ರಾಜ್ಯದಲ್ಲಿ ಜನಾದೇಶ ಪಡೆಯಲು ವಿಫಲವಾಗಿರುವ ಪಕ್ಷವನ್ನು ಮತ್ತೆ ಉನ್ನತ ಸ್ಥಿತಿಗೆ ತರಲು ಕಸರತ್ತು ನಡೆಸುತ್ತಿರುವ ಕಾಂಗ್ರೆಸ್, ನೂತನ ಅಧ್ಯಕ್ಷರ ಆಯ್ಕೆ ಕುರಿತು ಚಿಂತನೆ ನಡೆಸಿದೆ.
ಉನ್ನತ ಮೂಲಗಳ ಪ್ರಕಾರ, ಈ ಸ್ಥಾನವನ್ನು ಲಿಂಗಾಯಿತ ಜನಾಂಗಕ್ಕೆ ನೀಡಲು ಮುಂದಾಗಿರುವ ಕೆಪಿಸಿಸಿ ಅಲ್ಲಂ ವೀರಭದ್ರಪ್ಪ ಅವರತ್ತ ಮುಖ ಮಾಡಿದೆ.
ಉತ್ತರ ಕರ್ನಾಟಕದವರೇ ಆದ ಅಲ್ಲಂ ವೀರಭದ್ರಪ್ಪ ಅವರಿಗೆ ಬಳ್ಳಾರಿ ರಾಜಕಾರಣದ ಬಗ್ಗೆ ಚೆನ್ನಾಗಿ ತಿಳಿದವರು. ಈ ನಿಟ್ಟಿನಲ್ಲಿ ಅಧ್ಯಕ್ಷಗಿರಿಗೆ ಅವರೇ ಸೂಕ್ತ ಎಂಬುದು ಹೈಕಮಾಂಡ್ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಕುರಿತು ಕೆಲವೇ ದಿನಗಳಲ್ಲಿ ಸ್ಪಷ್ಟ ಚಿತ್ರಣ ಮೂಡಿ ಬರುವ ಸಾಧ್ಯತೆಗಳಿವೆ.
ಈಗಾಗಲೇ ಒಂದು ಬಾರಿ ಅಧ್ಯಕ್ಷರಾಗಿ ಅನುಭವ ಪಡೆದಿರುವ ಅಲ್ಲಂ ವೀರಭದ್ರಪ್ಪ ಅವರಿಗೆ ಮತ್ತೊಂದು ಅವಕಾಶ ನೀಡಲು ಚಿಂತನೆ ನಡೆಸಿರುವ ಕಾಂಗ್ರೆಸ್, ಈ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಆಳ್ವಿಕೆ ನಡೆಸುವ ಪ್ರಯತ್ನಕ್ಕೆ ಕೈ ಹಾಕಿದೆ.
Subscribe to:
Post Comments (Atom)
No comments:
Post a Comment