿದೆ ಎಂದು ಆರೋಪಿಸಿದರು.
ಆದರೆ ರೈಲ್ವೆ ಹಳಿ ಸ್ಫೋಟಿಸಿ ದುರಂತ ಸಂಭವಿಸಲು ಕಾರಣವಾದ ಬಗ್ಗೆ ಯಾವುದೇ ನಿರ್ದಿಷ್ಟ ಸಂಘಟನೆಯ ಹೆಸರನ್ನು ಹೇಳಲು ಮಮತಾ ಈ ಸಂದರ್ಭದಲ್ಲಿ ನಿರಾಕರಿಸಿದರು.
ಇಡೀ ಘಟನೆಯೇ ತುಂಬಾ ಅಪರಾಧಿತನದಿಂದ ಕೂಡಿದ್ದು, ಈ ದಾಳಿಯನ್ನು ನಡೆಸಿದ ದುರುಳರು ಯಾವುದೇ ಕರುಣೆ ತೋರಿಸದೇ ದುಷ್ಕೃತ್ಯ ಎಸಗಿ 115 ಮಂದಿ ಮುಗ್ದ ಪ್ರಯಾಣಿಕರ ಸಾವಿಗೆ ಕಾರಣರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ಹಳಿ ತಪ್ಪಿ ಸಂಭವಿಸಿದ ದುರಂತದ ಬಗ್ಗೆ ಸಿಬಿಐ ತನಿಖೆಗೆ ಒಪ್ಪಿಸಲು ಕೇಂದ್ರ ಸರ್ಕಾರ ಒಪ್ಪಿರುವುದಾಗಿ ಹೇಳಿದರು.
ಆದರೆ ಘಟನೆಯ ಹಿಂದೆ ಯಾವ ಸಂಘಟನೆ ಇದೆ ಎಂಬ ಮಾಹಿತಿ ನೀಡಲು ನಿರಾಕರಿಸಿದರು. ಪೂರ್ಣ ಪ್ರಮಾಣದ ತನಿಖೆ ಮುಗಿಯುವವರೆಗೆ ಯಾವ ಸಂಘಟನೆ ಈ ಘಟನೆಗೆ ಕಾರಣ ಎಂದು ಹೇಳಲಾರೆ ಎಂದು ಸ್ಪಷ್ಟಪಡಿಸಿದರು.
Subscribe to:
Post Comments (Atom)
No comments:
Post a Comment