VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 24, 2010

ವಿಮಾನ ದುರಂತ: ಮುಂದುವರಿದ ವಿಷಾದದ ಛಾಯೆ


ಮಂಗಳೂರು, ಮೇ 23: ಶನಿವಾರ ಮುಂಜಾನೆ ಸಂಭವಿಸಿದ ಭೀಕರ ವಿಮಾನ ದುರ್ಘಟನೆಯ ದೃಶ್ಯಗಳು ಮಾಸಿದಂತಿಲ್ಲ.
ವಿಮಾನ ನಿಲ್ದಾಣ ಮತ್ತೆ ಯಥಾ ಸ್ಥಿತಿಗೆ ಮರಳಿ ದಂತೆ ಗೋಚರಿಸಿದರೂ ಪ್ರಯಾಣಿಕರ ಮತ್ತು ಅವರನ್ನು ಬೀಳ್ಕೊಡಲು ಮತ್ತು ಎದುರು ಗೊಳ್ಳಲು ಆಗಮಿಸಿದ ಕುಟುಂಬಸ್ಥರ ಮುಖದಲ್ಲಿ ವಿಷಾದದ ಛಾಯೆ ಎದ್ದು ಕಾಣುತ್ತಿತ್ತು.

ಲೋಪದೋಷ ಗೋಚರಿಸಿಲ್ಲ
2006ರಿಂದಲೆ ರನ್ವೇಯಲ್ಲಿ ಅಂತಾರಾಷ್ಟ್ರೀಯ ಮತ್ತು ಡೊಮೆಸ್ಟಿಕ್ ವಿಮಾನಗಳು ಇಳಿಯುತ್ತವೆ. ಆದರೆ, ನಿಲ್ದಾಣದ ಕಾರ್ಯ ವೈಖರಿ ಅಥವಾ ರನ್ ವೇಯಲ್ಲಿ ಯಾವುದೇ ಲೋಪದೋಷ ಗೋಚರಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಟೇಬಲ್ ಟಾಪ್ ಏರ್ಪೋರ್ಟ್ನಲ್ಲಿ ಸಕರಾತ್ಮಕ ಮತ್ತು ನಕರಾತ್ಮಕ ಪರಿಣಾಮಗಳಿವೆ ಎಂಬುದನ್ನು ಒಪ್ಪುವ ಅಧಿಕಾರಿಗಳು ಈ ವಿಮಾನ ನಿಲ್ದಾಣದ ಸೌಕರ್ಯ ಮತ್ತು ರೂಪುರೇಷ ಸಮರ್ಪಕವಾಗಿದೆ ಎನ್ನುತ್ತಾರೆ. ಶನಿವಾರ ನಡೆದ ದುರಂತಕ್ಕೆ ರನ್ ವೇಯ ತಾಂತ್ರಿಕ ದೋಷ ಕಾರಣವಲ್ಲ.

2005ರಲ್ಲಿ 1850 ಮೀಟರ್ ಇದ್ದ ರನ್ ವೇಯನ್ನು ಇದೀಗ 2450 ಮೀಟರ್ಗೆ ವಿಸ್ತರಿಸಲಾಗಿದೆ. ಅಗತ್ಯಕ್ಕಿಂತ ಹೆಚ್ಚು ಸ್ಥಳ ಮತ್ತು ಮೂಲಭೂತ ಸೌಕರ್ಯಗಳನ್ನು ವಿಮಾನ ನಿಲ್ದಾಣ ಹೊಂದಿದೆ ಎಂದು ಹೇಳುತ್ತಾರೆ.
ಮೃತರ ಸಂಬಂಧಿಗಳ ಅನುಕೂಲಕ್ಕಾಗಿ ಏರ್ ಇಂಡಿಯಾ ಎಕ್ಸ್ಪ್ರೆಸ್ ದುಬೈನಿಂದ ವಿಶೇಷ ವಿಮಾನದ ವ್ಯವಸ್ಥೆ ಕಲ್ಪಿಸಿದ್ದು, ರವಿವಾರ ಬೆಳಗ್ಗೆ 7:30ಕ್ಕೆ 22 ಮಂದಿಯೊಂದಿಗೆ ಬಜ್ಪೆ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನ ಆಗಮಿಸಿತ್ತು.

No comments: