ಹಾಕಿ ಇಂಡಿಯಾ ಹಾಗೂ ರಾಷ್ಟ್ರೀಯ ಹಾಕಿ ತಂಡದ ವೇತನ ಪಾವತಿ ಹಾಗೂ ಪ್ರೋತ್ಸಾಹ ಧನ ಹಿಂಬಾಕಿ ವಿವಾದವನ್ನು ಬಗೆಹರಿಸಲು ತಂಡದ ಪ್ರಾಯೋಜಕ ಸಂಸ್ಥೆಯಾದ ಸಹಾರಾ ಇಂಡಿಯಾ ಮುಂದೆ ಬಂದಿದೆ.
ತಂಡದ ಆಟಗಾರರಿಗೆ ಮಾತ್ರ ಅನ್ವಯವಾಗುವಂತೆ 1 ಕೋಟಿ ರೂಪಾಯಿಗಳನ್ನು ಹೆಚ್ಚುವರಿ ಬೋನಸ್ ನೀಡಲು ಸಿದ್ಧವಾಗಿದ್ದು, ಮುಂದಿನ ತಿಂಗಳು ವಿಶ್ವಕಪ್ ನಡೆಯಲಿರುವ ಹಿನ್ನೆಲೆಯಲ್ಲಿ ಆಟಗಾರರು ಪ್ರತಿಭಟನೆಯನ್ನು ಅಂತ್ಯಗೊಳಿಸಿ ತರಬೇತಿ ಶಿಬಿರಕ್ಕೆ ಹಾಜರಾಗಬೇಕು ಎಂದು ಸಹಾರಾ ಮನವಿ ಮಾಡಿದೆ.
ಕಳೆದ ವರ್ಷ ಪ್ರಾಯೋಜಕತ್ವದ 77ಲಕ್ಷ ರೂಪಾಯಿ ಹಣವನ್ನು ಫೆಡರೇಶನ್‌ಗೆ ಪಾವತಿಸಿದ ನಂತರವೂ ದಿವಾಳಿತನದ ಪರಿಸ್ಥಿತಿ ಎದುರಾಗಲು ಕಾರಣವೇನು ಎನ್ನುವುದನ್ನು ಅರಿಯಲು, ಹಾಕಿ ಇಂಡಿಯಾದ ದಾಖಲೆಗಳನ್ನು ಪರಿಶೀಲಿಸುವುದಾಗಿ ಸಹಾರಾ ಸ್ಪಷ್ಟಪಡಿಸಿದೆ.
ಸಹಾರಾ ಇಂಡಿಯಾ ಕಾರ್ಪೋರೇಟ್ ಕಮ್ಯೂನಿಕೇಶನ್ಸ್ ಮುಖ್ಯಸ್ಥ ಅಭಿಜಿತ್ ಸರ್ಕಾರ್ ಮಾತನಾಡಿ, ಕಂಪೆನಿ 1 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ನೀಡಲು ಸಿದ್ಧವಿದೆ. ಹಣವನ್ನು ಕೇವಲ ಆಟಗಾರರಿಗೆ ಮಾತ್ರ ನೀಡಲಾಗುವುದು. ಆದ್ದರಿಂದ ಆಟಗಾರರು ಪುಣೆಯಲ್ಲಿ ನಡೆಯುತ್ತಿರುವ ತರಬೇತಿ ಶಿಬಿರಕ್ಕೆ ಮರಳಬೇಕು ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಹಾಕಿ ತಂಡದ ಆಟಗಾರರು ವೇತನ ಪಾವತಿ ವಿಳಂಬ ಧೋರಣೆಯನ್ನು ವಿರೋಧಿಸಿ, ಪ್ರತಿಭಟನೆಯಲ್ಲಿ ತೊಡಗಿದ್ದರಿಂದ ಪುಣೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶಿಬಿರವನ್ನು ರದ್ದುಗೊಳಿಸಲಾಗಿದೆ.
webdunia
Subscribe to:
Post Comments (Atom)
No comments:
Post a Comment