ಮಂಗಳೂರು: ರಮ್ಯಾ ಶೆಟ್ಟಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ತಲೆದಂಡ ತೆತ್ತಿದ್ದ ಕೊಣಾಜೆ ಠಾಣಾ ಕಾನ್ಸ್‌ಸ್ಟೇಬಲ್ ಭಾಸ್ಕರ್ ಅವರನ್ನು ಮರು ನೇಮಕ ಮಾಡಲಾಗಿದೆ.
ರಮ್ಯಾ ನಾಪತ್ತೆಯಾಗುತ್ತಿದ್ದಂತೆ ಆಕೆಯನ್ನು ಪೊಟ್ಟೊಳಿಕೆಯ ಮೊಹಮ್ಮದ್ ಎಂಬಾತ ಅಪಹರಿಸಿ ಮತಾಂತರ ಯತ್ನ ನಡೆಸುತ್ತಿದ್ದಾನೆ, ಇದೊಂದು ಲವ್ ಜಿಹಾದ್ ಎಂದು ಆರೋಪಿಸಿದ ಹಿಂದೂ ಪರ ಸಂಘಟ ನೆಗಳು ಜೋಡಿಯನ್ನು ಕೂಡಲೇ ಪತ್ತೆಹಚ್ಚಬೇಕೆಂದು ಒತ್ತಾಯಿಸಿ ಠಾಣೆಯೆದುರು ಪ್ರತಿಭಟನೆ ನಡೆಸಿ ದ್ದರು. ಈ ವೇಳೆ ವಿಹಿಂಪ ಮುಖಂಡ ಜಗದೀಶ ಶೇಣವ ಉದ್ರೇಕಕಾರಿ ಯಾಗಿ ಭಾಷಣ ಮಾಡಿ ಒಂದು ಸಮುದಾಯಕ್ಕೆ ಸವಾಲೊಡ್ಡಿದ್ದರು. ಇದು ತೀವ್ರ ಆಕ್ಷೇಪಕ್ಕೆ ಕಾರಣ ವಾಗಿತ್ತು. ಈ ಪ್ರತಿಭಟನೆಯನ್ನು ಕೊಣಾಜೆ ಪೊಲೀಸರು ವಿಡಿಯೋ ದಾಖಲೆ ನಡೆಸಿದ್ದರೂ ಬಳಿಕ ಅದು ದಾಖಲುಗೊಂಡಿಲ್ಲ ಎಂಬ ಮಾತು ಕೇಳಿ ಬಂದ ಕಾರಣ ಇದಕ್ಕೆ ಕೊಣಾಜೆ ಠಾಣೆಯ ಕಾನ್ಸ್ ಸ್ಟೇಬಲ್ ಭಾಸ್ಕರ್ ರನ್ನು ಹೊಣೆಯನ್ನಾಗಿಸಿ ಅಮಾನತು ಗೊಳಿಸಲಾಗಿತ್ತು.
ಸುಳ್ಯ ಬಸ್ ಸ್ಟಾಂಡ್‌ನಲ್ಲಿ ರಮ್ಯಾ ಶೆಟ್ಟಿ ಮತ್ತು ಮೊಹಮ್ಮದ್ ಪತ್ತೆಯಾಗಿ ಇಬ್ಬರು ವಿವಾಹವಾಗಿರುವುದಾಗಿ ತಿಳಿಸಿದರಾದರೂ ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ಇದೀಗ ಜೋಡಿ ಪತ್ತೆಯಾದ ಹಿನೆ್ನಲೆಯಲ್ಲಿ ತಲೆದಂಡ ತೆತ್ತಿದ್ದ ಭಾಸ್ಕರ್‌ರನ್ನು ಮರುನೇಮಕ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಸೌರ್ಕೆ: jayakirana
Jan 13, 2010
Subscribe to:
Post Comments (Atom)
No comments:
Post a Comment