VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 24, 2010

ಸ್ವಯಂ ಸೇವಕರ ಶ್ಲಾಘನೀಯ ಸೇವೆ

ಮಂಗಳೂರು, ಮೇ 23: ಬಜ್ಪೆಯಲ್ಲಿ ನಡೆದ ವಿಮಾನ ದುರಂತದಲ್ಲಿ ಮೃತಪಟ್ಟವರ ಶವಗಳನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದು, ಅದನ್ನು ಗುರುತು ಪತ್ತೆಗಾಗಿ ಬರುವ ಬಂಧುಗಳಿಗೆ ಸ್ಥಳೀಯ ಯುವಕರು ಸಹಕರಿಸುತ್ತಿದ್ದುದು ಭಾರೀ ಮೆಚ್ಚುಗೆಗೆ ಪಾತ್ರವಾಯಿತು.

ಶನಿವಾರದ ದುರಂತದ ಬಳಿಕ ಮೃತದೇಹವನ್ನು ಘಟನಾ ಸ್ಥಳದಿಂದ ಮೇಲಕ್ಕೆತ್ತುವಲ್ಲಿ ಸ್ಥಳೀಯ ಯುವಕರು ಜೀವದ ಹಂಗುತೊರೆದು ಶ್ರಮಿಸಿದ್ದು, ಇಂದು ಕೂಡ ಸ್ವಯಂ ಸೇವಕರ ಸೇವಾ ಕಾರ್ಯ ಮುಂದುವರಿದಿತ್ತು. ಶವಾಗಾರದ ಮುಂದೆ ಮೃತರ ಬಂಧಬಳಗವನ್ನು ಸಂತೈಸುವ, ಮೃತದೇಹವನ್ನು ಗುರುತು ಪತ್ತೆ ಹಚ್ಚಲು, ಶವಗಳನ್ನು ಜೋಡಿಸಿಡಲು, ಶವಗಳನ್ನು ಅಚ್ಚುಕಟ್ಟಾಗಿ ಹಸ್ತಾಂತರಿಸುವ ಕೆಲಸದಲ್ಲಿ ಬೆಳಗಿನಿಂದ ಸಂಜೆಯವರೆಗೂ ನಿರತರಾಗಿದ್ದರು. ಶವಗಳ ಗುರತು ಪತ್ತೆಗಾಗಿ ಬರುವವರಿಗಾಗಿ ಜಿಲ್ಲಾಡಳಿತ ಊಟದ ವ್ಯವಸ್ಥೆ ಮಾಡಿತ್ತು.

ಗಾಯಾಳು ಹಾಗೂ ಪ್ರತಿಯೋರ್ವ ಮೃತ ವ್ಯಕ್ತಿಗೆ ಒಬ್ಬರಂತೆ ಸೇವಕ (ಎಂಜಲ್ಸ್)ರನ್ನು ಇಂಡಿಯನ್ ಎರ್ಲೈನ್ಸ್ ನೇಮಿಸಿದೆ. ಎಂಜಲ್ಸ್ ಗಾಯಾಳು ಹಾಗೂ ಮೃತರ ಕುಂಟುಂಬದವರಿಗೆ ಬೇಕಾದ ಸೇವೆ ಒದಗಿಸಲು ಬದ್ಧರಾಗಿರುತ್ತಾರೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

No comments: