
ಮಂಗಳೂರು, ಮೇ ೨೭: ಬಜ್ಪೆ ವಿಮಾನ ದುರಂತದಲ್ಲಿ ಮೃತಪಟ್ಟವರು ಪಾರತ್ರಿಕ ಹುತಾತ್ಮರು. ಅವರು ಅಲ್ಲಾಹನ ಬಳಿ ವಿಶೇಷ ಸ್ಥಾನ ಪಡೆದವರು ಎಂದು ಉಡುಪಿ ಖಾಝಿ ಬೇಕಲ ಇಬ್ರಾಹೀಂ ಮುಸ್ಲಿಯಾರ್ ನುಡಿದರು.
ನಗರದ ಮಸ್ಜಿದುತ್ತಖ್‌ವಾದಲ್ಲಿ ವಿವಿಧ ಸುನ್ನೀ ಸಂಘಟನೆಗಳ ಆಶ್ರಯ ದಲ್ಲಿ ಇಂದು ನಡೆದ ತಹ್‌ಲೀಲ್ ಸಮರ್ಪಣೆಯ ನೇತೃತ್ವ ವಹಿಸಿ ಅವರು ಮಾತನಾಡುತ್ತಿದ್ದರು.
ಉಜಿರೆ ಸಯ್ಯಿದ್ ಇಸ್ಮಾಯೀಲ್ ತಂಙಳ್, ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್ ದುಆ ಮಾಡಿದರು. ಈ ಸಂದರ್ಭ ಹುಸೈನ್ ಸಅದಿ ಕೆ.ಸಿ. ರೋಡ್, ಇಸ್ಮಾಯೀಲ್ ಮುಸ್ಲಿಯಾರ್ ಕಂಕನಾಡಿ, ಎಚ್.ಐ. ಅಬೂಸುಫಿಯಾನ್, ಆತೂರು ಸಅದ್ ಮುಸ್ಲಿಯಾರ್, ನೆಕ್ಕಿಲಾಡಿ ಇಸ್ಮಾಯೀಲ್ ಮುಸ್ಲಿಯಾರ್, ಕೆ.ಎಚ್. ಇಸ್ಮಾಯೀಲ್ ಸಅದಿ, ಮಲ್ಲೂರು ಅಶ್ರಫ್ ಸಅದಿ, ಜಿ.ಎಂ. ಕಾಮಿಲ್ ಸಖಾಫಿ, ಇಮಾಮ್ ಹಾಫಿಝ್ ಅಬ್ದುರ್ರಹ್ಮಾನ್ ಸಖಾಫಿ, ಇಸ್ಹಾಕ್ ಝುಹ್ರಿ, ಎಸ್‌ಎಂ ರಶೀದ್ ಹಾಜಿ, ಮಂಗಳೂರು ಇಬ್ರಾಹೀಂ ಬಾವಾ ಹಾಜಿ ಮತ್ತು ಮೃತರ ಸಹೋದರರಾದ ಕಕ್ಕಿಂಜೆ ಕೆ.ಎಚ್. ಅಹ್ಮದ್ ಫೈಝಿ, ಕಣ್ಣೂರು ಮುಸ್ತಫಾ, ಮಂಜನಾಡಿ ಪ್ಲಾಝಾ ಅಬ್ದುಲ್ಲ ಹಾಗೂ ಸುನ್ನೀ ಜಂ ಇಯ್ಯತುಲ್ ಉಲಮಾ, ಸುನ್ನಿ ಯುವ ಜನ ಸಂಘ, ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್, ಸುನ್ನೀ ಜಂಇಯತುಲ್ ಮುಅಲ್ಲಿಮೀನ್ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.
No comments:
Post a Comment