ಸುರತ್ಕಲ್:ಹೆಚ್ಚುವರಿ ವರದಕ್ಷಿಣೆಗಾಗಿ ಪತ್ನಿಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ ಪತಿ, ಪತ್ನಿಯನ್ನು ತವರಗಟ್ಟಿದ ಪ್ರಕರಣ ಒಂದು ವರದಿಯಾಗಿದೆ.
ಸುರತ್ಕಲ್ ಕಾನಕಟ್ಲದ ಜನತಾಕಾಲಯ ನಿವಾಸಿ ಆಸ್ಮಾ ಎಂಬವರು ಪತಿಯ ಹಿಂಸೆಯಿಂದ ಅಸ್ವಸ್ತಗೊಂಡಿದ್ದು ಸುರತ್ಕಲ್ ಪದ್ಮಾವತಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ಮಾರ ವಿವಾಹವು ಆರು ತಿಂಗಳ ಹಿಂದೆಯಷ್ಟೇ ಉಳ್ಳಾಲಬೈಲ್ ನಿವಾಸಿ ಫಾರೂಕ್ ಎಂಬಾತನೊಂದಿಗೆ ನೆರವೇರಿತ್ತು. ಮದುವೆಯ ಸಂದರ್ಭದಲ್ಲಿ ಎರಡು ಲಕ್ಷ ರೂ.ನಗದು ಹಾಗೂ 40 ಪವನ್ ಬಂಗಾರವನ್ನು ವರದಕ್ಷಿಣೆ ರೂಪದಲ್ಲಿ ಪಡೆದಿದ್ದ ಫಾರೂಕ್, ಮದುವೆಯಾದ ಒಂದೇ ತಿಂಗಳಲ್ಲಿ ಬಂಗಾರವನ್ನೆಲ್ಲ ಮಾರಿದ್ದು, ಈಗ ಹೆಚ್ಚುವರದಕ್ಷಿಣೆಗಾಗಿ ಹಿಂಸಿಸುತ್ತಿದ್ದ ಎಂದು ಆಸ್ಮಾ ದೂರಿದ್ದಾರೆ.
ನಿನ್ನೆ ಫಾರೂಕ್ ನಡೆಸಿದ ಹಲ್ಲೆಯಿಂದ ಆಸ್ಮಾ ತೀವೃ ಅಸ್ವಸ್ತರಾಗಿದ್ದು, ಆಕೆಯನ್ನು ಸಂಜೆಯ ವೇಳೆಗೆ ತವರು ಮನೆಯ ಅಂಗಳದಲ್ಲಿ ಬಿಟ್ಟು ಹೋದನೆಂದು ಹೇಳಲಾಗಿದೆ. ಫಾರೂಕ್ ನಡೆಸಿದ ಹಲ್ಲೆಯಿಂದಾಗಿ ಆಸ್ಮಾ ಹೊಟ್ಟೆನೋವಿಂದ ನರಳುತ್ತಿದ್ದು, ಅವರ ಗುಪ್ತಾಂಗದಿಂದ ರಕ್ತ ಬರುತ್ತಿದೆ ಎಂದು ಹೇಳಲಾಗಿದೆ.
ದೊಡ್ಡ ಮನೆ ತೋರಿಸಿ ಹೆಚ್ಚು ವರದಕ್ಷಿಣೆ ಪಡೆದು ಮದುವೆಯಾದ ಫಾರೂಕ್ ಮದುವೆಯಾದ ಒಂದೇ ತಿಂಗಳಲ್ಲಿ ಮನೆಯನ್ನ ಲೀಜ್‌ಗೆ ಕೊಟ್ಟು ಮನೆ ಖಾಲಿ ಮಾಡಿದ್ದು, ಅನಂತರ ತನ್ನ ಪತಿಯೊಂದಿಗೆ ಮಂಜನಾಡಿಯಲ್ಲಿರುವ ಹಿರಿಯ ಸಹೋದರನ ಮನೆಯಲ್ಲಿ ವಾಸಿಸುತ್ತಿದ್ದ . ಫಾರೂಕ್‌ನ ಹಿಂಸಾ ಪ್ರವೃತ್ತಿಯಿಂದ ಅವನ ಸಹೋದರನ ಮನೆಯವರು ಕೂಡ ರೋಸಿ ಹೊಗಿದ್ದರು ಎಂದು ಹೇಳಲಾಗಿದೆ. ಫಾರೂಕ್‌ನ ಮದುವೆಗೆ ಮುತವರ್ಜಿವಹಿಸಿದ ಇನ್ನೋರ್ವ ಸಹೋದರ ಕೂಡಾ ಆಸ್ಮಾರಿಗೆ ಹಿಂಸೆ ನೀಡುತ್ತಿದ್ದ ಎನ್ನಲಾಗಿದ್ದು, ಮದುವೆಯ ಸಂದರ್ಭದಲ್ಲಿ ಫಾರೂಕ್ ಹಾಗೂ ಅವನು ಒಂದೇ ಮನೆಯಲ್ಲಿ ವಾಸವಾಗಿದ್ದರು. ಮದುವೆಯಾಗು ತ್ತಿದ್ದಂತೆಯೇ ಮನೆಯನ್ನು ಲೀಜ್‌ಗೆ ಕೊಟ್ಟು ಈಗ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.
source: jayakirana
Jan 7, 2010
Subscribe to:
Post Comments (Atom)
No comments:
Post a Comment