VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 17, 2010

ವಿಶ್ವಕಪ್ ಯಶಸ್ಸಿಗೆ ಐಪಿಎಲ್ ಕಾರಣ: ಪೀಟರ್‌ಸನ್

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬೆಂಗಳೂರು ಪರ ಆಡಿದ್ದ ತನಗೆ ಆತ್ಮವಿಶ್ವಾಸ ಹಾಗೂ ಬ್ಯಾಟಿಂಗ್ ಸಂಪರ್ಕ ಮರಳಿ ಪಡೆಯಲು ಸಾಧ್ಯವಾಗಿತ್ತು. ಇದುವೇ ನನ್ನ ವಿಶ್ವಕಪ್ ಯಶಸ್ಸಿಗೆ ಕಾರಣ ಎಂದು ಇಂಗ್ಲೆಂಡ್ ಆಟಗಾರ ಕೆವಿನ್ ಪೀಟರ್‌ಸನ್ ಹೇಳಿದ್ದಾರೆ.

ಫೈನಲ್‌ನಲ್ಲೂ ಅಮೂಲ್ಯ 47 ರನ್ ಬಾರಿಸಿದ್ದ ಕೆವಿನ್, ಕಳೆದ 35 ವರ್ಷಗಳ ಅವಧಿಯಲ್ಲಿ ಇಂಗ್ಲಿಂಷ್ ತಂಡ ಚೊಚ್ಚಲ ಬಾರಿಗೆ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅಲ್ಲದೆ ಟೂರ್ನಿಯಲ್ಲಿ ಒಟ್ಟು 248 ರನ್ ಪೇರಿಸಿದ್ದ ಪೀಟರ್‌ಸನ್ ಸರಣಿಶ್ರೇಷ್ಠ ಪ್ರಶಸ್ತಿಗೆ ಅರ್ಹರಾಗಿದ್ದರು.

ಬೆಂಗಳೂರಿನ ಮೈದಾನದಲ್ಲಿ ಅಭ್ಯಾಸಕ್ಕಾಗಿ ನಾನು ಎಷ್ಟು ಹೊತ್ತು ವ್ಯಯ ಮಾಡಿದ್ದೆನೋ ಅವರ ಪ್ರತಿಫಲ ಇದೀಗ ದಕ್ಕಿದೆ. ಕಳೆದ 12 ತಿಂಗಳಲ್ಲಿ ನನಗೆ ನಿರಾಸೆ ಕಾದಿತ್ತು. ಆದರೆ ನಾನೀಗ ತಂಡಕ್ಕಾಗಿ ಅಮೂಲ್ಯ ಕೊಡುಗೆ ನೀಡುತ್ತಿದ್ದೇನೆ ಎಂದು ಪೀಟರ್‌ಸನ್ ನುಡಿದರು.

ಇದಕ್ಕಾಗಿ ನಾನು ಹಾತೊರೆಯುತ್ತಿದ್ದೆ. ಗಾಯದ ನಂತರ ತಂಡಕ್ಕೆ ಹಿಂತುರುಗಿದ್ದ ನನಗೆ ಇಡೀ ತಂಡವೇ ಬೆಂಬಲಿಸಿತ್ತು ಎಂದವರು ಹೇಳಿದರು.

ಅದೇ ವೇಳೆ ಕಾಲಿಂಗ್‌ವುಡ್ ನಾಯಕತ್ವ ಬಗ್ಗೆಯೂ ಕೆವಿನ್ ಮೆಚ್ಚುಗೆಯ ಮಾತುಗಳನ್ನಾಡಿದರು.

No comments: