VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 25, 2010

‘ಆ ಶವ ನಮ್ಮ ಭಾವನದ್ದೇ, ಅದನ್ನು ನಮಗೆ ಕೊಡಿಸಿ’

ಮಂಗಳೂರು, ಮೇ 24: ‘‘ಆ ಶವ ನಮ್ಮ ಭಾವ ಇಗ್ನೇಶಿಯಸ್ನದ್ದು. ಅದನ್ನು ನಾವು ಸರಿಯಾಗಿ ಗುರುತಿಸಿದ್ದೇವೆ. ದಯಮಾಡಿ ಅದನ್ನು ನಮಗೆ ಕೊಡಿಸಿ’’ ಹೀಗೆಂದು ವೆನ್ಲಾಕ್ ಶವಾಗಾರ ದೆದುರು ಇಂದು ಮಹಿಳೆಯೊಬ್ಬರು ಪೊಲೀಸ್ ಅಧಿಕಾರಿಯೊಬ್ಬರ ಜೊತೆ ಗೋಗರೆಯುತ್ತಿದ್ದ ದೃಶ್ಯ ಕಂಡು ಬಂತು.

ಅಂತ್ಯ ಸಂಸ್ಕಾರದ ಸಿದ್ಧತೆ ನಡೆದಿತ್ತು!
ಪತ್ತೆಯಾಗಿರುವ ಮೃತದೇಹ ಇಗ್ನೇಶಿಯಸ್ ಡಿಸೋಜಾ ಅವರದ್ದೇ ಎಂದು ಭಾವಿಸಿ ಸೋಮವಾರ ಸಂಜೆ ನಾಲ್ಕು ಗಂಟೆಗೆ ಚರ್ಚ್ನಲ್ಲಿ ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗಿತ್ತು. ಅಷ್ಟರಲ್ಲಿ ಸಂಜೆ ಮತ್ತೊಂದು ಕುಟುಂಬ ಅದು ತಮ್ಮ ಸಂಬಂಧಿಯ ಶವ ಎಂದು ಹೇಳುವ ಮೂಲಕ ಇಗ್ನೇಶಿಯಸ್ ಅವರ ಕುಟುಂಬವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿತ್ತು. ಇಂದು ಬೆಳಗ್ಗೆ ಮೂರನೆಯ ಕುಟುಂಬ ಒಂದು ಅದೇ ಶವದ ಹಕ್ಕಿಗಾಗಿ ಮುಂದೆ ಬಂದ ಕಾರಣ ಇಗ್ನೇಶಿಯಸ್ ಕುಟುಂಬ ತೀರಾ ಗೊಂದಲಕ್ಕೆ ಸಿಲುಕಿತ್ತು. ಅಷ್ಟು ಹೊತ್ತಿಗಾಗಲೇ ಗುರುತು ಪತ್ತೆಯಾಗದಿದ್ದ ಶವಗಳು ಡಿಎನ್ಎ ಪರೀಕ್ಷೆಗೆ ಒಳಪಟ್ಟಿದ್ದವು.

ಮಾಣಿಬೆಟ್ಟು ನಿವಾಸಿ ಇಗ್ನೇಶಿಯಸ್ ಡಿಸೋಜಾ ಕಳೆದ 25 ವರ್ಷಗಳಿಂದ ದುಬೈಯ ಆಸ್ಪತ್ರೆಯೊಂದರಲ್ಲಿ ಕ್ಯಾಟರಿಂಗ್ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದರು. ರಜೆಯ ಮೇಲೆ ಶಕ್ತಿ ನಗರದ ಮನೆಯಲ್ಲಿರುವ ತಮ್ಮ ಪತ್ನಿ ಹಾಗೂ ಮಕ್ಕಳಾದ ಪ್ರನೀಟಾ ಡಿಸೋಜಾ ಹಾಗೂ ಕ್ರಿಸ್ಗ್ಯಾರಿಯವರನ್ನು ಕಾಣಲೆಂದು ವಿಮಾನವೇರಿದ್ದರು. ಆದರೆ ಕೊನೆಗೂ ಪತ್ನಿ ಮತ್ತು ಮಕ್ಕಳನ್ನು ಕಾಣಲಾಗಲೇ ಇಲ್ಲ. ಶನಿವಾರ ಬೆಳಗ್ಗೆ ವಿಮಾನ ದುರಂತದ ಸುದ್ದಿ ತಿಳಿಯುತ್ತಲೇ ಇಗ್ನೇಶಿಯಸ್ ಕುಟುಂಬ ಹತಾಶವಾಗಿತ್ತು.

ಪತ್ನಿ ಮಾತ ನಾಡುವ ಸ್ಥಿತಿಯಲ್ಲೇ ಇರಲಿಲ್ಲ. ಕೊನೆಗೆ ಸಂಬಂಧಿಕರು ಇಗ್ನೇಷಿಯಸ್ರ ಮಕ್ಕಳ ಸಹಾಯದಿಂದ ಶನಿವಾರ ಮಧ್ಯಾಹ್ನದ ವೇಳೆಗೆ ಎಸ್ಇಎಸ್ ಆಸ್ಪತ್ರೆಯಲ್ಲಿದ್ದ ಇಗ್ನೇಶಿಯಸ್ರ ಮೃತದೇಹವನ್ನು ಪತ್ತೆ ಹಚ್ಚಿದ್ದರು. ರವಿವಾರ ಬೆಳಗ್ಗೆ ಇಗ್ನೇಶಿಯಸ್ರ ಪತ್ನಿಯೇ ಮೃತದೇಹ ವನ್ನು ದೃಢೀಕರಿಸಿ ದ್ದರು. ಅಷ್ಟು ಹೊತ್ತಿಗಾಗಲೇ ಕೇರಳದ ಕುಟುಂಬವೊಂದು ಅದು ತಮ್ಮ ಸಂಬಂಧಿಯ ಮೃತದೇಹವೆಂದು ಹಕ್ಕು ಸಾಧಿಸ ಹೊರಟಿತ್ತು.

ಕೊನೆಗೆ ಸಂಜೆಯ ವೇಳೆಗೆ ಆ ಕುಟುಂಬ ಅದು ತಮ್ಮ ಸಂಬಂಧಿಯ ಮೃತದೇಹವಲ್ಲ. ನಮ್ಮ ಮೃತದೇಹ ವೆನ್ಲಾಕ್ ಶವಾಗಾರದಲ್ಲಿ ಪತ್ತೆಯಾಗಿದೆ ಎಂದು ಇಗ್ನೇಶಿಯಸ್ ಕುಟುಂಬಸ್ಥರಿಗೆ ಕ್ಷಮಾಪಣೆ ಪತ್ರ ಬರೆದು ಕೊಟ್ಟಿತ್ತು. ಇಂದು ಬೆಳಗ್ಗೆ ಇಗ್ನೇಶಿಯಸ್ ಡಿಸೋಜಾರ ಪತ್ನಿಯ ಅಕ್ಕ, ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಡಯಾನಾ ಫೆರ್ನಾಂಡಿಸ್ ವೆನ್ಲಾಕ್ ಶವಾಗಾರದ ಬಳಿ ಉಪಸ್ಥಿತರಿದ್ದ ಪೊಲೀಸ್ ಅಧಿಕಾರಿಯನ್ನು ತಮ್ಮ ಭಾವನ ಶವ ನೀಡುವಂತೆ ಒತ್ತಾಯಿಸುತ್ತಿದ್ದಾಗ ಆ ಪೊಲೀಸ್ ಅಧಿಕಾರಿ ಕೂಡಾ ತೀರಾ ಖಿನ್ನರಾಗಿದ್ದರು.

ಅವರು ಡಯಾನಾ ಸೇರಿದಂತೆ ಅವರ ಜೊತೆಗಿದ್ದ ಇತರ ಕುಟುಂಬಸ್ಥರನ್ನು ಸಮಾಧಾನ ಪಡಿಸುತ್ತಾ, ‘‘ಈಗೇನೂ ಮಾಡಲು ಸಾಧ್ಯವಿಲ್ಲ. ಡಿಎನ್ಎ ಫಲಿತಾಂಶ ಬರುವವರೆಗೆ ಕಾಯಬೇಕು’’ ಎಂದು ಉತ್ತರಿಸಿದರು. ಇದರಿಂದ ಸಮಾಧಾನಗೊಳ್ಳದ ಡಯಾನಾ, ‘‘ಅದು ಇಗ್ನೇಷಿಯಸ್ರದ್ದೇ ಮೃತದೇಹ. ಅದೇ ಮುಖ. ಅದೇ ದೇಹ. ನಮಗೆ ದೃಢವಾಗಿದೆ. ಹಾಗಿದ್ದರೂ ನಮ್ಮ ಶವ ನೀಡುತ್ತಿಲ್ಲ’’ ಎಂದು ಡಯಾನಾ ಭಾವುಕರಾಗಿ ನುಡಿಯುತ್ತಿದ್ದರು.

ಡಿಎನ್ಎ ಪರೀಕ್ಷೆಯ ಫಲಿತಾಂಶ ಬರಲು ಇನ್ನೆಷ್ಟು ಸಮಯ ಬೇಕು ಎಂದು ಅಲ್ಲಿದ್ದವರ ಬಳಿ ಕೇಳುತ್ತಿದ್ದ ಡಯಾನಾ, ‘‘ನಾನು ಬೆಂಗಳೂರಿನಿಂದ ಬಂದಿದ್ದೇನೆ. ನನಗೆ ಜನಗಣತಿ ಕಾರ್ಯದ ವರದಿ ಯನ್ನೂ ಸರಕಾರಕ್ಕೆ ಸಲ್ಲಿಸಬೇಕಾಗಿದೆ. ಇಲ್ಲಿ ನಮ್ಮ ಭಾವನ ಶವದ ಗುರುತು ಪತ್ತೆಯಾದರೂ ನಮಗೆ ನೀಡುತ್ತಿಲ್ಲ. ನಾವು ಇನ್ನೆಷ್ಟು ದಿನ ಕಾಯಬೇಕು’’ ಎಂದು ಹತಾಶರಾಗಿ ಪ್ರಶ್ನಿಸುತ್ತಿದ್ದರು.

No comments: