ಸೋನಿಯಾ-ಚಿರಂಜೀವಿ ಚರ್ಚೆ
ಆಂಧ್ರ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯ ಹಿನ್ನೆಲೆಯಲ್ಲಿ ಶನಿವಾರ ಇಲ್ಲಿ ಚಿರಂಜೀವಿ ಅವರ ಜೊತೆ ನಡೆಸಿದ ಮಾತುಕತೆಯಲ್ಲಿ ಸೋನಿಯಾ ಗಾಂಧಿ ಈ ಮನವಿ ಮಾಡಿದ್ದಾರೆ.
ನವದೆಹಲಿ, (ಪಿಟಿಐ): ರಾಜ್ಯಸಭೆ ಚುನಾವಣೆಗೆ ಪ್ರಜಾ ರಾಜ್ಯಂ ಪಕ್ಷ (ಪಿಆರ್‌ಪಿ)ದ ಅಭ್ಯರ್ಥಿಗಳನ್ನು ಕಣಕ್ಕಿಳಿಸದಂತೆ ಪಕ್ಷದ ಅಧ್ಯಕ್ಷ, ಚಿತ್ರ ನಟ ಚಿರಂಜೀವಿ ಅವರನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೋರಿದ್ದಾರೆ.
ಆಂಧ್ರ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯ ಹಿನ್ನೆಲೆಯಲ್ಲಿ ಶನಿವಾರ ಇಲ್ಲಿ ಚಿರಂಜೀವಿ ಅವರ ಜೊತೆ ನಡೆಸಿದ ಮಾತುಕತೆಯಲ್ಲಿ ಸೋನಿಯಾ ಗಾಂಧಿ ಈ ಮನವಿ ಮಾಡಿದ್ದಾರೆ.
ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧೆಗೆ ಇಳಿಯಲಿದೆ ಎಂದು ಚಿರಂಜೀವಿ ಪ್ರಕಟಿಸಿದ ಕೂಡಲೇ ಎಚ್ಚೆತ್ತ ಕಾಂಗ್ರೆಸ್ ವರಿಷ್ಠರು ಮೈತ್ರಿ ಬಗ್ಗೆ ಚರ್ಚಿಸಲು ಅವರನ್ನು ದೆಹಲಿಗೆ ಆಹ್ವಾನಿಸಿದರು.
294 ಸದಸ್ಯ ಬಲದ ಆಂಧ್ರ ವಿಧಾನಸಭೆಯಲ್ಲಿ ಪಿಆರ್‌ಪಿ 18 ಸದಸ್ಯರನ್ನು ಹೊಂದಿದೆ. ಮಾಜಿ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅವರ ನಿಧನಾನಂತರ ರಾಜ್ಯದಲ್ಲಿ ಉಂಟಾಗಿರುವ ಗುಂಪುಗಾರಿಕೆ ರಾಜ್ಯಸಭಾ ಚುನಾವಣೆ ಮೇಲೆ ಪ್ರಭಾವ ಬೀರಿ, ಪಕ್ಷಕ್ಕೆ ತೊಂದರೆ ಆಗದಂತೆ ಎಚ್ಚರ ವಹಿಸಲು ಕಾಂಗ್ರೆಸ್ ಈಗ ಚಿರಂಜೀವಿ ಅವರೊಂದಿಗೆ ಮಾತುಕತೆ ನಡೆಸಿದೆ ಎನ್ನಲಾಗಿದೆ.
ವೈ.ಎಸ್.ಆರ್. ಪುತ್ರ ಸಂಸದ ಜಗನ್‌ಮೋಹನ್ ರೆಡ್ಡಿ ಅವರ ಪ್ರಾಬಲ್ಯವನ್ನು ಹತ್ತಿಕ್ಕಲೂ ಕಾಂಗ್ರೆಸ್, ಚಿರಂಜೀವಿ ಅವರನ್ನು ದಾಳವಾಗಿ ಬಳಸಿಕೊಳ್ಳುವ ಸಾಧ್ಯತೆಗಳಿವೆ.
ಸಭೆಗೂ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿದ ಚಿರಂಜೀವಿ, ‘ನಾನು ಮುಕ್ತ ಮನಸ್ಸಿನಿಂದ ಇಲ್ಲಿಗೆ ಬಂದಿದ್ದೇನೆ. ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆಯಲಿದೆ’ ಎಂದರು.
‘ಆಂಧ್ರದಲ್ಲಿ ನಮ್ಮ ಪಕ್ಷ ರಚನಾತ್ಮಕ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುತ್ತಿದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ನಲ್ಲಿ ನಮ್ಮ ಪಕ್ಷವನ್ನು ವಿಲೀನಗೊಳಿಸುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.
Subscribe to:
Post Comments (Atom)
No comments:
Post a Comment