VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Jan 6, 2010

ಜ.7: ಸಅದಿಯಾ ವಾರ್ಷಿಕೋತ್ಸವ

ಮಂಗಳೂರು: ಕಾಸರಗೋಡು ಜಿಲ್ಲೆಯ ಸಅದಾಬಾದ್‌ನಲ್ಲಿ ಕಾರ್ಯಾ ಚರಿಸುತ್ತಿರುವ ಜಾಮಿಅ ಸಅದಿಯಾ ಅರಬಿಯಾದ 40ನೇ ವಾರ್ಷಿಕೋ ತ್ಸವ ಹಾಗೂ ಶರೀಅತ್‌ ಹಿಫ್ಜಲ್‌ ಕುರಾನ್‌ ಕಾಲೇಜುಗಳ ಸನದುದಾನ ಸಮ್ಮೇಳನ ಜ.7ರಿಂದ 10ರವರೆಗೆ ಜರಗಲಿದೆ ಎಂದು ಸಯ್ಯದ್‌ ಉಮ ರುಲ್‌ ಫಾರೂಕ್‌ ತಂಙಳ್‌ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಧಾರ್ಮಿಕ ಪಂಡಿತರು, ಸಾದಾತು ಗಳೂ ಸಚಿವರು, ರಾಜ ಕೀಯ ನಾಯಕರು ಭಾಗವಹಿಸಲಿದ್ದು, ವಿಳಂಬದ ರ್ಯಾಲಿ ಉದ್ಘಾಟನಾ ಸಮಾರಂ, ದಿಕ್ರ್‌ಹಲ್ಖ, ವಿದ್ಯಾಭ್ಯಾಸ ಸಮ್ಮೇಳನ, ದೇಶೀಯ ಹಿಂದುಳಿ ಯುವಿಕೆ ಸೆಮಿನಾರ್‌, ಮುಹಲ್ಲಿಂ ಮೆನೇಜ್‌ಮೆಂಟ್‌ ಸನದುದಾನ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ ಎಂದವರು ತಿಳಿಸಿದರು.

ಜ.7ರಂದು ಆರಂಭಗೊಳ್ಳುವ ಈ ಕಾರ್ಯಕ್ರಮಗಳಲ್ಲಿ ಸೈಯ್ಯದ್‌ ಕುಂಞಕೋಯ ತಂಙಳ್‌, ಸೈಯ್ಯದ್‌ ಜಾಫರ್‌ ಸಾದಿಕ್‌ ತಂಙಳ್‌, ಖುಸ್ರೋ ಖುರೇಶಿ, ಆಟಕೋಯ ತಂಙಳ್‌, ಎಂ.ಎ.ಅಬ್ದುಲ್‌ ಖಾದರ್‌ ಮುಸ್ಲಿ ಯಾರ್‌ ಎ.ಪಿ. ಅಬೂಬಕರ್‌ ಮುಸ್ಲಿ ಯಾರ್‌ ಪೇರೋಡ್‌ ಅಬ್ದುಲ್‌ ರಹ್ಮಾನ್‌ ಸಖಾಫಿ ಲತೀಫ್‌ ಸಅದಿ ಪಯಸ್ವಿ, ಫಝಲ್‌ ಕೋಯಮ್ಮ ತಂಙಳ್‌ ಹಾಗೂ ರಾಜಕೀಯ ನಾಯಕರಾದ ಕರುಣಾಕರನ್‌, ಮಹಾರಾಷ್ಟ್ರ ಸಚಿವ ನಿತಿನ್‌ ಕಾಶಿನಾಥ್‌ ಕಾವೂರ್‌, ಕಡನ್ನಪ್ಪಳ್ಳಿ ರಾಮಚಂದ್ರನ್‌, ಮುಲ್ಲಕ್ಕರ ರತ್ನಾ ಕರನ್‌ ಮೊದಲಾ ದವರು ಭಾಗವ ಹಿಸಲಿದ್ದಾರೆ ಎಂದವರು ಹೇಳಿ ದರು. ಸುದ್ದಿಗೋಷ್ಠಿಯಲ್ಲಿ ಸೈಯ್ಯದ್‌ ಉಮರುಲ್‌ ಫಾರೂಕ್‌ ತಂಙಳ್‌ ಸೆಯ್ಯದ್‌ ಜಾಫರ್‌ ಸ್ವಾದಿಕ್‌ ತಂಙಳ್‌, ಅಶ್ರಫ್‌ ಸಅದಿ ಮಲ್ಲೂರು ಉಪಸ್ಥಿತರಿದ್ದರು

source: jayakirana

No comments: