VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 29, 2010

‘ಎಚ್.ಎಂ.ರೇವಣ್ಣ ಬಿಜೆಪಿ ಸೇರ್ಪಡೆ ಸತ್ಯಕ್ಕೆ ದೂರ’

ಬೆಂಗಳೂರು, ಮೇ 28: ಮಾಜಿ ಸಚಿವ ಎಚ್.ಎಂ.ರೇವಣ್ಣರನ್ನು ವಿಧಾನ ಪರಿಷತ್‌ಗೆ ನೇಮಕ ಮಾಡಲು ಭಾರತೀಯ ಜನತಾ ಪಕ್ಷ ತನ್ನಡೆಗೆ ಸೆಳೆಯುತ್ತಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿರುವುದು ಸತ್ಯಕ್ಕೆ ದೂರವಾದ ವಿಷಯ ಎಂದು ಬೆಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಸುರೇಶ್ ಕುಮಾರ್ ಸ್ಪಷ್ಟೀಕರಣ ನೀಡಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ಪಕ್ಷ ಮತ್ತು ಕಾರ್ಯಕರ್ತರನ್ನು ಗೊಂದಲಕ್ಕೆ ಸಿಲುಕಿಸುವುದು ಬಿಜೆಪಿಯ ಕುತಂತ್ರ ರಾಜಕಾರಣವಾಗಿದೆ. ಇದನ್ನು ನಗರ ಕಾಂಗ್ರೆಸ್ ಖಂಡಿಸುತ್ತದೆ. ಅಲ್ಲದೇ ಇದಕ್ಕೆ ಮಹತ್ವ ನೀಡದಂತೆ ಅವರು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

ಗೊಂದಲ ನಿವಾರಣೆಗೆ ಮನವಿ: ಈ ಮಧ್ಯೆ ಹೆಬ್ಬಾಳ ವಿಧಾನ ಸಭೆ ಕ್ಷೇತ್ರದ ಮುಖಂಡ ಕೆಪಿಸಿಸಿ ಸದಸ್ಯ ಚಾಂದ್ ಪಾಷಾ ಮತ್ತಿತರರು ಪತ್ರಿಕಾಗೋಷ್ಠಿ ನಡೆಸಿ, ರೇವಣ್ಣ ರನ್ನು ಬಿಜೆಪಿಯತ್ತ ಸೆಳೆಯಲಾಗುತ್ತಿದೆ ಎಂಬ ಮಾಧ್ಯಮಗಳ ಸುದ್ದಿಯಿಂದ ಕಾರ್ಯಕರ್ತರಲ್ಲಿ ಗೊಂದಲ ಮೂಡಿದೆ. ಇದು ಈ ಭಾಗದಲ್ಲಿ ಪಕ್ಷ ಸಂಘಟನೆಗೆ ತೊಡಕು ಉಂಟಾಗುತ್ತಿದೆ.

ಒಂದು ವೇಳೆ ರೇವಣ್ಣ ಬಿಜೆಪಿ ಸೇರಲು ಬಯಸಿದ್ದಲ್ಲಿ ಅದಕ್ಕೆ ತಮ್ಮದೇನು ಅಭ್ಯಂತರ ಇಲ್ಲ. ಆದರೆ, ಈ ಬಗ್ಗೆ ಅವರು ತಮ್ಮ ನಿಲುವು ಸ್ಪಷ್ಟಪಡಿಸಬೇಕು. ರೇವಣ್ಣ ಅವರ ಸೇರ್ಪಡೆ ವದಂತಿ ನಿಜವಾಗಿದ್ದಲ್ಲಿ ಪಕ್ಷದ ಹೈಕಮಾಂಡ್ ಅವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುವ ಮೂಲಕ ಕಾರ್ಯಕರ್ತರಲ್ಲಿನ ಗೊಂದಲವನ್ನು ನಿವಾರಿಸಬೇಕು ಎಂದು ಮನವಿ ಮಾಡಿದ್ದಾರೆ.

No comments: