ಮಂಗಳೂರು: ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದ ಎಸ್.ಡಿ.ಪಿ.ಐ ಅಭ್ಯರ್ಥಿಯನ್ನು ಯುವಕರಿಬ್ಬರು ಕೊಲೆ ಮಾಡಲು ಯತ್ನಿಸಿದ ಘಟನೆ ನಿನ್ನೆ ಪುತ್ತೂರಿನಲ್ಲಿ ನಡೆದಿದೆ.
ಹಲ್ಲೆಗೊಳಗಾದವರನ್ನು ಸಿರಾಜ್ ಎಂದು ಗರುತಿಸಲಾಗಿದೆ. ಇವರು ನರಿ ಮೊಗರು ಗ್ರಾಮದ ಸಿಬಾರ್ ವಾರ್ಡಿನಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದರು. ಆದರೆ ಇವರ ಸ್ಪರ್ಧೆಯಿಂದಾಗಿ ಈ ಗ್ರಾಮದಲ್ಲಿ ಕಾಂಗ್ರೆಸ್ ಸೋಲನುಭವಿಸಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬರುವಂತಾಗಿತ್ತು.
ನಿನ್ನೆ ಮಧ್ಯಾಹ್ನದ ವೇಳೆ ಸಿರಾಜ್ ಮುಕ್ವೆಯಲ್ಲಿರುವ ತನ್ನ ಬಾಬಾ ಫರ್ನಿಚರ್ ಅಂಗಡಿಯಲ್ಲಿ ಒಬ್ಬಂಟಿಯಾಗಿ ಇದ್ದಾಗ ಅಲ್ಲಿಗೆ ಬೈಕ್‌ನಲ್ಲಿ ಬಂದ ಆರೋಪಿಗಳಾದ ಹರೀಶ್ ಮತ್ತು ಲಕ್ಷ್ಮಣ್ ರಾಡ್ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದರು.
ಈ ಸಂದರ್ಭದಲ್ಲಿ ಅಪಾಯವರಿತ ಸಿರಾಜ್ ಬೊಬ್ಬೆ ಹೊಡೆದಾಗ ಇತರ ಅಂಗಡಿಯವರು ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ಆರೋಪಿಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಿರಾಜ್‌ಗೆ ಹಿಗ್ಗಾಮುಗ್ಗ ಥಳಿಸುತ್ತಿದ್ದುದನ್ನು ಕಂಡು ಸಾರ್ವಜನಿಕರು ಆರೋಪಿ ಹರೀಶ್‌ನನ್ನು ಹಿಡಿದರೆ ಇನ್ನೋರ್ವ ಆರೋಪಿ ಲಕ್ಷ್ಮಣ ಎಂಬಾತ ಪರಾರಿಯಾಗಿದ್ದಾನೆ.
ಆರೋಪಿ ಹರೀಶ್ ಬಂಟ್ವಾಳದವನಾಗಿದ್ದರೆ, ಲಕ್ಷ್ಮಣ ಮಂಗಳೂರಿನವನಾಗಿದ್ದಾನೆ. ಸೋಮವಾರದಂದು ಸಿರಾಜ್‌ನ ಅಂಗಡಿಗೆ ಬಂದು ಫರ್ನಿಚರ್‌ಗಳ ಬೆಲೆಯನ್ನು ಕೇಳಿ ಹೋಗಿದ್ದರೆನ್ನಲಾಗಿದೆ. ಕೊಲೆ ಯತ್ನ ಕೃತ್ಯ ಪೂರ್ವಭಾವಿಯಾಗಿತ್ತೆಂದು ಹೇಳಲಾಗುತ್ತಿದೆ. ಸಿರಾಜ್ ಸ್ಪರ್ಧೆಯಿಂದಾಗಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲನುಭವಿಸಿದ್ದು ಬಿಜೆಪಿ ಅಧಿಕಾರಕ್ಕೇರುವಂತಾಗಿತ್ತು. ಇದೇ ದ್ವೇಷದಿಂದ ಸಿರಾಜ್‌ನ ಕೊಲೆಯತ್ನ ನಡೆದಿದೆ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಎಸ್.ಡಿ.ಪಿ.ಐ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಆರೋಪಿ ಮೇಲೆ ಮುಗಿಬಿದ್ದಿದ್ದರು. ವಿಷಯ ಅರಿತ ಪುತ್ತೂರು ಠಾಣಾಧಿಕಾರಿ ಶ್ರೀಕಾಂತ್ ಸ್ಥಳಕ್ಕೆ ಆಗಮಿಸಿ ಎಸ್.ಡಿ.ಪಿ.ಐ ಕಾರ್ಯಕರ್ತರಿಂದ ಆರೋಪಿಯನ್ನು ಪಾರುಗೊಳಿಸಿದ್ದಾರೆ.

No comments:
Post a Comment