VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 24, 2010

ಮಂಗಳೂರು ವಿಮಾನ ದುರಂತ: ಬ್ಲಾಕ್ ಬಾಕ್ಸ್ ಪತ್ತೆ

ಮಂಗಳೂರು, ಮೇ 23: ಶನಿವಾರ ದುರಂತಕ್ಕೀಡಾದ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಕಾಕ್‌ಪಿಟ್ ವಾಯಿಸ್ ರೆಕಾರ್ಡರ್(ಸಿವಿಆರ್) ಹಾಗೂ ಬ್ಲಾಕ್ ಬಾಕ್ಸ್ ಅಪಘಾತದ ಸ್ಥಳದಲ್ಲಿ ಪತ್ತೆಯಾಗಿವೆ. 158 ಮಂದಿ ಪ್ರಯಾಣಿಕರು ಹಾಗೂ ಸಿಬ್ಬಂದಿಗಳನ್ನು ಬಲಿತೆಗೆದುಕೊಂಡ ಈ ಭೀಕರ ದುರಂತವು ಹೇಗೆ ಸಂಭವಿಸಿತೆಂಬ ಬಗ್ಗೆ ಈ ಎರಡೂ ಉಪಕರಣಗಳು ಮಹತ್ವದ ಸುಳಿವುಗಳನ್ನು ನೀಡುವ ನಿರೀಕ್ಷೆಯಿದೆ.

ಬ್ಲಾಕ್‌ ಬಾಕ್ಸ್ ಹಾಗೂ ಸಿವಿಆರ್‌ನ್ನು ಇಂದು ಬೆಳಗ್ಗೆ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಬೋಯಿಂಗ್ ಐಎಕ್ಸ್812 ವಿಮಾನದ ಅವಶೇಷಗಳೆಡೆಯಿಂದ ಹೆಕ್ಕಿ ತೆಗೆಯಲಾಯಿತು ಎಂದು ಏರ್‌ಇಂಡಿ ಯಾದ ಮೂಲಗಳು ತಿಳಿಸಿವೆ.

ಬ್ಲಾಕ್ ಬಾಕ್ಸ್ ಎಂದು ಕರೆಯಲಾ ಗುವ ಫ್ಲೈಟ್ ಡಾಟಾ ರೆಕಾರ್ಡರ್ (ಎಫ್‌ಡಿಆರ್), ಹಾರಾಟದ ಸಂದರ್ಭದಲ್ಲಿ ವಿಮಾನದ ಆಂತರಿಕ ತಾಂತ್ರಿಕ ವಿವರಗಳನ್ನು ದಾಖಲಿಸಿಡು ತ್ತದೆ. ಸಿವಿಆರ್ ವಿಮಾನ ಹಾರಾಟದ ವೇಳೆ ಕಾಕ್‌ಪಿಟ್‌ನಲ್ಲಿ ಪೈಲಟ್ ಹಾಗೂ ಮತ್ತಿತರರ ನಡುವೆ ನಡೆದ ಸಂಭಾಷಣೆ ಗಳನ್ನು ದಾಖಲಿಸಿಟ್ಟಿರುತ್ತದೆ.
ಪೈಲಟ್ ಗಳ ಹೆಡ್‌ಸೆಟ್‌ನಲ್ಲಿರುವ ಮೈಕ್ರೋ ಫೋನ್ ಹಾಗೂ ಇಯರ್‌ಫೋನ್ ಮತ್ತು ಕಾಕ್‌ಪಿಟ್‌ನ ಸೂರಿನ ಮೇಲೆ ಇರಿಸಲಾದ ಮೈಕ್ರೋಫೋನ್‌ನಿಂದ ಬರುವ ಸಿಗ್ನಲ್‌ಗಳನ್ನು ಸೆರೆಹಿಡಿಯುವ ಮೂಲಕ ಸಿವಿಆರ್ ಅವರ ಸಂಭಾಷಣೆಗಳನ್ನು ದಾಖಲಿಸುತ್ತದೆ. ಬ್ಲಾಕ್ ಬಾಕ್ಸ್ ಎಂದು ಕರೆಯಲಾಗುವ ಫ್ಲೈಟ್ ಡಾಟಾ ರೆಕಾರ್ಡರ್ (ಎಫ್‌ಡಿಆರ್), ವಿಮಾನದಲ್ಲಿ ಉಂಟಾಗಿರಬಹುದಾದ ಆಂತರಿಕ ತಾಂತ್ರಿಕ ವಿವರಗಳನ್ನು ದಾಖಲಿಸಿ ಡುತ್ತದೆ.

ಇವೆರಡನ್ನೂ ಇಂದು ಬೆಳಗ್ಗೆ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಬೋಯಿಂಗ್ ಐಎಕ್ಸ್812’ ವಿಮಾನದ ಅವಶೇಷಗಳೆಡೆಯಲ್ಲಿ ಪತ್ತೆ ಹಚ್ಚಲಾಯಿತು. ಎಂದು ಏರ್‌ಇಂಡಿ ಯಾದ ಮೂಲಗಳು ತಿಳಿಸಿವೆ.ಈ ದಶಕದಲ್ಲಿ ದೇಶವು ಕಂಡ ಅತ್ಯಂತ ಭೀಕರ ವಿಮಾನ ದುರಂತದ ಬಗ್ಗೆ ತನಿಖೆಯನ್ನು ಆರಂಭಿಸಿರುವ ತಜ್ಞರ ತಂಡಗಳು ಇಂದು ಬೆಳಗ್ಗೆ ಸಿವಿಆರ್ ಹಾಗೂ ಬ್ಲಾಕ್ ಬಾಕ್ಸ್‌ಗಳನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯನ್ನು ಆರಂಭಿಸಿದ್ದವು.ದುರಂತದ ತನಿಖೆಗೆ ನೆರವಾಗಬಹುದಾದ ಇತರ ಕೆಲವು ಉಪಕರಣಗಳು ಮತ್ತು ವಿಮಾನದ ಭಾಗಗಳನ್ನು ಕೂಡಾ ಅವಶೇಷಗಳೆಡೆ ಯಿಂದ ಸಂಗ್ರಹಿಸಲಾಗಿದೆಯೆಂದು ಮೂಲಗಳು ಹೇಳಿವೆ.

No comments: