ಬೆಂಗಳೂರು, ಮೇ 28: ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ನನ್ನನ್ನು ಬಿಜೆಪಿಗೆ ಕರೆ ತರಲು ವೇದಿಕೆ ಸಿದ್ದಗೊಂಡಿದೆ ಎಂಬ ವರದಿಯನ್ನು ತಳ್ಳಿ ಹಾಕಿರುವ ಜೆಡಿಎಸ್‌ನ ಹಾಲಿ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಅಝೀಮ್ ನಾನು ‘ಜೆಡಿಎಸ್ ಬಿಡಲ್ಲ; ಬಿಜೆಪಿ ಸೇರಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ‘ವಾರ್ತಾ-ಭಾರತಿ’ಯೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ವರದಿ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸುತ್ತ, ಇದು ಸತ್ಯಕ್ಕೆ ದೂರವಾದ ಸುಳ್ಳಿನಿಂದ ಕೂಡಿದ ವರದಿ. ಸದ್ಯ ನಾನು ಜೆಡಿಎಸ್‌ನಲ್ಲಿ ಇದ್ದೇನೆ ಮತ್ತು ಮುಂದೆ ಸಹ ಇರುತ್ತೇನೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಪುನರುಚ್ಛರಿಸಿದರು.
ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಅಂತಹ ಯಾವುದೇ ಬೆಳವಣಿಗೆಗಳು ನಡೆದಿಲ್ಲ. ಇದು ನನ್ನ ವೈಯುಕ್ತಿಕ ಮತ್ತು ರಾಜಕೀಯ ಜೀವನಕ್ಕೆ ಧಕ್ಕೆ ತರುವಂಥ ಪ್ರಯತ್ನಗಳು.
ಪಕ್ಷದ ವರಿಷ್ಠ ದೇವೇಗೌಡರಿಗೆ ನಾನು ಆಪ್ತನಾಗಿದ್ದೇನೆ ಇದನ್ನು ಸಹಿಸದ ಪಕ್ಷದ ಒಳಗಿನ ಮತ್ತು ಹೊರಗಿನ ಕೆಲವರು ಈ ರೀತಿಯ ವದಂತಿಗಳನ್ನು ಸಷ್ಟಿಸಿ ನನ್ನನು ದೇವೇಗೌಡರಿಂದ ದೂರ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅದು ಸಾಧ್ಯವಿಲ್ಲ.
ನನ್ನ ಬಗ್ಗೆ ಪಕ್ಷ ಮತ್ತು ಸಮಾಜದಲ್ಲಿ ಅಪನಂಬಿಕೆ ಹುಟ್ಟು ಹಾಕುವ ಇಂತಹ ಪ್ರಯತ್ನಗಳಿಗೆ ನಾನು ಬೆಲೆ ಕೊಡುವುದಿಲ್ಲ ಎಂದು ಅವರು ಸ್ಪಷ್ಟವಾಗಿ ನುಡಿದರು.
Subscribe to:
Post Comments (Atom)
No comments:
Post a Comment