VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 24, 2010

೮ ಜನರನ್ನು ಕಳೆದುಕೊಂಡು ಶೋಕ ಸಾಗರದಲ್ಲಿ ಮುಳುಗಿದ ಭಟ್ಕಳ ತಾಲೂಕಿನಾದ್ಯಂತ ಸೂತಕದ ಛಾಯೆ




ಭಟ್ಕಳ:ಮಂಗಳೂರಿನಲ್ಲಿ ಶನಿವಾರ ಬೆಳಗಿನ ಜಾವ ಸಂಭವಿಸಿದ ಭೀಕರ ವಿಮಾನ ದಿರಂತದಲ್ಲಿ ಭಟ್ಕಳದ ೮ ಜನರು ಸಾವಿಗೀಡಾಗಿದ್ದು ಇಡಿ ಭಟ್ಕಳವೇ ಶೋಕ ಸಾಗರದಲ್ಲಿ ಮುಳುಗಿದೆ. ಶನಿವಾರ ರಾತ್ರಿ ಅಬ್ದುಲ್ ಬರ್ ದಾಮೂದಿ, ಆಬಾನ್ ರುಕ್ನುದ್ದೀನ್, ಉಸ್ಮಾನ್ ಮುಹಿದ್ದೀನ್ ಹಾಗೂ ನಾಸಿರ್ ದಾಮೂದಿ ನಾಲ್ಕು ಜನರ ಮೃತ ದೇಹವನ್ನು ಭಟ್ಕಳಕ್ಕೆ ತರಲಾಗಿದ್ದು ಮೃತ ದೇಹಗಳನ್ನು ಕಾಣಲು ಜನರು ತಂಡೋಪತಂಡವಾಗಿ ಧಾವಿಸುತ್ತಿದ್ದು, ಇಡಿ ಭಟ್ಕಳ ತಾಲೂಕಿನಲ್ಲಿ ಸೂತಕದ ಛಾಯೆ ಆವರಿಸಿಕೊಂಡಿದ್ದು ಪ್ರತಿಯೊಬ್ಬರು ಇದೇ ವಿಷಯದ ಕುರಿತು ಚರ್ಚಿಸುತ್ತಿರುವುದು ಕಂಡು ಬಂದಿದೆ.


ವಿಮಾನ ದುರಂತದಲ್ಲಿ ಮೃತ ೮ ಜನರಲ್ಲಿ ನಾಲ್ವರು ಒಂದೇ ಕುಟುಂಬಕ್ಕೆ ಸೇರಿದ್ದು ಈ ಹಿಂದೆ ಕಾರು ಅಪಘಾತದಲ್ಲಿ ಇದೇ ಕುಟುಂಬದ ಮೂವ್ವರು ದಾರೂಣ ಸಾವನ್ನಪ್ಪಿದ್ದ ಕಹಿ ನೆನಪು ಇನ್ನು ಮಾಸದಿರುವ ಮುಂಚೆಯೆ ಇಂತಹದ್ದೊಂದು ದುರಂತ ಸಂಭವಿಸುತ್ತದೆ ಎಂದು ಯಾರು ಭಾವಿಸಿರಲಿಲ್ಲ.


ಪ್ರತಿಭಾವಂತ ಅಬ್ದುಲ್ ಬರ‍್ :ರಜೆಯನ್ನು ಕಳೆಯಲು ದುಬೈಗೆ ಹೋದ ನತದೃಷ್ಟ ಶಾಲಬಾಲಕ ಅಬ್ದುಲ್ ರಬ್ ದಾಮೂದಿ ಇಲ್ಲಿನ ಶಮ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೫ ನೆ ತರಗತಿಯಲ್ಲಿ ಓದುತ್ತಿದ್ದು ಕಳೆದ ವರ್ಷದ ಉತ್ತಮ ಸಾಧನೆಗಾಗಿ ಶಾಲೆಯ ಬಂಗಾರದ ಪದಕವನ್ನು ಪಡೆದುಕೊಂಡಿದ್ದ ಎನ್ನಲಾಗಿದ್ದು ಆತನ ಭವಿಷ್ಯ ವಿಮಾನ ದುರಂತದೊಂದಿಗೆ ಕೊನೆಗೊಂಡಂತಾಗಿದೆ.
ಮೃತ ೮ ಜನರಲ್ಲಿ ಇಲ್ಲಿನ ಬಂದರ್ ರಸ್ತೆಯ ನಿವಾಸಿ ಮುಹಮ್ಮದ್ ನಾಸಿರ್ ದಾಮುದಿ ಬಹಳ ವರ್ಷದಿಂದ ದುಬೈಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರವನ್ನು ನಡೆಸುತ್ತಿದ್ದರು ಕಳದ ಆರು ತಿಂಗಳುಗಳ ಹಿಂದೆ ಮಂಗಳೂರಿನಿಂದ ಭಟ್ಕಳಕ್ಕೆ ಬರುತ್ತಿದ್ದ ಇವರ ಪತ್ನಿ ಶಾರಿಕಾ ಎನ್ನುವವರು ಕಾರು ಅಪಘಾತದಲ್ಲಿ ಮೃತರಾಗಿದ್ದರು ಆಗ ಭಟ್ಕಳಕ್ಕೆ ಬಂದಿದ್ದ ನಾಸಿರ್ ತಮ್ಮ ಮಕ್ಕಳನ್ನು ಬೇಸಿಗೆ ರಜೆಗಾಗಿ ದುಬೈಗೆ ಕರೆದುಕೊಂಡು ಹೋಗಿದ್ದರು. ಈಗ ಶಾಲೆಗಳು ಆರಂಭವಾಗುತ್ತಿದ್ದು ಅದಕ್ಕೆ ೮ದಿನ ಮುಂಚೆ ಕರೆದುಕೊಂಡು ಭಟ್ಕಳಕ್ಕೆ ಬರುತ್ತಿರಬೇಕಾಗದರೆ ಅವರು ಈ ದುರಂತದಲ್ಲಿ ತಮ್ಮ ಮಕ್ಕಳಾದ ಬೀಬಿ ಸಾರಾ(೧೧) ಮುಹಮ್ಮದ್ ಶು‌ಐಬ್(೮), ಹಾಗೂ ನಬೀಹಾ(೬) ರೊಂದಿಗೆ ತಾವು ಈ ದುರಂತಕ್ಕೆ ಬಲಿಯಾದರು.


ಅನಾಥನಾದ ನೂಹ್: ಮುಹಮ್ಮದ್ ನಾಸಿರ್ ತಮ್ಮ ನಾಲ್ವರು ಮಕ್ಕಳಲ್ಲಿ ಅತ್ಯಂತ ಕಿರಿಯ ಪುತ್ರ ಮುಹಮ್ಮದ್ ನೂಹ್(೩) ನಿಗೆ ಪಾಸ್ ಆಗದ ಕಾರಣ ಭಟ್ಕಳದಲ್ಲಿಯೆ ಬಿಟ್ಟು ಹೋಗಿದ್ದರು. ಈಗ ಆ ಬಾಲಕ ತನ್ನ ತಂದೆ ತಾಯಿ, ಅಣ್ಣ ಅಕ್ಕ-ತಂಗಿಯರನ್ನು ಕಳೆದುಕೊಂಡು ಅನಾಥನಾಗಿದ್ದಾನೆ. ಇದು ಆತನ ಅದೃಷ್ಟವೋ ದುರಾಷ್ಟವೋ ಕಾಲವೆ ತೀರ್ಮಾನಿಸಬೇಕು. ೪ ಮೃತ ದೇಹಗಳ ಅಂತ್ಯ ಅಂಸ್ಕಾರ: ರಾತ್ರಿ ಸುಮಾರು ೧೧ ಗಂಟೆ ಭಟ್ಕಳಕ್ಕೆ ಬಂದ ೪ ಮೃತ ದೇಹಗಳ ಅಂತ್ಯ ಸಂಸ್ಕಾರವನ್ನು ಕೂಡಲೆ ಇಲ್ಲಿನ ಮಿಲ್ಲಿಯ ಮಸೀದಿಯ ಆವರಣದಲ್ಲಿ ಜನಾಝ ನಮಾಝ್ ನಿರ್ವಹಿಸಿದ ನಂತರ ನೆರವೇರಿಸಲಾಯಿತು. ಮೃತರ ಜನಾಝ ನಮಾಝನ್ನು ಜಾಮಿಯ ಮಸೀದಿಯ ಇಮಾಮ್ ಖತೀಬ್ ಮೌಲಾನ ಅಬ್ದುಲ್ ಬಾರಿ ನದ್ವಿ ನೆರವೇರಿಸಿದರು. ದುರಂತದಲ್ಲಿ ಮಡಿದ ನತದೃಷ್ಟರು: ಬಂದರ್ ರಸ್ತೆಯ ನಿವಾಸಿ ಮುಹಮ್ಮದ್ ನಾಸಿರ್ ದಾಮೂದಿ, ಮಕ್ಕಳಾದ ಬೀಬಿ ಸಾರ, ಮುಹಮ್ಮದ್ ಶು‌ಐಬ್, ನಬಿಹಾ, (ಇವರೆಲ್ಲರು ಒಂದೇ ಕುಟುಂಬದವರು) ಇನ್ನೊಂದು ಕುಟುಂಬದವರಾದ ಆಫ್ರೀನ್ ದಾಮೂದಿ ದಪುತ್ರ ಆಬಾನ್ ರುಕ್ನುದ್ದೀನ್. ಚಿಕ್ಕಪ್ಪನ ಮಗ ಅಬ್ದುಲ್ ಬರ್ ದಾಮೂದಿ, ಸಾಗರ ರಸ್ತೆ ಉಸ್ಮಾನ್ ಮುಹಿದ್ದೀನ್

No comments: