ಪ್ರಧಾನಿಯಿಂದ ತಲಾ 2 ಲಕ್ಷ ರೂ ಪರಿಹಾರ ಘೋಷಣೆ
ಮಂಗಳೂರಿನಲ್ಲಿ ವಿಮಾನ ಭಸ್ಮ: 160ಕ್ಕೂ ಹೆಚ್ಚು ಸಾವು?
ಬಜ್ಪೆ ವಿಮಾನ ನಿಲ್ದಾಣದಿಂದ ಸುಮಾರು 10 ಕಿ.ಮೀ. ದೂರದ ಕೆಂಜಾರುವಿನಲ್ಲಿ ಬೆಳಗ್ಗೆ 6.20ರ ವೇಳೆಗೆ ದುರಂತ ಸಂಭವಿಸಿದ್ದು ವಿಮಾನ ಬೆಂಕಿ ಹೊತ್ತಿಕೊಂಡು ಉರಿಯುತ್ತಿದೆ. ಇಡೀ ಪ್ರದೇಶದಲ್ಲಿ ದಟ್ಟ ಹೊಗೆ ವ್ಯಾಪಿಸಿದೆ.
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದ ಬಳಿ ದುಬೈಯಿಂದ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ಸ್ ವಿಮಾನ ಶನಿವಾರ ಮುಂಜಾನೆ ಭೀಕರವಾಗಿ ಅಪಘಾತಕ್ಕೆ ಈಡಾಗಿದ್ದು 160ಕ್ಕೂ ಹೆಚ್ಚು ಮಂದಿ ಮೃತರಾಗಿರುವ ಶಂಕೆ ಇದೆ.
ದುಬೈಯಿಂದ ಬರುತ್ತಿದ್ದ ವಿಮಾನ ಮಂಗಳೂರಿನಲ್ಲಿ ಇಳಿಯುವ ಮುನ್ನ ತಾಂತ್ರಿಕ ದೋಷ ಕಾಣಿಸಿದ್ದು ಅಪಘಾತಕ್ಕೆಕಾರಣ ಎಂದು ಹೇಳಲಾಗುತ್ತಿದೆ. ಬಜ್ಪೆ ವಿಮಾನ ನಿಲ್ದಾಣದಿಂದ ಸುಮಾರು 10 ಕಿ.ಮೀ. ದೂರದ ಕೆಂಜಾರುವಿನಲ್ಲಿ ಬೆಳಗ್ಗೆ 6.20ರ ವೇಳೆಗೆ ದುರಂತ ಸಂಭವಿಸಿದ್ದು ವಿಮಾನ ಬೆಂಕಿ ಹೊತ್ತಿಕೊಂಡು ಉರಿಯುತ್ತಿದೆ. ಇಡೀ ಪ್ರದೇಶದಲ್ಲಿ ದಟ್ಟ ಹೊಗೆ ವ್ಯಾಪಿಸಿದೆ.
ವಿಮಾನದಲ್ಲಿ 163 ಪ್ರಯಾಣಿಕರು ಮತ್ತು 6 ಮಂದಿ ಸಿಬ್ಬಂದಿ ನಾಲ್ಕು ಮಕ್ಕಳು ಸೇರಿ 173 ಮಂದಿ ಇದ್ದರು ಎಂದು ಹೇಳಲಾಗಿದೆ. ವಿಮಾನವು ರನ್ ವೇಗೆ ತಾಗಿ, ನಂತರ ಮುಳ್ಳುಬೇಲಿಗೆ ಹೊಡೆದು ವಿಮಾನ ನಿಲ್ದಾಣದ ಆವರಣದ ಗೋಡೆಯಿಂದ ಆಚೆಗೆ ಹೋಗಿ ಬಿತ್ತು ಎಂದು ವಿಮಾನನಿಲ್ದಾಣದ ಮೂಲಗಳು ಹೇಳಿವೆ.
'ಇದು ಅಪಘಾತವೇ ಹೊರತು ಘಟನೆ ಅಲ್ಲ' ಎಂದು ಮೂಲಗಳು ಹೇಳಿವೆ. ದುರಂತದ ಸುದ್ದಿ ತಿಳಿದೊಡನೆಯೇ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಸಮರೋಪಾದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಸ್ಥಳೀಯರು ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿದ್ದಾರೆ. ದಟ್ಟ ಹೊಗೆ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಕರ್ನಾಟಕದಲ್ಲಿ ಇಷ್ಟೊಂದು ಭೀಕರ ಹಾಗೂ ಭಾರೀ ಪ್ರಮಾಣದ ವಿಮಾನ ಅಪಘಾತ ಸಂಭವಿಸಿದ್ದು ಇದೇ ಮೊದಲು ಎಂದು ಹೇಳಲಾಗುತ್ತಿದೆ.
2 ಲಕ್ಷ ಪರಿಹಾರ: ವಿಮಾನ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರಧಾನಿಯವರ ರಾಷ್ಟ್ರೀಯ ವಿಕೋಪ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ ತಲಾ 50,000 ರೂಪಾಯಿಗಳ ಪರಿಹಾರ ಘೋಷಿಸಿದ್ದಾರೆ.
ಸಹಾಯವಾಣಿ ಸಂಖ್ಯೆ: ವಿಮಾನ ಅಪಘಾತದ ಬಗ್ಗೆ ಹೆಚ್ಚಿನ ವಿವರಣೆಗಳಿಗಾಗಿ ಸಹಾಯವಾಣಿ ಸಂಖ್ಯೆ 0824 - 2220422,011-25656196, 011-25603101 ದೂರವಾಣಿ ಕರೆಗಳನ್ನು ಮಾಡಬಹುದು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಭರದಿಂದ ಸಾಗಿರುವ ರಕ್ಷಣಾ ಕಾರ್ಯ
ಏರ್ ಇಂಡಿಯ ವಿಮಾನ ದುರಂತದ ಸುದ್ದಿ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿದ ಆಂಬುಲೆನ್ಸ್ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಿಗೆ ಸ್ಥಳೀಯ ನಾಗರೀಕರು ದೊಡ್ಡ ಸಂಖ್ಯೆಯಲ್ಲಿಯೇ ನೆರವಾಗುತ್ತಿದ್ದಾರೆ.
ಬಜಪೆ: ದುಬೈನಿಂದ ಮಂಗಳೂರಿಗೆ ಆಗಮಿಸಿದ ಏರ್ ಇಂಡಿಯ ವಿಮಾನ ಕೆಂಜಾರು ಬಳಿ ಶನಿವಾರ ಬೆಳಿಗ್ಗೆ 6.30ರ ಸುಮಾರಿಗೆ ನೆಲಕ್ಕೆ ಅಪ್ಪಳಿಸಿದೆ. ಸುದ್ದಿ ತಿಳಿಯುತ್ತಿದ್ದಂತೆ 25 ಅಂಬುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದವು.
ವಿಮಾನ ದುರಂತ ಸ್ಥಳ ಬಹಳ ಇಳಿಜಾರಿನ ಪ್ರದೇಶವಾಗಿದ್ದರಿಂದ ಸ್ಥಳಕ್ಕೆ ತೆರಳುವುದು ವಾಹನಗಳಿಗೆ ಬಹಳ ಕಷ್ಟವಾಯಿತು. ಗಾಯಾಳುಗಳನ್ನು ಹಾಗೂ ಮೃತದೇಹಗಳನ್ನು ಕಷ್ಟಪಟ್ಟು ಮೇಲಕ್ಕೆ ಹೊತ್ತು ತಂದು ಅಂಬುಲೆನ್ಸ್‌ಗೆ ಸಾಗಿಸಲಾಯಿತು.
ಅದಾಗಲೇ ಹೊತ್ತಿ ಉರಿಯುತ್ತಿದ್ದ ವಿಮಾನದ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಶ್ರಮಿಸಿದರು.ಅಗ್ನಿಶಾಮಕ ವಾಹನಗಳೂ ಎತ್ತರ ಸ್ಥಳದಿಂದಲೇ ವಿಮಾನದ ಮೇಲೆ ನೀರು ಸಿಂಪಡಿಸಿ ಬೆಂಕಿ ನಂದಿಸಿದವು.
ಇದಕ್ಕೂ ಮುನ್ನವೇ ಕೆಲವು ಗಾಯಾಳುಗಳು 500 ಆಳದ ದುರಂತ ಸ್ಥಳದಿಂದ ಕುಂಟುತ್ತಲೇ ನಡೆದು ಗುಡ್ಡ ಹತ್ತಿ ಬಂದಿದ್ದರು. ಗಾಯಾಳುಗಳನ್ನು ಕಂಡ ನಾಗರಿಕರು ತಮ್ಮ ದ್ವಿಚಕ್ರ ವಾಹನದಲ್ಲೇ ಅವರನ್ನು ಮಂಗಳೂರಿನ ಆಸ್ಪತ್ರೆಗಳಿಗೆ ಮುಟ್ಟಿಸಿದರು.
ಪೆರ್ಮುದೆಯ ಒಂದೇ ಕುಟುಂಬದ 18 ಮಂದಿ ಸಾವು
ಬಜಪೆ ಸಮೀಪದ ಪೆರ್ಮುದೆ ಗ್ರಾಮದ ಒಂದೇ ಕುಟುಂಬದ 18 ಮಂದಿ ಹಾಗೂ ಎಡಪದವು ಗ್ರಾಮದ ಒಂದೇ ಕುಟುಂಬದ 6 ಮಂದಿ ವಿಮಾನ ಅವಘಡದಲ್ಲಿ ಅಸುನೀಗಿದ್ದಾರೆ. ಮಂಗಳೂರು ನಗರ ಕೊಟ್ಟಾರ ಕ್ರಾಸ್‌ನ ಪೂಂಜಾ ಟೈಲರ್ಸ್‌ನ ಮೂವರು (ಒಂದೇ ಕುಟುಂಬ) ಮೃತರಾಗಿದ್ದಾರೆ.
ಮಂಗಳೂರು: ಬಜಪೆ ಸಮೀಪದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಿಗ್ಗೆ ಅವಘಡಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮೂರು ಕುಟುಂಬಗಳ ಒಟ್ಟು 27 ಮಂದಿ ಒಟ್ಟಿಗೇ ಬಲಿಯಾಗಿದ್ದಾರೆ.
ಬಜಪೆ ಸಮೀಪದ ಪೆರ್ಮುದೆ ಗ್ರಾಮದ ಒಂದೇ ಕುಟುಂಬದ 18 ಮಂದಿ ಹಾಗೂ ಎಡಪದವು ಗ್ರಾಮದ ಒಂದೇ ಕುಟುಂಬದ 6 ಮಂದಿ ವಿಮಾನ ಅವಘಡದಲ್ಲಿ ಅಸುನೀಗಿದ್ದಾರೆ. ಮಂಗಳೂರು ನಗರ ಕೊಟ್ಟಾರ ಕ್ರಾಸ್‌ನ ಪೂಂಜಾ ಟೈಲರ್ಸ್‌ನ ಮೂವರು (ಒಂದೇ ಕುಟುಂಬ) ಮೃತರಾಗಿದ್ದಾರೆ.
ಶಿವಮೊಗ್ಗದಿಂದ ಮಂಗಳೂರಿಗೆ ವಲಸೆ ಬಂದು ಅತ್ತಾವರ ಬಳಿ ನೆಲೆಸಿರುವ ಡಾ.ವಾಸುದೇವ ನಾರಾಯಣ ರಾವ್, ಪತ್ನಿ ವಾಣಿ ನಾರಾಯಣ ರಾವ್ ಸಹ ವಿಮಾನ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಬದುಕುಳಿದವರು ಬಿಚ್ಚಿಟ್ಟ ದುರಂತ ಕಥೆ
ಮಂಗಳೂರು: ‘ವಿಮಾನ ನೆಲಕ್ಕೆ ಅಪ್ಪಳಿಸುವುದಕ್ಕೆ ಕೆಲವೇ ಕ್ಷಣ ಮುನ್ನ, 8-10 ಅಡಿಗಳ ಎತ್ತರದಲ್ಲಿದ್ದಾಗಲೇ ಜಿಗಿದು ಪಾರಾದೆ. ಅಷ್ಟರಲ್ಲಾಗಲೇ ಕಾಲಿನ ಬಳಿ ಬಳಿ ಬೆಂಕಿ ಕಾಣಿಸಿಕೊಂಡಿತ್ತು’ ಎಂದು ಬಜ್ಪೆ ಸಮೀಪದ ಮರವೂರಿನ ಅಬ್ದುಲ್ ಸತ್ತಾರ್ ಅವಘಡದಲ್ಲಿ ಬದುಕುಳಿದ ಕ್ಷಣದ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ವಿಮಾನ ದುರಂತಕ್ಕೀಡಾಗುವ ಮುನ್ನವೇ ಜಿಗಿದ ಅವರು ಸಣ್ಣ ಗಾಯಗಳೊಂದಿಗೆ ಪಾರಾಗಿದ್ದಾರೆ.
ಬಜ್ಪೆ ಸಮೀಪದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಿಗ್ಗೆ ಅವಘಡಕ್ಕೀಡಾದ ಏರ್ ಇಂಡಿಯಾ ವಿಮಾನದ 169 ಪ್ರಯಾಣಿಕರಲ್ಲಿ ಏಳು ಮಂದಿ ಬದುಕುಳಿದಿದ್ದಾರೆ. ಗಾಯಾಳು ಜೋಯಲ್, ಡಾ.ಸಬ್ರೀನಾ, ಉಮರ್ ಫಾರೂಕ್ ಮಹಮದ್, ಷರೀಫ್, ಮಂಗಳೂರಿನ ಕೃಷ್ಣನ್ ಹಾಗೂ ಕೇರಳದ ಮಾಯನ್ ಕುಟ್ಟಿ ಮಂಗಳೂರಿನ ವೆನ್ಲಾಕ್, ಎಜೆ ಆಸ್ಪತ್ರೆ, ಎಸ್‌ಸಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ವಿಮಾನದಿಂದ ಕೆಳಕ್ಕೆ ಜಿಗಿದ ಡಾ. ಸಬ್ರೀನಾ ಅವರ ಕಾಲಿನ ಮೂಳೆ ಮುರಿದಿದೆ. ಉಮರ ಫಾರೂಕ್ ಮಹಮದ್ ಅವರ ಎರಡೂ ಕೈಗಳಿಗೆ, ಬೆನ್ನಿಗೆ ಹಾಗೂ ಮುಖಕ್ಕೆ ಸುಟ್ಟ ಗಾಯಗಳಾಗಿವೆ. ಇವರಿಬ್ಬರೂ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಸ್‌ಸಿಎಸ್ ಆಸ್ಪತ್ರೆಗೆ ದಾಖಲಾಗಿರುವ ಕೇರಳದ ಮಾಯನ್ ಕುಟ್ಟಿ ಅವರಿಗೆ ಸಣ್ಣ ಗಾಯಗಳಾಗಿವೆ.
ಬೈಂದೂರು ನಾವುಂದ ಇಡೀ ಕುಟುಂಬ ಬಲಿ
ಬೈಂದೂರು: ಉಡುಪಿ ಜಿಲ್ಲೆ ಕುಂದಾಪುರ ಸಮೀಪದ ಬೈಂದೂರು ನಾವುಂದದ ಒಂದು ಕುಟುಂಬದ ಆರು ಮಂದಿ ಶನಿವಾರದ ಏರ್ ಇಂಡಿಯ ವಿಮಾನ ದುರಂತದಲ್ಲಿ ಬಲಿಯಾಗಿದ್ದಾರೆ.
ಇದೇ ವೇಳೆ ಕುಂದಾಪುರ ಸಮೀಪ ಗ್ರಾಮದ ಯುವಕನೊಬ್ಬ ಅವಘಡದಲ್ಲಿ ಅಸುನೀಗಿದ್ದು, ಆತನ ವಿವಾಹ ಮುಂಬರುವ ಜೂನ್ 2ಕ್ಕೆ ನಿಗದಿಯಾಗಿತ್ತು ಎಂದು ತಿಳಿದುಬಂದಿದೆ.
ಘಟನೆ ಸ್ಥಳಕ್ಕೆ ನಾಯಕರ ದಂಡು
ಈ ಮಧ್ಯೆ, ನಾಗರಿಕ ವಿಮಾನ ಯಾನ ಸಚಿವ ಪ್ರಫುಲ್ ಪಟೇಲ್ ಮಂಗಳೂರಿಗೆ ಆಗಮಿಸಿದ್ದು, ಬಜ್ಪೆ ಸಮೀಪದ ಮಂಗಳೂರು ವಿಮಾನ ನಿಲ್ದಾಣ, ಅವಘಡದ ಸ್ಥಳಕ್ಕೆ ಭೇಟಿ ನೀಡಿದರು. ನಂತರ ಅವರು ಮಂಗಳೂರಿನ ಆಸ್ಪತ್ರೆಗಳಿಗೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವಾನ ಹೇಳಿದರು.
ಮಂಗಳೂರು: ಇದೇ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೂ ಮಂಗಳೂರಿಗೆ ಧಾವಿಸಿದ್ದು, ಅವಘಡದ ಸ್ಥಳ ವೀಕ್ಷಿಸಿದ್ದಾರೆ.
ಇನ್ನೊಂದೆಡೆ, ಅವಘಡದಲ್ಲಿ ಮೃತರಾದವರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಸದ್ಯ ಮಂಗಳೂರು ವಿಮಾನ ನಿಲ್ದಾಣದ ಎಲ್ಲ ಸಂಚಾರ ಚಟುವಟಿಕೆಗಳನ್ನೂ ತಕ್ಷಣವೇ ಸ್ಥಗಿತಗೊಳಿಸಲಾಗಿದೆ. ಮಂಗಳೂರಿನಿಂದ ಹೊರಡುವ, ಆಗಮಿಸುವ ವಿಮಾನಗಳ ಸಂಚಾರ ರದ್ದು ಮಾಡಲಾಗಿದೆ.
ಟಿಕೆಟ್ ತಪ್ಪಿದ್ದೇ ‘ಅದೃಷ್ಟ’
ಮಂಗಳೂರು ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಿಗ್ಗೆ ಅವಘಡಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಕಿದ್ದು, ಅದೃಷ್ಟವಶಾತ್ ಕೊನೆ ಗಳಿಗೆಯಲ್ಲಿ ವಿಮಾನ ಏರಲಾರದವರು ಇದೀಗ ನಿಟ್ಟುಸಿರುಬಿಡುತ್ತಿದ್ದಾರೆ.
ಮಂಗಳೂರು: ದುಬೈನಿಂದ ಮಂಗಳೂರಿಗೆ ಬರಬೇಕಿದ್ದ ಷಾಹಿ ಇಮ್ರಾನ್ ಶುಕ್ರವಾರ ತಡರಾತ್ರಿ ಹೊರಟ ಏರ್ ಇಂಡಿಯ ವಿಮಾನದ ಟಿಕೆಟ್ ಕೈತಪ್ಪಿದ್ದೇ ‘ಅದೃಷ್ಟ’ ಎಂದುಕೊಂಡು ನಿಟ್ಟುಸಿರುಬಿಟ್ಟಿದ್ದಾರೆ.
ಪ್ರಜಾವಾಣಿ ಪತ್ರಿಕೆ ಮಂಗಳೂರು ಜಾಹೀರಾತು ವಿಭಾಗದ ಮ್ಯಾನೇಜರ್ ಜೈಪ್ರಕಾಶ್ ಅವರ ಬಾವಮೈದುನ ಸುನೀಲ್ ಜಗನ್ನಾಥ್ ಸಹ ಕಡೆ ಗಳಿಗೆವರೆಗೂ ವಿಮಾನ ಪ್ರಯಾಣದ ಟಿಕೆಟ್‌ಗಾಗಿ ಯತ್ನಿಸಿ ವಿಫಲರಾದವರು. ಈಗ ಅವರೂ ‘ಕಾಣದ ದೇವರೇ ಟಿಕೆಟ್ ತಪ್ಪಿಸಿದ’ ಎಂದು ಪ್ರತಿಕ್ರಿಯಿಸಿ ಬದುಕುಳಿದಿರುವುದಕ್ಕೆ ಬಂಧುಗಳ ಜತೆ ಸಂತಸ ಹಂಚಿಕೊಂಡಿದ್ದಾರೆ.
ಶನಿವಾರ ಬೆಳಿಗ್ಗೆ ಮಂಗಳೂರು ಕೆಂಜಾರು ಬಳಿ ಪ್ರಪಾತಕ್ಕೆ ಬಿದ್ದು ಭಸ್ಮವಾದ ಏರ್ ಇಂಡಿಯ ವಿಮಾನದ ಪ್ರಯಾಣವನ್ನು ವಿವಿಧ ಕಾರಣಗಳಿಂದಾಗಿ ತಪ್ಪಿಸಿಕೊಂಡವರು ಒಟ್ಟು 9 ಮಂದಿ ಎಂದು ವಿಮಾನ ನಿಲ್ದಾಣದ ಮೂಲಗಳಿಂದ ತಿಳಿದು ಬಂದಿದೆ.
160 ಮಂದಿ ಸಾವು; 8 ಮಂದಿ ಜೀವ ರಕ್ಷಣೆ
ಶನಿವಾರ ಬೆಳಿಗ್ಗೆ 6.30ರ ವೇಳೆಗೆ ಸುಮಾರಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿತು. ರನ್ ವೇನಿಂದ ಸ್ವಲ್ಪ ದೂರದಲ್ಲಿದ್ದಾಗಲೇ ನಿಯಂತ್ರಣ ಕಳೆದುಕೊಂಡ ವಿಮಾನ 500 ಅಡಿಗೂ ಹೆಚ್ಚು ಆಳದ ಪ್ರಪಾತಕ್ಕೆ ಉರುಳಿದೆ.
ಮುಖ್ಯಾಂಶ
- ಏರ್ ಇಂಡಿಯ ವಿಮಾನ ಬೋಯಿಂಗ್ 737
- ದುಬೈನಿಂದ ಮಂಗಳೂರಿಗೆ ಬರುತ್ತಿತ್ತು
- ಶನಿವಾರ ಬೆಳಿಗ್ಗೆ 6.30ರ ವೇಳೆ ಅವಘಡ
ಮಂಗಳೂರು: ಏರ್ ಇಂಡಿಯಾ ಬೋಯಿಂಗ್ 737 ವಿಮಾನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಿಗ್ಗೆ ಅವಘಡಕ್ಕೀಡಾಗಿದ್ದು, 160ಕ್ಕೂ ಅಧಿಕ ಮಂದಿ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ. ಭಾರಿ ವಿಮಾನ ದುರಂತಕ್ಕೆ ಇಡೀ ದೇಶವೇ ಬೆಚ್ಚಿಬಿದ್ದಿದೆ.
ದುಬೈನಿಂದ 169 ಪ್ರಯಾಣಿಕರು ಮತ್ತು 7 ಸ್ಗ್ಬಿಂದಿಗಳನ್ನು ಹೊತ್ತು ಶನಿವಾರ ಬೆಳಿಗ್ಗೆ ಆಗಮಿಸಿದ ಇಂಡಿಯನ್ ಏರ್‌ಲೈನ್ಸ್ 737 ಬೋಯಿಂಗ್ ವಿಮಾನ ಬಜ್ಪೆ ಸಮೀಪದ ಮಂಗಳೂರು ವಿಮಾನ ನಿಲ್ದಾಣದ ಪಕ್ಕದ ಪ್ರಪಾತಕ್ಕೆ ಉರುಳಿದ್ದು 160ಕ್ಕೂ ಅಧಿಕ ಮಂದಿ ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ 20 ಮೃತದೇಹಗಳನ್ನು ಸ್ಥಳದಿಂದ ಹೊರತೆಗೆಯಲಾಗಿದೆ. 6 ಮಂದಿ ಪ್ರಯಾಣಿಕರು ಬದುಕುಳಿದಿದ್ದು, ಗಂಭೀರವಾಗಿ ಗಾಯಗೊಂಡಿರುವ ನಾಲ್ವರನ್ನು ಮಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಪ್ರಯಾಣಿಕರಲ್ಲಿ 8 ಮಕ್ಕಳೂ ಇದ್ದರು.
ದುಬೈನಿಂದ ಶುಕ್ರವಾರ ತಡರಾತ್ರಿ ಹೊರಟ ಏರ್ ಇಂಡಿಯ ಬೋಯಿಂಗ್ 737 ವಿಮಾನ ಶನಿವಾರ ಬೆಳಿಗ್ಗೆ 6.30ರ ವೇಳೆಗೆ ಸುಮಾರಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿತು. ರನ್ ವೇನಿಂದ ಸ್ವಲ್ಪ ದೂರದಲ್ಲಿದ್ದಾಗಲೇ ನಿಯಂತ್ರಣ ಕಳೆದುಕೊಂಡ ವಿಮಾನ 500 ಅಡಿಗೂ ಹೆಚ್ಚು ಆಳದ ಪ್ರಪಾತಕ್ಕೆ ಉರುಳಿದೆ. ತಕ್ಷಣ ಬೆಂಕಿಗೆ ತುತ್ತಾದ ವಿಮಾನ ನೋಡನೋಡುತ್ತಿದ್ದಂತೆಯೇ ಸುಟ್ಟು ಬೂದಿಯಾಗಿದೆ. ದುಬೈನಿಂದ ಬರುತ್ತಿದ್ದ ಬಧುಗಳನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಧಾವಿಸಿದ್ದ ಪ್ರಯಾಣಿಕರ ಮನೆಯವರು ಅವಘಡ ಕಂಡು ಸ್ತಂಬೀಭೂತರಾಗಿದ್ದಾರೆ.
ರಕ್ಷಣಾ ಕಾರ್ಯ: 25ಕ್ಕೂ ಅಧಿಕ ಆಂಬ್ಗ್ಯುಲೆನ್ಸ್‌ಗಳು, 10ಕ್ಕೂ ಆಧಿಕ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ. ಪಶ್ಚಿಮ ವಲಯ ಐಜಿಪಿ ಗೋಪಾಲ್ ಬಿ.ಹೊಸೂರ್, ಕಮಿಷನರ್ ಸೀಮಂತ್ ಕುಮಾರ್ ನೇತೃತ್ವದಲ್ಲಿ ದಕ್ಷಿಣ ಕನ್ನಡ ಪೊಲೀಸರು ರಕ್ಷಣಾ ಕಾರ್ಯಕ್ಕೆ ನೆರವಾಗುತ್ತಿದ್ದಾರೆ. ಬಜ್ಪೆ ಸುತ್ತಲ ನಾಗರೀಕರೂ ರಕ್ಷಣಾ ಕಾರ್ಯಕ್ಕೆ ಕೈಜೋಡಿಸಿದ್ದಾರೆ.
ವಿಮಾನ ಅವಘಡದ ಸುದ್ದಿ ತಿಳಿಯುತ್ತಿದ್ದಂತೆ ಘಟನೆ ಸ್ಥಳಕ್ಕೆ ಧಾವಿಸಿದ ಸ್ಥಳೀಯರು, ಪ್ರಪಾತಕ್ಕೆ ಇಳಿದು ಬದುಕುಳಿದವರನ್ನು ಮೇಲಕ್ಕೆ ಹೊತ್ತುತಂದು ಆಸ್ಪತ್ರೆಗೆ ಕರೆದೊಯ್ಯಲು ನೆರವಾದರು.
ಅವಘಡ ಸುದ್ದಿ ತಿಳಿಯುತ್ತಿದ್ದಂತೆ ನಾಗರಿಕ ವಿಮಾನ ಯಾನ ಸಚಿವ ಪ್ರಫುಲ್ ಪಟೇಲ್ ಮುಂಬೈನಿಂದ ಬೆಂಗಳೂರು ಮಾರ್ಗವಾಗಿ ಮಂಗಳೂರಿಗೆ ಧಾವಿಸುತ್ತಿದ್ದಾರೆ. ಈ ವಿಮಾನದ ಮುಖ್ಯ ಪೈಲಟ್ ರಷ್ಯಾ ದೇಶದವರು ಎಂದು ತಿಳಿಬಂದಿದೆ. ಇದೇ ವೇಳೆ ಮಂಗಳೂರಿಗೆ ಬರಬೇಕಿದ್ದ ಹಾಗೂ ಇಲ್ಲಿಂದ ತೆರಳಬೇಕಿದ್ದ ವಿಮಾನಗಳ ಸಂಚಾರ ರದ್ದುಗೊಳಿಸಲಾಗಿದೆ.
May 22, 2010
Subscribe to:
Post Comments (Atom)
No comments:
Post a Comment