VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 30, 2010

‘ಏರ್ ಇಂಡಿಯಾದಲ್ಲಿ ಅಶಿಸ್ತಿಗೆ ಅವಕಾಶ ಇಲ್ಲ’

ಹೊಸದಿಲ್ಲಿ, ಮೇ 29: ಏರ್ ಇಂಡಿಯಾ ಸಂಸ್ಥೆಯಲ್ಲಿ ಯಾವುದೇ ಅಶಿಸ್ತಿಗೆ ಅವಕಾಶ ಇಲ್ಲ ಎಂದು ಹೇಳಿರುವ ನಾಗರಿಕ ವಿಮಾನಯಾನ ಸಚಿವ ಪ್ರಪುಲ್ ಪಟೇಲ್, ಇತ್ತೀಚೆಗೆ ಸಿಬ್ಬಂದಿಗಳ ಮುಷ್ಕರದಂತಹ ಘಟನೆಗಳನ್ನು ಹತ್ತಿಕ್ಕಲು ಆಡಳಿತ ಮಂಡಳಿಗೆ ಸಂಪೂರ್ಣ ಸ್ವಾತಂತ್ರ ನೀಡುವುದಾಗಿ ಘೋಷಿಸಿದ್ದಾರೆ.

‘ ಇಂತಹ ಸನ್ನಿವೇಶಗಳನ್ನು ನಿಭಾಯಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಆಡಳಿತ ಮಂಡಳಿ ಸಂಪೂರ್ಣ ಸ್ವತಂತ್ರವಾಗಿದೆ. ಮುಷ್ಕರದಂತಹ ಅಶಿಸ್ತುಗಳನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಸಿಎನ್‌ಎನ್-ಐಬಿಎನ್ ಚಾನೆಲ್‌ನಲ್ಲಿ ಕರಣ್ ಥಾಪರ್‌ರೊಂದಿಗೆ ನಡೆಸಿದ ಸಂದರ್ಶನದಲ್ಲಿ ಪ್ರಪುಲ್ ಪಟೇಲ್ ಹೇಳಿದರು.

ಮುಷ್ಕರ ನಡೆಸಿದ್ದಕ್ಕಾಗಿ ಇನ್ನೂ ಹೆಚ್ಚಿನ ನೌಕರರನ್ನು ಕೆಲಸದಿಂದ ಉಚ್ಚಾಟಿಸಲಾಗುವುದೇ ಎಂದು ಕೇಳಿ ದಾಗ, ಅದಕ್ಕೆ ಏರ್‌ಲೈನ್ಸ್ ಆಡಳಿತ ಮಂಡಳಿ ಸ್ವತಂತ್ರ ವಾಗಿದೆ. ಅಗತ್ಯವಿದ್ದರೆ ಅದು ಹಾಗೆ ಮಾಡಬಹುದು. ಈ ಬಗ್ಗೆ ನಾನು ಮಧ್ಯ ಪ್ರವೇಶಿಸುವುದಿಲ್ಲ ಎಂದು ಅವರು ಹೇಳಿದರು.

ಏರ್ ಇಂಡಿಯಾ ಮತ್ತು ಇಂಡಿಯನ್ ಆರ್‌ಲೈನ್ಸ್‌ನ ವಿಲೀನ ಪ್ರಕ್ರಿಯೆ ದೀರ್ಘ ಕಾಲಿಕ ಪ್ರಕ್ರಿಯೆಯಾಗಿದ್ದು, ಆಂತರಿಕ ವಿರೋಧ ವ್ಯಕ್ತವಾಗಿದೆ ಮತ್ತು ವ್ಯವಸ್ಥಿತ ಯತ್ನವು ಅದರ ಯಶಸ್ಸನ್ನು ಕಾತರಿ ಪಡಿಸುವಲ್ಲಿ ವಿಫಲಗೊಂಡಿದೆ ಎಂದು ಪಟೇಲ್ ಹೇಳಿದರು.

‘ವಿಲೀನಕ್ಕೆ ಆಂತರಿಕವಾಗಿ ಬಹಳಷ್ಟು ವಿರೋಧ ಇದ್ದುದರಿಂದ ಯಶಸ್ಸು ಸಾಧ್ಯವಾಗಿಲ್ಲ. ವಿರೋಧ ವ್ಯಕ್ತಪಡಿಸಿದವರಲ್ಲಿ ಸಂಸ್ಥೆಯ ಜನರೂ ಇದ್ದಾರೆ ಮತ್ತು ಕೆಲವು ನೌಕರ ಸಂಘಗಳೂ ಇವೆ, ಎಂದು ಅವರು ಹೇಳಿದರು.

No comments: