VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 11, 2010

ಸರಕಾರದ ವಿರುದ್ಧ ಮುತಾಲಿಕ್ ಕಿಡಿ


ಮಂಗಳೂರು: ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಕೂಡಾ ಮಾಡದಂತ ನೀಚ ಕೆಲಸವನ್ನು ಬಿಜೆಪಿ ನೇತೃತ್ವದ ರಾಜ್ಯ ಸರಕಾರದ ಮಾಡುತ್ತಿದೆ. ಹೀಗೆಂದು ಕಿಡಿಕಾರಿದವರು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್
ಅವರು ನಿನ್ನೆ ರಾಜ್ಯ ಸರಕಾರ ಶ್ರೀರಾಮ ಸೇನೆಯ ಕಾರ್ಯಕರ್ತರ ಮೇಲೆ ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಬಿಜೆಪಿ ಶಾಸಕರಿಗೆ ಮಂತ್ರಿ ಪಟ್ಟ ನೀಡಲಿಲ್ಲವೆಂದು ಆಕ್ರೋಶಗೊಂಡ ಕಾರ್ಯಕರ್ತರು ಹುಬ್ಬಳ್ಳಿ, ಆನೆಕಲ್ ಮತ್ತಿತರ ಕಡೆ 36 ಬಸ್ಸುಗಳಿಗೆ ಬೆಂಕಿ ಹಚ್ಚಿದ್ದಾರೆ. ಹಿಂದೂ ಧರ್ಮಕ್ಕಾಗಿ ಹೋರಾಟ ಮಾಡಿದ ತನ್ನ ಮೇಲೆ ಕಾಂಗ್ರೆಸ್ ಗೂಂಡಾನೋರ್ವ ಮಸಿ ಬಳಿದಾಗ ಆಕ್ರೋಶಗೊಂಡ ಹಿಂದುಗಳು ಬಸ್ ಸುಟ್ಟಾಗ ಅವರನ್ನು ಬಂಧಿಸಿ ಜೈಲಿಗೆ ಹಾಕಿದ್ದಾರೆ. ಆ ಕೇಸಿನಲ್ಲಿ ರಾಜ್ಯದಿಂದ 1700 ಶ್ರೀರಾಮ ಸೇನೆಯ ಕಾರ್ಯಕರ್ತರನ್ನು ಬಂಧಿಸಲಾಗಿದ್ದು 112 ಮಂದಿ ಈಗಲೂ ಜೈಲಿನಲ್ಲಿದ್ದಾರೆ. ಅಲ್ಲದೆ ವಿವಿಧ ಆರೋಪ ಹೊರಿಸಿ ಪ್ರಸಾದ್ ಅತ್ತಾವರ ಸಹಿತ ಹಲವಾರು ಕಾರ್ಯಕರ್ತರನ್ನು ಜೈಲಿಗೆ ಹಾಕುವ ಮೂಲಕ ಸರಕಾರ ಶ್ರೀರಾಮ ಸೇನೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆಯೆಂದು ಕಿಡಿ ಕಾರಿದರು.
ಗುಲ್ಬರ್ಗಾದಲ್ಲಿ ಪೊಲೀಸರು ಸೇನೆಯ ಕಾರ್ಯಕರ್ತರನ್ನು ಬತ್ತಲೆ ಮಾಡಿ ಮೆರವಣಿಗೆ ಮಾಡಿದ್ದರೆ, ಧಾರವಾಡದಲ್ಲಿ ಬಾಯಿಗೆ ಬೂಟು ತುರುಕಿರುವುದಲ್ಲದೆ ಮೂತ್ರವನ್ನೂ ಮಾಡಿದ್ದಾರೆ. ಹಿಂದೂಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ನ್ಯಾಯಯುತವಾಗಿ ಹೋರಾಟ ಮಾಡುತ್ತಿರುವ ಹಿಂದೂ ಸಂಘಟನೆಗಳಲ್ಲದೆ, ರೈತ ಸಂಘ, ಕನ್ನಡ ಸಂಘಗಳ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗಿ ಅವುಗಳನ್ನು ಹತ್ತಿಕ್ಕುವ ತಂತ್ರ ರೂಪಿಸಿದೆ ಎಂದು ಮುತಾಲಿಕ್ ಹರಿಹಾಯ್ದರು.
ಕಳೆದ 50 ವರ್ಷಗಳಲ್ಲಿ ಕಾಂಗ್ರೆಸ್ ಮಾಡಿದ ಹರಾಮಿ ಕೆಲಸಗಳನ್ನು ಬಿಜೆಪಿ ಮುಂದುವರಿಸಿದೆ. ಮುಂದೆ ಬಿಜೆಪಿಗೂ ಕಾಂಗ್ರೆಸ್ಗಾದ ಗತಿಯೇ ಆಗಲಿದೆ ಎಂದು ಭವಿಷ್ಯ ನುಡಿದರು.
ಹಾಲಪ್ಪರಿಗೆ ರಕ್ಷಣೆ, ನಿತ್ಯಾನಂದನಿಗೆ ಜೈಲು
ನಿತ್ಯಾನಂದ ಸ್ವಾಮಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಠಾಣೆಯಲ್ಲೂ ಒಂದೇ ಒಂದು ಕೇಸು ಕೂಡಾ ದಾಖಲಾಗಿರಲಿಲ್ಲ. ಆದರೂ ಅವರನ್ನು ಬಂಧಿಸಲಾಗಿದ್ದರೆ ರಾಜ್ಯ ಮಂತ್ರಿ ಹಾಲಪ್ಪರ ವಿರುದ್ಧ ದೂರು ದಾಖಲಿಸಲಾಗಿದ್ದರೂ ಅವರನ್ನು ಬಂಧಿಸುವ ಬದಲು ಮಂತ್ರಿಯೋರ್ವರ ಮನೆಯಲ್ಲಿ ಆಶ್ರಯ ನೀಡುವ ಮೂಲಕ ಸರಕಾರ ರಕ್ಷಣೆ ನೀಡಿದೆ.
ಅದಲ್ಲದೆ ಅಮಾಯಕರ ಮೇಲೆ ದೂರು ದಾಖಲಾದರೆ ಅವರ ಮನೆಗೆ ನುಗ್ಗುವ ಪೊಲೀಸರು ತಂದೆ, ತಾಯಿ ಹಾಗೂ ಪೋಷಕರನ್ನು ಬಂಧಿಸುತ್ತಾರೆ. ಹಾಲಪ್ಪರು ತಲೆಮರೆಸಿಕೊಂಡಾಗ ಬಂಧನಕ್ಕೆ ಅವರ ಕುಟುಂಬಸ್ಥರು ಯಾರೂ ಸಿಗಲಿಲ್ಲವೇ ಎಂದು ಪ್ರಶ್ನಿಸಿದ ಮುತಾಲಿಕ್, ರಾಜ್ಯದಲ್ಲಿ ಬಡವರಿಗೊಂದು ಕಾನೂನು, ಮಂತ್ರಿಗಳಿಗೊಂದು ಕಾನೂನು ಇದೆಯೆಂದು ಆಕ್ರೋಶ ವ್ಯಕ್ತಪಡಿಸಿದರು.

No comments: