VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 29, 2010

ಏಕದಿನ ರ್ಯಾಂಕಿಂಗ್: ಧೋನಿ ಸ್ಥಾನ ಕುಸಿತ ಸಂಭವ

ದುಬೈ, ಮೇ 28: ಜಿಂಬಾಬ್ವೆಯಲ್ಲಿ ಆರಂಭಗೊಂಡಿರುವ ತ್ರಿಕೋನ ಸರಣಿ ಮುಕ್ತಾಯದ ಹೊತ್ತಿಗೆ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಐಸಿಸಿ ರ್ಯಾಂಕಿಂಗ್‌ನಲ್ಲಿ ಕೆಳಗಿಳಿಯಲಿದ್ದಾರೆ.ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿರುವ ಧೋನಿಗೆ ಭಾರತಕ್ಕೆ ಅಷ್ಟೇನು ಪ್ರಾಮುಖ್ಯವಲ್ಲದ ಜಿಂಬಾಬ್ವೆ ಸರಣಿಗೆ ವಿಶ್ರಾಂತಿ ನೀಡಲಾಗಿದೆ. ಇದು ಧೋನಿಗೆ ಮಾರಕವಾಗಿ ಪರಿಣಮಿಸಿದೆ.

ಏಕದಿನ ಸರಣಿಯಲ್ಲಿ ಆಡದಿದ್ದರೆ ಪ್ರತಿಯೊಬ್ಬ ಆಟಗಾರನು ತಾನು ಹೊಂದಿರುವ ರ್ಯಾಂಕಿಂಗ್‌ನಲ್ಲಿ. ಶೇಕಡವಾರು ಅರ್ಧದಷ್ಟನ್ನು ಕಳೆದುಕೊಳ್ಳುತ್ತಾನೆ. ಇದೀಗ ಧೋನಿ ಮೈಕಲ್ ಹಸ್ಸಿಗಿಂತ ಕೇವಲ 8 ಪಾಯಿಂಟ್‌ನಷ್ಟು ಮುಂದೆ ಇದ್ದಾರೆ. ಧೋನಿ ಕಳೆದ ಫೆಬ್ರವರಿಯಲ್ಲಿ ಹಸ್ಸಿಯಿಂದ ಈ ಸ್ಥಾನವನ್ನು ಕಿತ್ತುಕೊಂಡಿದ್ದರು. ನ್ಯೂಝಿಲೆಂಡ್ ವಿರುದ್ಧ 23 ರನ್ ಮಾಡಿದ್ದ ಹಸ್ಸಿ ಕೊನೆಯ ಏಕದಿನ ಪಂದ್ಯವನ್ನು ಆಡಿರಲಿಲ್ಲ.

ಪ್ರಸ್ತುತ ರ್ಯಾಂಕಿಂಗ್‌ನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ (ನಾಲ್ಕನೆ ಸ್ಥಾನ), ಕುಮಾರ ಸಂಗಕ್ಕರ (10), ವೀರೇಂದ್ರ ಸೆಹವಾಗ್ (11),ಯುವರಾಜ್ ಸಿಂಗ್ (14), ಗೌತಮ್ ಗಂಭೀರ್ (23), ಮಹೇಲ ಜಯವರ್ಧನೆ (29) ಇವರೆಲ್ಲರ ರ್ಯಾಂಕಿಂಗ್ ಇಳಿಯಲಿದೆ.

ಜಿಂಬಾಬ್ವೆ ತ್ರಿಕೋನ ಸರಣಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿರುವ ಸುರೇಶ ರೈನಾ (16) ಮತ್ತು ಉಪನಾಯಕ ವಿರಾಟ್ ಕೊಹ್ಲಿ (21), ಶ್ರೀಲಂಕ ನಾಯಕ ತಿಲಕರತ್ನೆ ದಿಲ್ಶನ್ (13)ಇವರಿಗೆ ರ್ಯಾಂಕಿಂಗ್‌ನಲ್ಲಿ ಮೇಲೆರಲು ಈ ಸರಣಿ ಅನುಕೂಲವಾಗಲಿದೆ.

ಕೆಲವು ಸರಣಿಗಳಲ್ಲಿ ಭಾಗವಹಿಸಿದ ಕಾರಣ ಅಗ್ರ 20 ಆಟಗಾರರ ಪಟ್ಟಿಯಲ್ಲಿ ಸ್ಥಾನ ಕಾಯ್ದುಕೊಂಡಿದ್ದ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್‌ರವರ ರ್ಯಾಂಕಿಂಗ್ ಕುಸಿದಿದೆ. ದಕ್ಷಿಣ ಆಫ್ರಿಕದ ಬ್ಯಾಟ್ಸ್‌ಮನ್ ಹಾಶಿಮ್ ಅಮ್ಲ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 102, ದ್ವಿತೀಯ ಏಕದಿನ ಪಂದ್ಯದಲ್ಲಿ 92 ರನ್ ಬಾರಿಸಿ 13 ಸ್ಥಾನಗಳಷ್ಟು ಜಿಗಿದಿದ್ದಾರೆ.

ದಕ್ಷಿಣ ಆಫ್ರಿಕ ಆಟಗಾರರ ಪೈಕಿ ಗರಿಷ್ಟ ಅಂದರೆ ರ್ಯಾಂಕಿಂಗ್‌ನಲ್ಲಿ 4ನೆ ಸ್ಥಾನ ಹೊಂದಿರುವ ಆಟಗಾರರೆಂದರೆ ಅಮ್ಲ,ಅಬ್ರಹಾಮ್ ಡಿ ವಿಲಿಯರ್ಸ್‌ (3), ಜಾಕಸ್ ಕಾಲಿಸ್ (7), ಮತ್ತು ಗ್ರೇಮ್ ಸ್ಮಿತ್ (8).
ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ಡೇಲ್ ಸ್ಟೇಯ್ನಾ 2 ಸ್ಥಾನಗಳನ್ನು ಕಳೆದುಕೊಂಡಿದ್ದಾರೆ. ಬ್ರಾವ್ ಮತ್ತು ಮೋರ್ಕಲ್ ರ್ಯಾಂಕಿಂಗ್‌ನಲ್ಲಿ ಭಡ್ತಿ ಪಡೆದಿದ್ದಾರೆ.ಏಕದಿನ ಚಾಂಪಿಯನ್‌ಷಿಪ್‌ನಲ್ಲಿ ಭಾರತ 122 ಪಾಯಿಂಟ್‌ನೊಂದಿಗೆ ದ್ವಿತೀಯ ಸ್ಥಾನ ಹೊಂದಿದೆ. ಶ್ರೀಲಂಕ 6ನೆ ಸ್ಥಾನದಲ್ಲಿದೆ.

No comments: