VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 24, 2010

ಎಲ್‌ಓಸಿಯಲ್ಲಿ ಭಾರತ-ಪಾಕ್ ಯೋಧರಿಂದ ಗುಂಡಿನ ಚಕಮಕಿ

ಜಮ್ಮು, ಮೇ 23: ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧ್‌ಹಾರ್ ಸಮೀಪದ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ರವಿವಾರ ಭಾರತ ಮತ್ತು ಪಾಕ್ ಪಡೆಗಳ ನಡುವೆ ಭಾರೀ ಗುಂಡಿನ ಚಕಮಕಿ ನಡೆಯುವುದರೊಂದಿಗೆ, ಕದನವಿರಾಮ ಉಲ್ಲಂಘನೆ ಯಾಗಿದೆ.ಜಮ್ಮುವಿಗೆ 200 ಕಿ.ಮೀ. ದೂರದ ಪೂಂಚ್‌ನ ಗಡಿನಿಯಂತ್ರಣ ರೇಖೆ ಸಮೀಪದ ಕೃಷ್ಣಾ ಘಾಟಿ ಎಂಬಲ್ಲಿ ಭಾರತೀಯ ಸೇನಾ ಠಾಣೆಗಳತ್ತ ಪಾಕ್ ಸೈನಿಕರು ಗುಂಡು ಹಾರಾಟ ನಡೆಸಿದ ಬಳಿಕ ಉಭಯ ಪಡೆಗಳ ನಡುವೆ ಕಾಳಗ ಭುಗಿಲೆದ್ದಿತು.

‘‘ಬೆಳಗ್ಗೆ 9:00 ಗಂಟೆಯ ವೇಳೆಗೆ ಪಾಕ್ ಸೈನಿಕರು ಲಘು ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಲಾ ರಂಭಿಸಿದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ಗುಂಡು ಹಾರಾಟ ನಡೆ ಸಿತು. ಕೂಡಲೇ ಪಾಕ್ ಪಡೆಗಳು ರಾಕೆಟ್‌ಗಳನ್ನು ಎಸೆಯ ಲಾರಂಭಿಸಿದವು’’ ಎಂದು ರಕ್ಷಣಾ ವಕ್ತಾರರೊಬ್ಬರು ತಿಳಿಸಿದ್ದಾರೆ.

ಗುಂಡಿನ ಚಕಮಕಿ ಈಗಲೂ ಮುಂದುವರಿದಿದೆಯೆಂದವರು ತಿಳಿಸಿದರು. ಇದೊಂದು ಕದನವಿರಾಮ ಉಲ್ಲಂಘನೆಯ ಸ್ಪಷ್ಟ ಪ್ರಕರಣವೆಂದು ಭಾರತೀಯ ಸೇನೆಯು ಪರಿಗಣಿಸುತ್ತದೆ ಎಂದು ಅವರು ತಿಳಿಸಿದರು. ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನಾಪಡೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲವೆಂದು ವಕ್ತಾರರು ಹೇಳಿದ್ದಾರೆ.ಆದರೆ ಪಾಕ್ ಯೋಧನೊಬ್ಬ ಭಾರತದ ಸೈನಿಕರ ಗುಂಡಿಗೆ ಬಲಿಯಾಗಿದ್ದಾನೆಂದು ಪಾಕ್ ಸೇನೆಯು ತಿಳಿಸಿದೆ.

ರಾವಲ್‌ಕೋಟ್‌ನ ಬಟ್ಟಾಲ್ ವಲಯದಲ್ಲಿ ಭಾರತದ ಸೈನಿಕರ ಅಪ್ರಚೋದಿತ ಗುಂಡೆಸೆತಕ್ಕೆ ಪಾಕ್ ಯೋಧನೊಬ್ಬ ಹುತಾತ್ಮನಾಗಿದ್ದಾನೆ ಎಂದು ಪಾಕ್ ಸೇನೆಯ ಹೇಳಿಕೆ ತಿಳಿಸಿದೆ.ಘಟನೆಯ ಬಗ್ಗೆ ಪಾಕಿಸ್ತಾನವು ಭಾರತಕ್ಕೆ ಬಲವಾದ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ ಮತ್ತು ಈ ಬಗ್ಗೆ ತಕ್ಷಣವೇ ಧ್ವಜ ಸಭೆ ನಡೆಸುವಂತೆ ಆಗ್ರಹಿಸಿದೆ. ಆದಾಗ್ಯೂ ಬಟ್ಟಾಲ್ ವಲಯದಲ್ಲಿ ಗುಂಡಿನ ಚಕಮಕಿಯು ಆಗಾಗ ನಡೆಯುತ್ತಿರುವುದಾಗಿ ಅದು ತಿಳಿಸಿದೆ.

No comments: