ಬೆಂಗಳೂರು, ಮೇ 18: ಅಕ್ರಮ ಗಣಿಗಾರಿಕೆ ಕುರಿತು ವಿವರಣೆ ಕೇಳಿ ನೋಟಿಸ್ ನೀಡಿದ ರಾಜ್ಯಪಾಲರ ಕ್ರಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸಚಿವ ಜನಾರ್ದನ ರೆಡ್ಡಿ ಸಂವಿಧಾನಕ್ಕೆ ಸವಾಲಾಗಿದ್ದಾರೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಟೀಕಿಸಿದ್ದಾರೆ.
ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರಿಗೆ ನೀಡಿರುವ ನೋಟಿಸ್‌ಗೆ ಉತ್ತರ ನೀಡಲು ಹೇಳುವ ಎದೆಗಾರಿಕೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಇಲ್ಲ ವಾಗಿದೆ. ಹೀಗಾಗಿಯೇ ಸಂಧಾನದ ಮಾತುಗಳನ್ನು ಯಡಿಯೂರಪ್ಪ ಆಡುತ್ತಿದ್ದಾರೆ. ಬಿಜೆಪಿ ಸರಕಾರದ ಕ್ರಮವನ್ನು ಪ್ರಶ್ನಿಸುವವರೆಲ್ಲ ಕಾಂಗ್ರೆಸ್ ಏಜೆಂಟ ರಂತೆ ಕಾಣುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರಾಜ್ಯಪಾಲರನ್ನು ಕಾಂಗ್ರೆಸ್‌ನ ಏಜೆಂಟ್ ಎಂದು ಹೇಳುವ ಬಿಜೆಪಿ ಮುಖಂಡರು, ಎನ್‌ಡಿಎ ಸರಕಾರ ಆಡಳಿತದಲ್ಲಿದ್ದ ಸಂದರ್ಭದಲ್ಲಿ ನೇಮಿಸಿದ ರಾಜ್ಯಪಾಲರೆಲ್ಲ ಬಿಜೆಪಿ ಏಜೆಂಟರುಗಳೇ ಎಂದು ಪ್ರಶ್ನಿಸಿದ ಪೂಜಾರಿ, ಬಿಜೆಪಿ ಮುಖಂಡರು ಸಂವಿಧಾನದ ಕಾನೂನುಗಳನ್ನು ತಿಳಿದು ಮಾತನಾಡುವುದು ಒಳಿತು.
ಇಲ್ಲವಾದರೆ ಅವರಿಗೆ ಕಾನೂನಿನ ಪಾಠ ಹೇಳಬೇಕಾಗುತ್ತದೆ ಎಂದು ಸಲಹೆ ಮಾಡಿದರು.
ಅಕ್ರಮ ಗಣಿಗಾರಿಕೆಯ ಹಣದ ಅಮಲಿನಲ್ಲಿ ರೆಡ್ಡಿ ಸಹೋದರರು ರಾಜ್ಯ ಸರಕಾರ, ಮುಖ್ಯಮಂತ್ರಿ ಗಳು, ರಾಜ್ಯಪಾಲರು, ಸಂವಿಧಾನಕ್ಕಿಂತಲೂ ಅತೀತ ರಂತೆ ವರ್ತಿಸುತ್ತಿದ್ದಾರೆ.
ಆದುದರಿಂದ ರಾಜ್ಯಪಾಲರು ತಮಗಿರುವ ಸಂವಿಧಾನಾತ್ಮಕ ವ್ಯಾಪ್ತಿಯಲ್ಲಿ ನೋಟಿಸ್ ನೀಡಿದ್ದಾರೆ ಎಂದು ಹೇಳಿದ ಪೂಜಾರಿ, ಅಕ್ರಮ ಗಣಿಗಾರಿಕೆ ಸಂಬಂಧಿಸಿದಂತೆ ನ್ಯಾಯಾಲ ಯದ ಮಧ್ಯಂತರ ತೀರ್ಪನ್ನು ಜನಾರ್ದನ ರೆಡ್ಡಿ ಕ್ಲಿನ್‌ಚೀಟ್ ಎಂದು ಹೇಳುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಜೀವಂತ ವಿಲ್ಲ ಎಂಬ ಬಿಜೆಪಿ ಆರೋಪಕ್ಕೆ ಗ್ರಾಮ ಪಂಚಾ ಯತ್ ಚುನಾವಣೆಯಲ್ಲಿ ಮತದಾರರು ಉತ್ತರ ನೀಡಿದ್ದಾರೆ. ಮಂಗಳೂರಿನ 49 ಗ್ರಾ.ಪಂ.ಗಳಲ್ಲಿ 29ರಲ್ಲಿ ಕಾಂಗ್ರೆಸ್, 13ರಲ್ಲಿ ಬಿಜೆಪಿ, 5ರಲ್ಲಿ ಜೆಡಿಎಸ್, ಉಳಿದ ಎರಡರಲ್ಲಿ ಸಮಬಲವಿದೆ. ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಮುಖಂಡರಾದ ರಾಮಚಂದ್ರಪ್ಪ, ಪ್ರಕಾಶ್ ರಾಠೋಡ್ ಮತ್ತಿತರರು ಹಾಜರಿದ್ದರು.
Subscribe to:
Post Comments (Atom)
No comments:
Post a Comment