ಕಾಸರಗೋಡು, ಮೇ 29: ನಗರದಲ್ಲಿ ಕಳೆದ ಎರಡು ದಿನಗಳ ಹಿಂದೆ ಉಲ್ಭ ಣಿಸಿದ ಹಿಂಸಾಚಾರದ ಭಾಗವೆಂಬಂತೆ ಕೂಡ್ಲುವಿನಲ್ಲಿ ಮನೆಯೊಂದಕ್ಕೆ ಹಾಗೂ ಪಾರೆಕಟ್ಟ ಎಂಬಲ್ಲಿ ಬೈಕೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಇಂದು ವರದಿಯಾಗಿದೆ. ಕೂಡ್ಲುವಿನ ದಿ.ಬಿ.ಅಹ್ಮದ್ ಕುಂಞಿ ಮಾಸ್ಟರ್‌ರ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಮನೆಯ ಕಿಟಕಿ, ಬಾಗಿಲುಗಳು ಬೆಂಕಿಗಾಹುತಿಯಾಗಿವೆ. ಘಟನೆಯಿಂದ ಸುಮಾರು 1ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿ ಸ ಲಾಗಿದೆ. ಇಂದು ಮುಂಜಾನೆ 1 ಗಂಟೆಯ ಸುಮಾರಿಗೆ ಮನೆಯ ಆವರಣ ಗೋಡೆಯ ಮೂಲಕ ಒಳ ಬಂದ ದುಷ್ಕರ್ಮಿಗಳು ಈ ಕೃತ್ಯ ಎಸಗಿ ದ್ದಾರೆ ಎನ್ನಲಾಗಿದೆ.
ಇನ್ನೊಂದು ಘಟನೆಯಲ್ಲಿ ಪಾರೆಕಟ್ಟ ಬದರ್ ಮಸೀದಿ ಬಳಿಯ ಲತೀಫ್‌ರ ಮನೆಯ ಮುಂಭಾಗದಲ್ಲಿರಿಸಲಾಗಿದ್ದ ಹೀರೋಹೋಂಡಾ ಹಂಕ್ ಬೈಕ್‌ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಬೈಕ್ ಸಂಪೂರ್ಣ ಅಗ್ನಿಗಾಹುತಿಯಾಗಿದೆ. ಇಂದು ಮುಂಜಾನೆ 2ರ ಸುಮಾರಿಗೆ ಈ ಕೃತ್ಯ ಎಸಗಲಾಗಿದೆ. ಲತೀಫ್ ವಿದೇಶದಲ್ಲಿದ್ದು, ಈ ಸಂದರ್ಭ ಲತೀಫ್‌ರ ಪತ್ನಿ ಆಸ್ಮಾ ಮತ್ತು ಮಕ್ಕಳಾದ ತೌಸೀಫ್, ತಸ್ಲೀಮಾ ಮನೆಯಲ್ಲಿದ್ದರು ಎನ್ನಲಾಗಿದೆ.ಘಟನಾ ಸ್ಥಳಗಳಿಗೆ ನಗರ ಠಾಣಾ ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸು ತ್ತಿದ್ದಾರೆ. ನಗರದಲ್ಲಿ ಕೆಲ ದಿನಗಳಿಂದ ಹಿಂಸಾಚಾರ ನಡೆಯುತ್ತಿದ್ದು, ಇದರ ಬೆನ್ನಿಗೆ ನಗರದ ಹೊರವಲಯದಲ್ಲಿ ಇಂತಹ ಘಟನೆಗಳು ಜನತೆಯನ್ನು ಭಯಭೀತರನ್ನಾಗಿಸಿದೆ.
Subscribe to:
Post Comments (Atom)
No comments:
Post a Comment