ಬೆಂಗಳೂರು, ಮೇ 28: ಪತ್ರಿಕೆಗಳು ಮತ್ತು ಮಾಧ್ಯಮಗಳು ಸಮಾಜ ಮುಖಿಯಾಗಿರಬೇಕು ಎಂದು ಸಚಿವ ಮುಮ್ತಾಝ್ ಅಲಿಖಾನ್ ಸಲಹೆ ಮಾಡಿದ್ದಾರೆ.
ಗುರುವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿನ ವಿಜಯವಾಹಿನಿ ಪತ್ರಿಕೆ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಗುಣಮಟ್ಟದ ಪತ್ರಿಕೆಗಳಿಗೆ ಈಗಲೂ ಅಪಾರ ಓದುಗರು ಸಿಗುತ್ತಾರೆ.
ರಾಜಕೀಯ ಮತ್ತು ಸಿನಿಮಾಗಳ ವೈಭವೀಕರಣ ಬಿಟ್ಟು ಶಿಕ್ಷಣ ಮತ್ತು ಬಡತನ ನಿರ್ಮೂಲನೆ ಕುರಿತು ಹೆಚ್ಚು ಬರೆಯುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಿಕೆಯ ಪ್ರಧಾನ ಸಂಪಾದಕ ಶರಿಯಾರ್ ಖಾನ್ ವಹಿಸಿದ್ದರು. ವೇದಿಕೆಯಲ್ಲಿ ಟಿಪ್ಪು ಸುಲ್ತಾನ್ ಸಂಯುಕ್ತರಂಗದ ಅಧ್ಯಕ್ಷ ಸರ್ದಾರ್ ಅಹ್ಮದ್ ಖುರೇಶಿ, ಬೊಮ್ಮನಹಳ್ಳಿಬಾಬು, ವೌಲಾನಾ ಖದೀರ್ ಅಹ್ಮದ್ ಆಮ್ರ, ರಘುನಾಥ ಗುರೂಜಿ, ಪರಮಶಿವಯ್ಯ, ಖಾಸಿಮ್ ಸಾಬ್ ಉಪಸ್ಥಿತರಿದ್ದರು.
Subscribe to:
Post Comments (Atom)
No comments:
Post a Comment