ಬಾಬ್ರಿ ಮಸೀದಿ ಧ್ವಂಸ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಶಿ ಹಾಗೂ 19 ಮಂದಿ ವಿರುದ್ಧ ಕೈ ಬಿಟ್ಟಿದ್ದ ಆರೋಪವನ್ನು ಮರು ಪರಿಶೀಲಿಸಬೇಕು ಎಂದು ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಅಲಾಹಾಬಾದ್ ಹೈಕೋರ್ಟ್‌ನ ಲಕ್ನೋಪೀಠ ವಜಾಗೊಳಿಸುವ ಮೂಲಕ ಆಡ್ವಾಣಿ ಸೇರಿದಂತೆ ಬಿಜೆಪಿ ಮುಖಂಡರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.
1992ರ ಡಿಸೆಂಬರ್‌ನಲ್ಲಿ ಬಾಬ್ರಿ ಮಸೀದಿ ಧ್ವಂಸಗೊಳಿಸಿದ ಪ್ರಕರಣದ ಸಂಚಿನಲ್ಲಿ ಬಿಜೆಪಿ ಮುಖಂಡ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾ ಭಾರತಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಹಾಗೂ ಇನ್ನಿತರರ ವಿರುದ್ಧದ ಆರೋಪದ ವಿಚಾರಣಾ ಪ್ರಕ್ರಿಯೆಯನ್ನು ಮುಂದುವರಿಸಲು ನಿರ್ದೇಶನ ನೀಡಬೇಕೆಂದು ಕೋರಿ ಸಿಬಿಐ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ತಿರಸ್ಕರಿಸಿದೆ.
ಈಗಾಗಲೇ ಮಸೀದಿ ಧ್ವಂಸ ಸಂಚಿನ ಕುರಿತಂತೆ ಆಡ್ವಾಣಿ ವಿರುದ್ಧದ ಆರೋಪವನ್ನು 2003ರಲ್ಲಿಯೇ ಕೈಬಿಡಲಾಗಿತ್ತು. ಅಲ್ಲದೇ ಆಡ್ವಾಣಿ ಸೇರಿದಂತೆ ಇನ್ನಿತರರ ಮೇಲೆ ಮಸೀದಿ ಧ್ವಂಸ ಪ್ರಕರಣದ ಸಂಚಿನ ಅರ್ಜಿ ರಾಯ್ ಬರೇಲಿ ಕೋರ್ಟ್‌ನಲ್ಲಿಯೂ ವಿಚಾರಣೆ ನಡೆಯುತ್ತಿದೆ ಎಂದು ಕೋರ್ಟ್ ಸಿಬಿಐಗೆ ತಿಳಿಸಿದೆ.
ಆಡ್ವಾಣಿ ಸೇರಿದಂತೆ 20 ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಕೆಲ ನ್ಯಾಯಾಲಯದಲ್ಲಿನ ವಿಚಾರಣೆ ಸಂದರ್ಭದಲ್ಲಿ ಕಾನೂನು ಬದ್ದವಾಗಲಿ, ಸೂಕ್ತವಾದ ಹಾಗೂ ಸರಿಯಾದ ಕ್ರಮದಲ್ಲಿ ಆರೋಪವನ್ನು ಸಾಬೀತುವಲ್ಲಿ ವಿಫಲವಾಗಿರುವುದು ಸ್ಪಷ್ಟವಾಗಿದೆ ಎಂದು ಲಕ್ನೋ ಪೀಠದ ನ್ಯಾಯಮೂರ್ತಿ ಅಲೋಕ್ ಕುಮಾರ್ ಸಿಂಗ್ 44 ಪುಟಗಳ ತೀರ್ಪಿನಲ್ಲಿ ವಿವರಿಸಿದ್ದಾರೆ.
ಬಾಬ್ರಿ ಮಸೀದಿಯನ್ನು ಕೆಡವಲು ಎಲ್.ಕೆ.ಆಡ್ವಾಣಿ ಸೇರಿದಂತೆ 20ಮಂದಿ ಜನರನ್ನು ಕೆರಳಿಸುವ ನಿಟ್ಟಿನಲ್ಲಿ ಉದ್ರೇಕಕಾರಿ ಭಾಷಣ ಮಾಡಿ, ಹಿಂಸಾಚಾರಕ್ಕೆ ಎಡೆ ಮಾಡಿಕೊಟ್ಟಿದ್ದರು ಎಂದು ಸಿಬಿಐ ಆರೋಪಿತ್ತು. ಆದರೆ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್ 2003ರಲ್ಲಿಯೇ ಆಡ್ವಾಣಿ ವಿರುದ್ಧದ ಆರೋಪವನ್ನು ತಳ್ಳಿಹಾಕಿತ್ತು.
Subscribe to:
Post Comments (Atom)
No comments:
Post a Comment