ಮಂಗಳೂರು,ಮೇ.11: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಂಗಳೂರು ಇದರ ವತಿಯಿಂದ ಒಂದು ದಿನದ ಜಾನಪದ ಕಲಾಮೇಳ ಹಾಗೂ ರಾಜ್ಯ ಮಟ್ಟದ ದಫ್ ಸ್ಪರ್ಧೆ ನಗರದ ಡಾನ್ ಬಾಸ್ಕೋ ಹಾಲ್ನಲ್ಲಿ ಇಂದು ಬೆಳಗ್ಗೆ ಉದ್ಘಾಟನೆಗೊಂಡಿತು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ನಿರ್ದೇಶಕರಾದ ಮನು ಬಾಳಿಗಾರ, ದಫ್ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಜಾಗತೀಕರಣದ ಈ ಕಾಲದಲ್ಲಿ ನಮ್ಮ ಸಂಸ್ಕೃತಿ ಆಚರಣೆ ಹಾಗೂ ಭಾಷೆಗಳನ್ನು ಕಳಕೊಳ್ಳುತ್ತಿದ್ದೇನೆ, ನಮ್ಮ ಸಂಸ್ಕೃತಿಯನ್ನು ಬಿಟ್ಟು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದೇವೆ ಎಂದು ಅವರು ಹೇಳಿದರು.
ಬಳಿಕ ಮಾತನಾಡಿದ ಅವರು ಜಾಗತೀಕರಣದ ಈ ಕಾಲದಲ್ಲಿ ನಮ್ಮ ಸಂಸ್ಕೃತಿ ಆಚರಣೆ ಹಾಗೂ ಭಾಷೆಗಳನ್ನು ಕಳಕೊಳ್ಳುತ್ತಿದ್ದೇನೆ, ನಮ್ಮ ಸಂಸ್ಕೃತಿಯನ್ನು ಬಿಟ್ಟು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದೇವೆ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಮನು ಬಾಳಿಗಾರ್ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾ ಯಿತು.
ಹುಸೈನ್ ಕಾಟಿಪಳ್ಳ ರಚಿಸಿದ 'ನಿಲಾವು' ಪುಸ್ತಕದ ಬಿಡುಗಡೆಯನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಹಾಗೂ ಸಮಾರಂಭದ ಅಧ್ಯಕ್ಷರಾದ ಎಂ.ಬಿ. ಅಬ್ದುಲ್ ರಹ್ಮಾನ್ ನೆರವೇರಿಸಿದರು.ಬಳಿಕ ಮಾತನಾಡಿ ಅವರು ದಪ್ಪು ಕಲೆಯನ್ನು ಇನ್ನಷ್ಟು ಅಭಿವೃದ್ದಿ ಮಾಡುವ ನಿಟ್ಟಿನಲ್ಲಿ ಶ್ರಮಿಸಬೇಕಿದೆ. ಬ್ಯಾರಿ ಅಕಾಡೆಮಿ ಹುಟ್ಟುವಲ್ಲಿ ಮನು ಬಾಳಿಗಾರ್ ಅವರ ಸಹಕಾರ ವನ್ನು ನೆನಪಿಸಿ ಕೃತಜ್ಞತೆ ಅರ್ಪಿಸಿದರು.

ನಂದಾವರ ಖತೀಬರಾದ ಜಎನ್.ಎಚ್. ಆದಂ ಫೈಝಿ, ಜಾನಪದ ವಿದ್ವಾಂಸರಾದ ಬನ್ನಂಜೆ ಬಾಬು ಅಮೀನ್ ಈ ಸಂದರ್ಭದಲ್ಲಿ ಮಾತನಾಡಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಇವರು ಸ್ವಾಗತಿಸಿದರು, ಹುಸೈನ್ ಕಾಟಿಪಳ್ಳ ಇವರು ಧ್ಯೇಯಗೀತೆ ಹಾಡಿದರು. ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು. ಅಝೀಝ್ ಬೈಕಂಪಾಡಿ ಧನ್ಯವಾದವಿತ್ತರು
photo source: daijiworld
No comments:
Post a Comment