VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 21, 2010

‘ದೇವಾಲಯದಲ್ಲಿ ರಾಜಕೀಯ ಪ್ರೇರಿತ ಸಮಿತಿ’

ಪುತ್ತೂರು, ಮೇ 20: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋ ದ್ಧಾರ ಸಮಿತಿ ರಚನೆಯು ರಾಜಕೀಯ ಪ್ರೇರಿತವಾ ಗಿದ್ದು, ಈ ಸಮಿತಿಯನ್ನು ಬರ್ಕಾಸ್ತುಗೊಳಿಸಬೇಕೆಂದು ಕಾವು ಪಂಚಲಿಂಗೇಶ್ವರ ದೇವಳದ ಮಾಜಿ ಆಡಳಿತ ಮೊಕ್ತೇಸರ ಕಾವು ಹೇಮನಾಥ ಶೆಟ್ಟಿ ಅಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ದೇವಾಲಯದ ಜೀರ್ಣೋದ್ಧಾರದಂತಹ ಪ್ರತಿಷ್ಠಿತ ವಿಚಾರದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡು ಮುಂದುವರಿಯಬೇಕಿತ್ತು. ಆದರೆ ಪುತ್ತೂರು ಮಹಾಲೀಂಗೇಶ್ವರ ದೇವಳದ ಜೀರ್ಣೋದ್ಧಾರ ಸಮಿತಿ ರಚನೆಯ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್ ರಾಜಕೀಯ ದುರುದ್ದೇಶದಿಂದ ತಾನೇ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಪಟ್ಟಿ ಯನ್ನು ಧಾರ್ಮಿಕ ದತ್ತಿ ಇಲಾಖೆಗೆ ಕಳುಹಿಸಿ ಮಂಜೂರಾತಿ ಮಾಡಿಸಿಕೊಂಡಿದ್ದಾರೆ. ಹಾಗೂ ಈ ಪದಾಧಿಕಾರಿಗಳ ಪಟ್ಟಿಯನ್ನು ಬಿಜೆಪಿ ಕಚೇರಿಯಲ್ಲಿ ತಯಾರಿಸಲಾಗಿದೆ ಎಂದು ಆರೋಪಿಸಿದರು.

ದೇವಳದ ಜೀರ್ಣೋದ್ಧಾರಕ್ಕೆ ಯಾರದೇ ವಿರೋಧವಿಲ್ಲ ಎಂದ ಅವರು, ನಳಿನ್ ಕುಮಾರ್ ಪುತ್ತೂರು ದೇವಸ್ಥಾನಕ್ಕೆ ಸೀಮಿತರಾಗುವ ಬದಲು ಜಿಲ್ಲೆಯ ಅಭಿವೃದ್ಧಿಯತ್ತ ಗಮನಹರಿಸಲಿ ಎಂದು ವ್ಯಂಗ್ಯವಾಡಿದರು. ಪತ್ರಿಕಾಗೋಷ್ಠಿಯಲ್ಲಿ ಕಿಟ್ಟಣ್ಣ ಗೌಡ ಉಪಸ್ಥಿತರಿದ್ದರು.

ಕಾವು ಹೇಮನಾಥ ಶೆಟ್ಟಿ ಆರೋಪ
ಅಷ್ಟಮಂಗಲದಲ್ಲೂ ಫಿಕ್ಸಿಂಗ್
ಪುತ್ತೂರು ಶ್ರೀ ಮಹಾಲೀಂಗೇಶ್ವರ ದೇವಸ್ಥಾನದ ಜಿರ್ಣೋದ್ಧಾರಕ್ಕೆ ಸಂಬಂಧಿಸಿದಂತೆ ನಡೆಸಲಾದ ಅಷ್ಟಮಂಗಲ ಪ್ರಶ್ನೆಯಲ್ಲೂ ಫಿಕ್ಸಿಂಗ್ ನಡೆಸಲಾಗಿದೆ ಎಂದು ದೇವಳದ ಮಾಜಿ ಅಡಳಿತ ಮೊಕ್ತೇಸರ ಜಗನ್ನಿವಾಸ್ ರಾವ್ ಆರೋಪಿಸಿದ್ದಾರೆ. ಅಷ್ಟಮಂಗಲದಲ್ಲಿ ಏನು ಹೇಳಬೇಕೆಂಬುದು ಹಿಂದಿನ ದಿನವೇ ಅಷ್ಟಮಂಗಲ ಇಡುವವರಿಗೆ ಹೇಳಲಾಗುತ್ತಿತ್ತು. ಇದರಿಂದಾಗಿ ಅಷ್ಟಮಂಗಲದಲ್ಲಿ ಮುಖ್ಯವಾಗಿ ಬರಬೇಕಿದ್ದ ಶನೀಶ್ವರನ ಪೂಜೆಗೆ ಸಂಬಂಧಿಸಿದ ವಿವಾದ, ಆರ್ಚಕರ ನಡುವೆ ನಡೆದ ವಾಗ್ವಾದಗಳು ಹಾಗೂ ಇನ್ನಿತರ ವಿಚಾರಗಳು ಬೆಳಕಿಗೆ ಬರದಂತೆ ತಡೆಯಲಾಗಿತ್ತು. ಅಷ್ಟಮಂಗಲ ಮಾಡಿ ದ್ದರಿಂದ ದೇವಸ್ಥಾನಕ್ಕೆ 3 ಲಕ್ಷ ರೂ. ನಷ್ಟವಾಯಿತೇ ವಿನಹ ಬೇರೇನೂ ಲಾಭವಾಗಿಲ್ಲ ಎಂದು ತಿಳಿಸಿದರು.

No comments: