VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 29, 2010

ಯುವಕನ ಮೇಲೆ ಪೊಲೀಸ್ ದೌರ್ಜನ್ಯ

ಕಾಸರಗೋಡು, ಮೇ 28: ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ ಮೊಬೈಲ್ ಫೋನಿನಲ್ಲಿ ಮಾತನಾಡುತ್ತಿದ್ದ ಅಮಾ ಯಕ ಬೈಕ್ ಸವಾರನಿಗೆ ಪೊಲೀಸರು ದೌರ್ಜನ್ಯವೆಸಗಿದ ಘಟನೆ ನಗರದಲ್ಲಿ ನಡೆದಿದೆ.ತಳಂಗರೆಯ ಹಮೀದ್‌ರ ಪುತ್ರ ಶಮೀರ್ (29) ಎಂಬವರು ಪೊಲೀಸ ರಿಂದ ಮಾರಣಾಂತಿಕ ಹಲ್ಲೆಗೊಳಗಾದ ವರು. ನಗರದಲ್ಲಿ ಹಿಂಸಾಚಾರದ ಸಂದರ್ಭದಲ್ಲಿ ಹಳೆ ಬಸ್ಸು ನಿಲ್ದಾಣದ ಅಂಚೆ ಕಚೇರಿ ಬಳಿ ಈ ಘಟನೆ ನಡೆ ದಿದೆ ಎನ್ನಲಾಗಿದೆ. ತಾಯಲಂಗಾಡಿ ಕಡೆಗೆ ತೆರಳುತ್ತಿದ್ದ ಶಮೀರ್ ಬೈಕ್‌ನ್ನು ರಸ್ತೆ ಬದಿ ನಿಲ್ಲಿಸಿ ಮಾತನಾಡುತ್ತಿದ್ದಾಗ ಪ್ಲೆಯಿಂಗ್ ದಳ ಜೀಪಿನಲ್ಲಿ ಬಂದಿಳಿದು ಪೊಲೀಸರು ಲಾಠಿಯಿಂದ ದೌರ್ಜನ್ಯವೆಸ ಗಿದ್ದು, ಈ ಬಗ್ಗೆ ಪ್ರಶ್ನಿಸಿದಾಗ ಮತ್ತೆ ಮತ್ತೆ ಥಳಿಸಲಾಯಿತೆನ್ನಲಾಗಿದೆ.

ಅಮಾಯಕನ ಮೇಲಿನ ದೌರ್ಜ್ಯ ನ್ಯವು ಪ್ರತ್ಯಕ್ಷದರ್ಶಿಗಳನ್ನು ನಿಬ್ಬೆರಗಾಗು ವಂತೆ ಮಾಡಿದೆ. ಕೆಲ ತಿಂಗಳ ಹಿಂದೆ ಪತ್ರಕರ್ತರ ರಹಿಮಾನ್ ತಾಯಲಂಗಾ ಡಿಯವರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದರು. ನಗರದಲ್ಲಿ ಹಿಂಸಾಚಾರಕ್ಕೆ ಕಾರಣರಾದವರತ್ತ ಗಮನ ಹರಿಸದ ಪೊಲೀಸರು ಅಮಾಯಕರ ಮೇಲೆ ದೌರ್ಜನ್ಯ ನಡೆಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ ಎಂಬ ಮಾತುಗಳು ಸಾರ್ವ ಜನಿಕ ವಲಯಗಳಲ್ಲಿ ಕೇಳಿ ಬರುತ್ತಿವೆ.

ಬಸ್‌ಗೆ ಕಲ್ಲು ತೂರಾಟ:ಮೂವರಿಗೆ ಗಾಯ
ಕಾಸರಗೋಡು, ಮೇ 28: ಕಾಞಂಗಾಡ್‌ನಿಂದ ಕಾಸರಗೋಡಿಗೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿಗೆ ಮೇಲ್ಪರಂಬ ಬಳಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಚಾಲಕ ಸೇರಿದಂತೆ ಮೂವರು ಗಾಯಗೊಂಡ ಘಟನೆ ನಿನ್ನೆ ರಾತ್ರಿ ನಡೆದಿದೆ. ಗಾಯಗೊಂಡವರನ್ನು ಬಸ್ ಚಾಲಕ ಕೋನಕ್ಕಾಡ್ ಕಂಬಾಳಪಳ್ಳಿಯ ಎಂ.ವಿ.ಸಣ್ಣಿ(40), ನಿರ್ವಾಹಕ ನೀಲೇಶ್ವರದ ಪಿ.ಸಜಿತ್ (25), ಪ್ರಯಾಣಿಕ ಸುಧಾಕರ (35) ಎಂದು ಗುರುತಿಸಲಾಗಿದೆ.

ಸಣ್ಣಿಯವರ ತಲೆಗೆ ಗಂಭೀರ ಗಾಯವಾಗಿದ್ದು, ಇವರು ಪ್ರಜ್ಞೆ ತಪ್ಪಿ ಬಸ್ಸಿನೊಳಗೆ ಬಿದ್ದಿದ್ದರು. ಬಸ್ಸು ರಸ್ತೆ ಬದಿ ನಿಂತಿದ್ದರಿಂದ ಬಹುದೊಡ್ಡ ದುರಂತ ತಪ್ಪಿದೆ ಎನ್ನಲಾಗಿದೆ. ಸಣ್ಣಿಯವರನ್ನು ಜನರಲ್ ಹಾಗೂ ಉಳಿದವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಸರಗೋಡು ಹಿಂಸಾಚಾರ: 23 ಮಂದಿಯ ಬಂಧನ
ಕಾಸರಗೋಡು, ಮೇ 28: ನಗರದಲ್ಲಿ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನಗರ ಠಾಣಾ ಪೊಲೀಸರು 23 ಮಂದಿಯನ್ನು ಬಂಧಿಸಿದ್ದಾರೆ.ಇವರಲ್ಲಿ 20 ಮಂದಿಯನ್ನು ಮುಂಜಾಗ್ರತಾ ಕ್ರಮ ವಾಗಿ ಬಂಧಿಸಲಾಗಿದೆ. ನಗರಸಭಾ ಸದಸ್ಯ ಜಗದೀಶ್‌ರ ನಾಯಕ್ಸ್ ರಸ್ತೆಯಲ್ಲಿರುವ ಅಂಗಡಿಗೆ ಹಾನಿಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚೌಕಿ ಪೆರಿಯಾಟಡ್ಕದ ಪಿ.ಪಿ.ಉನೈಸ್(19) ಹಾಗೂ ಇಬ್ಬರು ಬಾಲಕರನ್ನು ಬಂಧಿಸಲಾಗಿದೆ.

ನಗರದ ಇತರೆಡೆಗಳಲ್ಲಿ ನಡೆದ ಹಿಂಸಾಚಾರಕ್ಕೆ ಕಾರಣರಾದ 20 ಮಂದಿಯನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಂಧಿಸಿ ದ್ದಾರೆ. ವಿದ್ಯಾನಗರದ ಚಾಲ ಹೌಸ್‌ನ ಪಿ.ಎಂ. ಮಿಸಾಹಬ್ (19), ಬಂಗ್ರ ಮಂಜೇಶ್ವರ ಶಾಂತಿನಗರದ ಅಂಗಡಿಪದವಿನ ಸಂತು (24), ಮುನ್ನೂರುಪ್ಪಾಡಿ ಹೌಸ್‌ನ ಸಿ.ಕಾರ್ತಿ (19), ಅಣಂಗೂರಿನ ಎನ್.ಮುರಳೀಧರನ್ (30), ಚೆಂಗಳದ ಅಬ್ದುಲ್ ಲತೀಫ್ (29), ಚೆಚ್ಚಂಗುಯಿ ಇಝಾಕ್ ನಗರದ ಅಬ್ದುಲ್ ಹಮೀದ್ (29), ಪೇರಾಲ್ ಕಣ್ಣೂರಿನ ಕೆ.ಉದಯ ಯಾನೆ ಕುಟ್ಟನ್ (19), ಕೆ.ಪ್ರಮೋದ್ (18), ಎಂ.ಸುರೇಶ್ (20) ಮೊದಲಾದವರನ್ನು ವಿದ್ಯಾನಗರದಿಂದ ಬಂಧಿಸ ಲಾಗಿದೆ ಎಂದು ಹೇಳಲಾಗಿದೆ.

ಅಡ್ಕತ್ತಬೈಲ್ ಕೋಟವಳಪ್ಪ್ ಬಿ.ಕೆ.ಹೌಸ್‌ನ ಸಿ.ಎಂ. ಅಹ್ಮದ್ (37). ಅಡ್ಕತ್ತಬೈಲ್‌ನ ಮುಹಮ್ಮದ್ ಶಂನಾಡ್ (20), ಪಾಣಲಂ ಕುಂಞಕಾನದ ಅಹ್ಮದ್ ರಶೀದ್ (18), ಚೇರೂರು ತುರ್ತಿಯ ಬಾಲಕನೊಬ್ಬನನ್ನು ಕರಂದಕ್ಕಾಡ್ ಜಂಕ್ಷನ್‌ನಿಂದ, ಕರಂದಕ್ಕಾಡ್ ಶ್ರೀಕೃಷ್ಣ ಹೊಟೇಲ್ ಬಳಿಯ ಪ್ರಶಾಂತ್ (20) ಹಾಗೂ ಸಂದೀಪ್ (23), ಬಟ್ಟಂಪಾರೆಯ ಕೆ. ಮಹೇಶ್ (18), ಅಡ್ಕತ್ತಬೈಲ್‌ನ ಕೆ.ನಿಶಿತ್ (18), ಅಡ್ಕತ್ತ ಬೈಲ್‌ನ ಸುಬ್ರಹ್ಮಣ್ಯ ಕ್ಷೇತ್ರ ಬಳಿಯ ಸಂದೀಪ್ (18), ಕೇಳುಗುಡ್ಡೆಯ ಸಿ.ಯತೀಶ್ (18), ಬಟ್ಟಂಪಾರೆಯ ಕೆ. ಅನಾಸ್ (18)ರನ್ನು ಮೀಪುಗುರಿಯಿಂದ ಬಂಧಿಸ ಲಾಗಿದೆ ಎಂದು ತಿಳಿದು ಬಂದಿದೆ. ಹಿಂಸಾಚಾರಕ್ಕೆ ಕಾರಣರಾ ದವರ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

No comments: