ವೀಸಾ ನೆಪದಲ್ಲಿ ಕಾದಿದ್ದ ಜವರಾಯ
ವಿಮಾನ ದುರಂತದಲ್ಲಿ ಕೊಡಗಿನ ಕಕ್ಕಬೆ ಯವಕಪಾಡಿಯ ಅಪ್ಪಾರಂಡ ಚಿತ್ರಾ ತಮ್ಮ ಪತಿ ಹಾಗೂ ಮಗು ವಿನೊಂದಿಗೆ ಸಾವಿಗೀಡಾಗಿದ್ದಾರೆ.
ನಾಪೋಕ್ಲು (ಕೊಡಗು): ಮಂಗಳೂರಿ ನಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ವಿಮಾನ ದುರಂತದಲ್ಲಿ ಕೊಡಗಿನ ಕಕ್ಕಬೆ ಯವಕಪಾಡಿಯ ಅಪ್ಪಾರಂಡ ಚಿತ್ರಾ ತಮ್ಮ ಪತಿ ಹಾಗೂ ಮಗು ವಿನೊಂದಿಗೆ ಸಾವಿಗೀಡಾಗಿದ್ದಾರೆ.
ದುಬೈನಲ್ಲಿ ಜಾಹಿರಾತು ಏಜೆನ್ಸಿ ಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಮಂಗಳೂರು ಮೂಲದ ಜಯರಾಂ (41) ಅವರನ್ನು ವಿವಾಹವಾಗಿದ್ದ ಚಿತ್ರಾ (39) ಸದ್ಯಕ್ಕೆ ಅಲ್ಲಿಯೇ ನೆಲೆಸಿದ್ದರು. ಇತ್ತೀಚೆಗಷ್ಟೇ ಜಯರಾಂ ಬೇರೆ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಈ ಸಂಬಂಧ ವೀಸಾ ಬದಲಿಸುವುದಕ್ಕಾಗಿ ಜಯರಾಂ ಪತ್ನಿ ಹಾಗೂ ಮಗ ರಾಹುಲ್ (5)ನೊಂದಿಗೆ ಅನಿರೀಕ್ಷಿತವಾಗಿ ಮಂಗಳೂರಿಗೆ ಆಗಮಿಸುತ್ತಿದ್ದರು. ಬಿ.ಕಾಂ. ಪದವೀಧರರಾಗಿದ್ದ ಚಿತ್ರಾ ಮದುವೆಗೆ ಮುನ್ನ ಜಯರಾಂ ಅವರೊಂದಿಗೆ ಕೆಲಸ ಮಾಡುತ್ತಿದ್ದರು. ಇವರದು ಪ್ರೇಮ ವಿವಾಹ. ಆದರೆ, ರಾಹುಲ್ ಹುಟ್ಟಿದ ನಂತರ ಆಕೆ ಕೆಲಸ ಬಿಟ್ಟಿದ್ದರು. ಸುಮಾರು 10 ವರ್ಷಗಳಿಂದ ಈ ಕುಟುಂಬ ದುಬೈನಲ್ಲಿಯೇ ನೆಲೆಸಿತ್ತು. ಈ ವರ್ಷವಷ್ಟೇ ರಾಹುಲ್‌ನನ್ನು ಶಾಲೆಗೆ ಸೇರಿಸಬೇಕಾಗಿತ್ತು.ಎರಡು ತಿಂಗಳ ಹಿಂದೆಯಷ್ಟೇ ತವರು ಮನೆಗೆ ಆಗಮಿಸಿದ್ದ ಚಿತ್ರಾ ಅವರು ಕೆಲ ದಿನಗಳ ಕಾಲ ಯವಕಪಾಡಿಯಲ್ಲಿ ಉಳಿದಿದ್ದರು. ಅದೇ ಚಿತ್ರಾ ತವರಿನ ಕೊನೇ ಭೇಟಿ. ತಂದೆ ಅಪ್ಪಾರಂಡ ಮಂದಣ್ಣ ಬದುಕಿಲ್ಲ. ವಿಮಾನ ದುರಂತದಲ್ಲಿ ಮಗಳು-ಅಳಿಯ ಹಾಗೂ ಮೊಮ್ಮಗ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿ ್ದದಂತೆಯೇ ತಾಯಿ ಮಾಚಮ್ಮ ಅವರನ್ನು ಸಂತೈಸಲು ಕುಟುಂಬದ ಸದಸ್ಯರಿಗೆ ಸಾಧ್ಯವಾಗಲಿಲ್ಲ.
ಸಹೋದರ ವೇಣು ಪ್ರತಿಕ್ರಿಯೆ: ‘ನನಗೆ ನಿಜಕ್ಕೂ ಏನು ಹೇಳಲು ಸಾಧ್ಯ ವಾಗುತ್ತಿಲ್ಲ. ಸದ್ಯಕ್ಕೆ ಅಮ್ಮನನ್ನು ಸಂತೈಸುವುದೇ ಆಗಿದೆ’ ಎಂದು ಚಿತ್ರಾ ಅವರ ಸಹೋದರ ಅಪ್ಪಾರಂಡ ವೇಣು ದುರಂತ ಸ್ಥಳದಿಂದ ದೂರ ವಾಣಿ ಮೂಲಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
May 23, 2010
Subscribe to:
Post Comments (Atom)
No comments:
Post a Comment